ತಂಡ ಬದಲಿಸದೇ ಐಪಿಎಲ್ ಆಡಿದ ಐವರುಆಟಗಾರರು ಇವರು!

By Web DeskFirst Published Jan 2, 2019, 5:50 PM IST
Highlights

ಐಪಿಎಲ್ ಟೂರ್ನಿಯಲ್ಲಿ ಆಟಗಾರರು ಒಂದೊಂದು ತಂಡದಲ್ಲಿ ಆಡಿದ್ದಾರೆ. ಹರಾಜಿನಲ್ಲಿ ಯಾವ ತಂಡ ಖರೀದಿ ಮಾಡುತ್ತೆ ಆ ತಂಡದ ಪರ ಕಣಕ್ಕಿಳಿಯುತ್ತಾರೆ. ಆದರೆ ಕೆಲ ಆಟಗಾರರು ಒಂದೇ ತಂಡದಲ್ಲಿ ಗುರುತಿಸಿಕೊಂಡಿದ್ದಾರೆ.

ಬೆಂಗಳೂರು(ಜ.02): ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸೋ ಆಟಗಾರನಿಗೆ ಬಹುಬೇಡಿಕೆ. ಪ್ರತಿ ಐಪಿಎಲ್ ಟೂರ್ನಿಗೂ ಮುನ್ನ ಆಟಗಾರರ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಸೇಲಾಗೋ ಮೂಲಕ ಹಲವು ಕ್ರಿಕೆಟಿಗರು ದಾಖಲೆ ಬರೆದಿದ್ದರೆ, ಕೆಲವರಿಗೆ  ಕೋಟಿ ಕೋಟಿ ಸುರಿದು ಅದ್ಬುತ ಆಟಗಾರರನ್ನ ತಂಡದಲ್ಲೇ ಉಳಿಸಿಕೊಳ್ಳುತ್ತೆ. 

ಹರಾಜಿನಲ್ಲಿ ಆಟಗಾರರು ಒಂದು ತಂಡದಿಂದ ಮತ್ತೊಂದು ತಂಡ ಸೇರಿಕೊಳ್ಳುವುದು ಸಹಜ. ಆದರೆ ಐಪಿಎಲ್ ಟೂರ್ನಿಯಲ್ಲಿ ಇದುವರೆಗೂ ತಂಡ ಬದಲಾಯಿಸದ ಐವರು ಆಟಗಾರರು ಇದ್ದಾರೆ. ವಿವರ ಇಲ್ಲಿದೆ.

ಇದನ್ನೂ ಓದಿ: ಟೀಂ ಇಂಡಿಯಾ ಮಾಜಿ ವೇಗಿಯ ರಾಯಲ್ ಎನ್‌ಫೀಲ್ಡ್ ಬೈಕ್ ಕದ್ದ ಕಳ್ಳರು ಅರೆಸ್ಟ್

ವಿರಾಟ್ ಕೊಹ್ಲಿ


ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ 2008ರಿಂದ ಒಂದೇ ತಂಡದಲ್ಲಿ ಗುರುತಿಸಿಕೊಂಡಿದ್ದಾರೆ. ಚೊಚ್ಚಲ ಆವೃತ್ತಿ ಐಪಿಎಲ್ ಟೂರ್ನಿಯಿಂದ ಹಿಡಿದು ಇದೀಗ 2019ರ ಐಪಿಎಲ್ ಟೂರ್ನಿಯಲ್ಲೂ ಕೊಹ್ಲಿ ಆರ್‌ಸಿಬಿ ಭಾಗವಾಗಿದ್ದಾರೆ. ಈಗಾಗಲೇ 11 ಆವೃತ್ತಿಗಳನ್ನ ಒಂದೇ ತಂಡದಲ್ಲಿ ಆಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಸಿಡ್ನಿ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟಿಸಿದ ಬಿಸಿಸಿಐ!

ಸುನಿಲ್ ನರೈನ್


ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಟಾರ್ ಸ್ಪಿನ್ನರ್ ಸುನಿಲ್ ನರೈನ್ 2012ರಲ್ಲಿ ಐಪಿಎಲ್‌ಗೆ ಎಂಟ್ರಿಕೊಟ್ಟಿದ್ದಾರೆ. 2012ರಿಂದ ಇಲ್ಲೀವರೆಗೂ ನರೈನ್ ಕೆಕೆಆರ್ ಪರ ಗುರುತಿಸಿಕೊಂಡಿದ್ದಾರೆ. 

ಕೀರನ್ ಪೊಲಾರ್ಡ್


ವೆಸ್ಟ್ ಇಂಡೀಸ್ ಆಲ್ರೌಂಡರ್ ಕೀರನ್ ಪೊಲಾರ್ಡ್ 2010ರಲ್ಲಿ ಐಪಿಎಲ್ ಟೂರ್ನಿಗೆ ಲಗ್ಗೆ ಇಟ್ಟಿದ್ದಾರೆ. 2010ರಲ್ಲಿ ಮುಂಬೈ ಇಂಡಿಯನ್ಸ್ ಪೊಲಾರ್ಡ್ ಖರೀದಿಸಿತು. ಬಳಿಕ ಪ್ರತಿ ಬಾರಿಯೂ ಪೊಲಾರ್ಡ್‌ರನ್ನ ತಂಡದಲ್ಲೇ ಉಳಿಸಿಕೊಂಡಿದೆ.

ಇದನ್ನೂ ಓದಿ: ಬಿಯರ್ ಕುಡಿಯುತ್ತಾ ಬಸ್ ಇಳಿದ ಶಾಸ್ತ್ರಿ: ಟ್ವಿಟರಿಗರಿಂದ ಫುಲ್ ಕ್ಲಾಸ್

ಲಸಿತ್ ಮಲಿಂಗ


ಐಪಿಎಲ್ ಟೂರ್ನಿಯ ಡೇಂಜರಸ್ ಬೌಲರ್ ಲಸಿತ್ ಮಲಿಂಗ ಮುಂಬೈ ಇಂಡಿಯನ್ಸ್ ತಂಡ ಬಿಟ್ಟು ಆಡಿಲ್ಲ. 2018ರಲ್ಲಿ ಮಲಿಂಗ ಮುಂಬೈ ತಂಡ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದರು. ಇದೀಗ 2019ರ ಐಪಿಎಲ್ ಟೂರ್ನಿಗೆ ಮತ್ತೆ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡಿದ್ದಾರೆ. ಈ ಮೂಲಕ 2008 ರಿಂದ ಸತತವಾಗಿ ಮುಂಬೈ ಇಂಡಿಯನ್ಸ್ ಪರ ಗುರುತಿಸಿಕೊಂಡಿದ್ದಾರೆ.

ಡೇವಿಡ್ ಮಿಲ್ಲರ್


ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್ 2012ರಲ್ಲಿ ಕಿಂಗ್ಸ್ ಇಲೆವೆನ್  ಪಂಜಾಬ್ ತಂಡ ಸೇರಿಕೊಂಡರು. 6 ಕೋಟಿ ನೀಡಿ ಮಿಲ್ಲರ್ ಖರೀದಿಸಿದ ಪಂಜಾಬ್ ಬಳಿಕ ರಿಟೈನ್ ಮಾಡಿಕೊಂಡಿದೆ. ಈ ಮೂಲಕ ಒಂದೇ ತಂಡದಲ್ಲಿ ಗುರುತಿಸಿಕೊಂಡಿದ್ದಾರೆ.

click me!