ಆಸಿಸ್’ಗೆ ಚಮಕ್ ಕೊಟ್ಟ ಚೆಹಲ್; ಒಂದೇ ಓವರ್’ನಲ್ಲಿ ಇಬ್ಬರು ಔಟ್

Published : Jan 18, 2019, 10:14 AM IST
ಆಸಿಸ್’ಗೆ ಚಮಕ್ ಕೊಟ್ಟ ಚೆಹಲ್; ಒಂದೇ ಓವರ್’ನಲ್ಲಿ ಇಬ್ಬರು ಔಟ್

ಸಾರಾಂಶ

27 ರನ್’ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸಿಸ್’ಗೆ ಬಲ ತುಂಬಲು ಉಸ್ಮಾನ್ ಖ್ವಾಜಾ-ಶಾನ್ ಮಾರ್ಷ್ ಜೋಡಿ ನೆರವಾದರು. ಮೂರನೇ ವಿಕೆಟ್’ಗೆ ಈ ಜೋಡಿ 73 ರನ್’ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ಮುಟ್ಟಿಸಿದರು. 

ಮೆಲ್ಬರ್ನ್[ಜ.18]: ಮಣಿಕಟ್ಟು ಸ್ಪಿನ್ನರ್ ಯುಜುವೇಂದ್ರ ಚೆಹಲ್ ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಚೆನ್ನಾಗಿಯೇ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಾವೆಸೆದ ಮೊದಲ ಓವರ್’ನಲ್ಲೇ ಇಬ್ಬರು ಬ್ಯಾಟ್ಸ್’ಮನ್’ಗಳನ್ನು ಬಲಿ ಪಡೆಯುವ ಮೂಲಕ ಆಸಿಸ್’ಗೆ ಮರ್ಮಾಘಾತ ಮಾಡುವಲ್ಲಿ ಚೆಹಲ್ ಯಶಸ್ವಿಯಾಗಿದ್ದಾರೆ.

27 ರನ್’ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸಿಸ್’ಗೆ ಬಲ ತುಂಬಲು ಉಸ್ಮಾನ್ ಖ್ವಾಜಾ-ಶಾನ್ ಮಾರ್ಷ್ ಜೋಡಿ ನೆರವಾದರು. ಮೂರನೇ ವಿಕೆಟ್’ಗೆ ಈ ಜೋಡಿ 73 ರನ್’ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ಮುಟ್ಟಿಸಿದರು. ಈ ವೇಳೆ 24ನೇ ಓವರ್’ನಲ್ಲಿ ದಾಳಿಗಿಳಿದ ಚೆಹಾಲ್ ಎರಡನೇ ಎಸೆತದಲ್ಲಿ ಶಾನ್ ಮಾರ್ಷ್ ವಿಕೆಟ್ ಕಬಳಿಸಿದರು. ಮುನ್ನುಗ್ಗಿ ಬಾರಿಸುವ ಯತ್ನದಲ್ಲಿ ಮಾರ್ಷ್ ಸ್ಟಂಪೌಟ್ ಆಗಿ ಪೆವಿಲಿಯನ್ ಸೇರಿದರು. ಮಾರ್ಷ್ ಔಟ್ ಆಗುವ ಮುನ್ನ 54 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ 39 ರನ್ ಬಾರಿಸಿದರು. ಇದಾದ ಬಳಿಕ 4ನೇ ಎಸೆತದಲ್ಲಿ ಉಸ್ಮಾನ್ ಖ್ವಾಜಾ ಅವರನ್ನು ಕ್ಯಾಚ್’ಔಟ್ ಮಾಡುವ ಮೂಲಕ ಆಸಿಸ್’ಗೆ ಮತ್ತೊಂದು ಆಘಾತ ನೀಡಿದರು. ಖ್ವಾಜಾ 51 ಎಸೆತಗಳನ್ನು ಎದುರಿಸಿ 2 ಬೌಂಡರಿ ಸಹಿತ 34 ರನ್ ಬಾರಿಸಿದ್ದಾರೆ.

ಇದೀಗ ಆಸ್ಟ್ರೇಲಿಯಾ 25 ಓವರ್ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 105 ರನ್ ಬಾರಿಸಿದೆ.    
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?