ವಿಜಯ್ ಹಜಾರೆ ಟ್ರೋಫಿ: ಡೆಲ್ಲಿ ಮುಂಬೈ ಸೆಮೀಸ್’ಗೆ ಲಗ್ಗೆ

By Web DeskFirst Published Oct 15, 2018, 12:23 PM IST
Highlights

ಇಲ್ಲಿನ ಜಸ್ಟ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲುಬ್ಯಾಟ್ ಮಾಡಿದ ಬಿಹಾರ 28.2 ಓವರ್‌ಗಳಲ್ಲಿ ಕೇವಲ 69 ರನ್‌ಗಳಿಗೆ ಆಲೌಟ್ ಆಯಿತು.

ಬೆಂಗಳೂರು(ಅ.15): ಇಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಏಕದಿನ ಪಂದ್ಯಾವಳಿಯಲ್ಲಿ ಮುಂಬೈ ಮತ್ತು ದೆಹಲಿ ತಂಡಗಳು ಸೆಮಿಫೈನಲ್ ಹಂತಕ್ಕೇರಿವೆ.

ಮೊದಲ ಕ್ವಾರ್ಟರ್‌ನಲ್ಲಿ ಬಿಹಾರ ವಿರುದ್ಧ ಮುಂಬೈ 9 ವಿಕೆಟ್‌ಗಳ ಜಯ ಸಾಧಿಸಿದರೆ, 2ನೇ ಕ್ವಾರ್ಟರ್‌ನಲ್ಲಿ ದೆಹಲಿ, ಹರ್ಯಾಣ ವಿರುದ್ಧ 5 ವಿಕೆಟ್‌ಗಳ ಜಯ ಪಡೆದು ಉಪಾಂತ್ಯ ಪ್ರವೇಶಿಸಿದವು.
ಇಲ್ಲಿನ ಜಸ್ಟ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲುಬ್ಯಾಟ್ ಮಾಡಿದ ಬಿಹಾರ 28.2 ಓವರ್‌ಗಳಲ್ಲಿ ಕೇವಲ 69 ರನ್‌ಗಳಿಗೆ ಆಲೌಟ್ ಆಯಿತು. ಮುಂಬೈ ಪರ ತುಷಾರ್ 5, ಮುಲಾನಿ 3 ವಿಕೆಟ್ ಪಡೆದರು. ಈ ಅಲ್ಪ ಗುರಿ ಬೆನ್ನಟ್ಟಿದ ಮುಂಬೈ 12.3 ಓವರ್‌ಗಳಲ್ಲಿ 1 ವಿಕೆಟ್‌ಗೆ 70ರನ್‌ಗಳಿಸಿ ಜಯದ ನಗೆ ಬೀರಿತು.
ರೋಹಿತ್ ಶರ್ಮಾ (33) ರನ್‌ಗಳಿಸಿದರು.

ಸ್ಕೋರ್:

ಬಿಹಾರ 69/10,
ಮುಂಬೈ 70/1

ದೆಹಲಿಗೆ 5 ವಿಕೆಟ್ ಜಯ: 
ಮತ್ತೊಂದು ಕ್ವಾರ್ಟರ್‌ಫೈನಲ್‌ನಲ್ಲಿ ನಾಯಕ ಗೌತಮ್ ಗಂಭೀರ್ (104) ಸಿಡಿಸಿದ ಭರ್ಜರಿ ಶತಕದ ನೆರವಿನಿಂದ ದೆಹಲಿ ತಂಡ, ಹರ್ಯಾಣ ವಿರುದ್ಧ 5 ವಿಕೆಟ್‌ಗಳ ಗೆಲುವು ಸಾಧಿಸಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹರ್ಯಾಣ 49.1 ಓವರ್‌ಗಳಲ್ಲಿ 229 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ದೆಹಲಿ ತಂಡ 39.2 ಓವರ್‌ಗಳಲ್ಲಿ 5 ವಿಕೆಟ್‌ಗೆ 230 ರನ್‌ಗಳಿಸಿತು.

ಸಂಕ್ಷಿಪ್ತ ಸ್ಕೋರ್:

ಹರ್ಯಾಣ 229/10,
ದೆಹಲಿ 230/5

ಇಂದು 2 ಕ್ವಾರ್ಟರ್ ಪಂದ್ಯ
3ನೇ ಕ್ವಾರ್ಟರ್‌ಫೈನಲ್‌ನಲ್ಲಿ ಮಹಾರಾಷ್ಟ್ರ ತಂಡ, ಜಾರ್ಖಂಡ್ ತಂಡವನ್ನು ಎದುರಿಸಲಿದೆ. ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಮತ್ತೊಂದು ಕ್ವಾರ್ಟರ್‌ನಲ್ಲಿ ಹೈದ್ರಾಬಾದ್, ಆಂಧ್ರಪ್ರದೇಶ ಎದುರು ಸೆಣಸಲಿದೆ. ಪಂದ್ಯ ಜಸ್ಟ್ ಕ್ರಿಕೆಟ್ ಅಕಾಡೆಮಿ (ಜೆಸಿಎ) ಯಲ್ಲಿ ನಡೆಯಲಿದೆ. 

click me!