
ಸಿಡ್ನಿ(ಅ.28): ಕಳಂಕಿತ ಕ್ರಿಕೆಟಿಗ ಡೇವಿಡ್ ವಾರ್ನರ್, ಆಸ್ಪ್ರೇಲಿಯಾದ ಕ್ರಿಕೆಟಿಗನಿಂದಲೇ ಸ್ಲೆಡ್ಜಿಂಗ್‌ಗೆ ಒಳಾಗಿದ್ದಾರೆ. ಕ್ಲಬ್ ಕ್ರಿಕೆಟ್ ಟೂರ್ನಿಯೊಂದರಲ್ಲಿ ಆಡುತ್ತಿರುವ ವಾರ್ನರ್‌ರನ್ನು, ಆಸ್ಪ್ರೇಲಿಯಾ ಮಾಜಿ ಕ್ರಿಕೆಟಿಗ ಫಿಲ್ ಹ್ಯೂಸ್ ಸಹೋದರ ಜೇಸನ್ ಹ್ಯೂಸ್, ‘ದೇಶದ ಕ್ರಿಕೆಟ್‌ಗೆ ಕಳಂಕ ತಂದಿರುವುದು ನಾಚಿಕೆಗೇಡಿನ ಸಂಗತಿ’ ಎಂಬರ್ಥದ ರೀತಿಯಲ್ಲಿ ಸ್ಲೆಡ್ಜಿಂಗ್ ಮಾಡಿದ್ದಾರೆ.
ಇದನ್ನು ಓದಿ: ಆಸ್ಟ್ರೇಲಿಯಾ ಬಾಲ್ ಟ್ಯಾಂಪರಿಂಗ್ ಪ್ರಕರಣಕ್ಕೆ ಹೊಸ ಟ್ವಿಸ್ಟ್!
ಇದರಿಂದಾಗಿ ಬೇಸರಗೊಂಡು ಅಂಪೈರ್ ಬಳಿ ತೆರಳಿದ ವಾರ್ನರ್, ‘ನನಗೆ ಬೇಸರವಾಗಿದೆ. ಅಂಗಳದಿಂದ ಹೊರ ಹೋಗುತ್ತಿದ್ದೇನೆ’ ಎಂದು ಹೇಳಿ ಹೊರ ನಡೆದಿದ್ದಾರೆ. ಇದರಿಂದಾಗಿ ಆಟ ಕೆಲ ಕಾಲ ಸ್ಥಗಿತಗೊಂಡಿತು. ಬಳಿಕ ಎದುರಾಳಿ ವೆಸ್ಟರ್ನ್ ಸಬರ್ಬ್ಸ್ ತಂಡದ ಒತ್ತಾಯದಿಂದ ಅಂಗಳಕ್ಕೆ ಮರಳಿದ ವಾರ್ನರ್(157), ರಾಂಡ್ವಿಕ್ ಪಿಟರ್‌ಶ್ಯಾಮ್ ತಂಡದ ಪರ ಶತಕ ಸಿಡಿಸಿದರು.
ಇದನ್ನು ಓದಿ: ಗಾಯದ ಮೇಲೆ ಬರೆ ಎಳೆದಂತಾದ ವಾರ್ನರ್ ಪರಿಸ್ಥಿತಿ..!
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ವೇಳೆ ವಾರ್ನರ್, ಸ್ಮಿತ್ ಹಾಗೂ ಬೆನ್’ಕ್ರಾಪ್ಟ್ ಬಾಲ್ ಟ್ಯಾಂಪರಿಂಗ್ ಮಾಡಿ ನಿಷೇಧಕ್ಕೆ ಒಳಗಾಗಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.