ಆರ್ ವಿನಯ್ ಕುಮಾರ್ ನಾಯಕತ್ವದಲ್ಲಿ ಯಶಸ್ವಿಯಾಗಿ ಮುನ್ನಡೆದಿರುವ ಕರ್ನಾಟಕ ರಣಜಿ ತಂಡ ಇನ್ಮುಂದೆ ಯುವ ನಾಯಕನ ಸಾರಥ್ಯದಲ್ಲಿ ಮುನ್ನಡೆಯಲಿದೆ. ಕರ್ನಾಟಕ ತಂಡಕ್ಕೆ ಮನೀಶ್ ಪಾಂಡೆಯನ್ನು ನಾಯಕನಾಗಿ ಆಯ್ಕೆ ಮಾಡಲಾಗಿದೆ.
ಬೆಂಗಳೂರು(ಡಿ.30): ವೇಗಿ ಆರ್ ವಿನಯ್ ಕುಮಾರ್ ನಾಯಕತ್ವದಲ್ಲಿ ಕರ್ನಾಟಕ ರಣಜಿ ತಂಡ ಇತಿಹಾಸ ರಚಿಸಿದೆ. ಇದೀಗ ಅನುಭವಿ ವೇಗಿ ಬದಲು ಯುವ ನಾಯಕನಿಗೆ ನಾಯಕತ್ವ ನೀಡಲಾಗಿದೆ. ಮೂರು ಮಾದರಿಯಲ್ಲಿ ಕರ್ನಾಟಕ ತಂಡವನ್ನ ಮನೀಶ್ ಪಾಂಡೆ ಮುನ್ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಹೇಳಿದೆ.
ಇದನ್ನೂ ಓದಿ: ಮೆಲ್ಬರ್ನ್ ಟೆಸ್ಟ್ ಗೆಲುವಿನ ಬಳಿಕ ಪುಟ್ಟ ಬಾಲಕನಿಗೆ ಕೊಹ್ಲಿ ಭರ್ಜರಿ ಗಿಫ್ಟ್!
ಮನೀಶ್ ಪಾಂಡೆ ನಾಯಕತ್ವದಲ್ಲಿ ಈಗಾಗಲೇ ವಿಜಯ್ ಹಜಾರೆ ಟೂರ್ನಿ ಆಡಲಾಗಿದೆ. ಇದೀಗ ರಣಜಿ ಸೇರಿದಂತೆ ಮೂರು ಮಾದರಿಯಲ್ಲಿ ಕರ್ನಾಟಕ ತಂಡವನ್ನ ಮನೀಶ್ ಪಾಂಡೆ ಮುನ್ನಡೆಸಲಿದ್ದಾರೆ. ವಿನಯ್ ಕುಮಾರ್ ವೇಗಿಯಾಗಿ ತಂಡದಲ್ಲಿ ಪ್ರಮುಖ ಪಾತ್ರ ನಿರ್ವಹಸಲಿದ್ದಾರೆ.
ಇದನ್ನೂ ಓದಿ: ಗುಡ್ ಬೈ 2018: ಹೊಸ ಬದುಕಿಗೆ ಕಾಲಿಟ್ಟ ಕ್ರೀಡಾ ತಾರೆಯರು!
ನಾಯಕತ್ವ ಆಯ್ಕೆಯಲ್ಲಿ ನಾನು ಪಾಲ್ಗೊಂಡಿದ್ದೆ. ಯುವ ನಾಯಕನಿಗೆ ನಾಯಕತ್ವ ನೀಡೋ ಕುರಿತು ಚರ್ಚೆ ನಡೆಸಿದ್ದೇವು. ಮನೀಶ್ ಪಾಂಡೆ ಸೂಕ್ತ ಅನ್ನೋದು ನನ್ನ ನಿರ್ಧಾರವಾಗಿತ್ತು. ಇದಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕೂಡ ಸಹಮತ ವ್ಯಕ್ತಪಡಿಸಿತು ಎಂದು ವಿನಯ್ ಕುಮಾರ್ ಹೇಳಿದ್ದಾರೆ.