ಟೀಂ ಇಂಡಿಯಾ ಮಾಜಿ ವೇಗಿ, ಕರ್ನಾಟಕ ರಣಜಿ ತಂಡದ ಬೌಲಿಂಗ್ ಕೋಚ್ ಎಸ್ ಅರವಿಂದ್ ಹೊಚ್ಚ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್ ಕಳ್ಳತನ ಮಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಯಾರು ಈ ಖದೀಮರು? ಇಲ್ಲಿದೆ ವಿವರ.
ಬೆಂಗಳೂರು(ಜ.02): ಟೀಂ ಇಂಡಿಯಾ ಮಾಜಿ ವೇಗಿ, ಪ್ರಸಕ್ತ ಕರ್ನಾಟಕ ರಣಜಿ ತಂಡದ ಕೋಚ್ ಎಸ್ ಅರವಿಂದ್ ಅವರ ರಾಯಲ್ ಎನ್‌ಫೀಲ್ಡ್ ಬೈಕ್ ಕದ್ದ ಖದೀಮರನ್ನ ಅರೆಸ್ಟ್ ಮಾಡುವಲ್ಲಿ ಯಶವಂತಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಸಿಡ್ನಿ ಟೆಸ್ಟ್ ಪಂದ್ಯಕ್ಕೆ ಇಶಾಂತ್ ಔಟ್- ಅಶ್ವಿನ್ ಡೌಟ್-ಯಾಕೆ ಹೇಗೆ?
ಟಾಟಾ ಸ್ಕೈ ಅಲ್ಲಿ ಕೆಲಸ ಮಾಡಿತ್ತಿದ್ದ ವಾಹಿದ್ ಹಾಗೂ ಬಿಸಿಎ ವಿದ್ಯಾರ್ಥಿ ಅಬ್ರಹಾರ್ ಬಂಧಿತ ಆರೋಪಿಗಳು. ಡಿಸೆಂಬರ್‌ನಲ್ಲಿ ಎಸ್ ಅರವಿಂದ್ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿಸಿದ್ದರು. ರಣಜಿ ಪಂದ್ಯದಿಂದಾಗಿ ಕಳೆದ 20 ದಿನಗಳಿಂದ ಜಾಲಹಳ್ಳಿಯಲ್ಲಿರುವ ಮನೆ ಮುಂದೆ ಬೈಕ್ ನಿಲ್ಲಿಸಲಾಗಿತ್ತು. ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ನ್ನ ಖದೀಮರು ಕಳ್ಳತನ ಮಾಡಿದ್ದರು.
ಇದನ್ನೂ ಓದಿ: ಮಗಳು ಝೀವಾಳೊಂದಿಗೆ ಮಣ್ಣಲ್ಲಿ ಧೋನಿ ಆಟ
ಆರೋಪಿಗಳಾದ ವಾಹಿದ್ ಬುಲೆಟ್ ಬೈಕ್ ಕೂಡ ಕಳವು ಆಗಿತ್ತು. ಇದರಿಂದ ಕೋಪಗೊಂಡಿದ್ದ ವಾಹಿದ್ ರಾಯಲ್ ಎನ್‌ಫೀಲ್ಡ್ ಬೈಕ್ ಕಳ್ನತನಕ್ಕೆ ಇಳಿದಿದ್ದಾರೆ. ವಾಹಿದ್‌ಗೆ ಅಬ್ರಹಾರ್ ಕೂಡ ಸಾಥ್ ನೀಡಿದ್ದ. ಇವರಿಬ್ಬರು ಜೊತೆಯಾಗಿ ಕಳೆದ 40 ದಿನಗಳಲ್ಲಿ 20ಕ್ಕೂ ಹೆಚ್ಚು ಬೈಕ್ ಕಳ್ಳತನ ಮಾಡಿದ್ದರು.
ಹೊಸ ಬೈಕ್‌ಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು ಕೊನೆಗೆ ಬೈಕ್ ಕಳ್ಳತನದ ಜೊತೆ ಸರಗಳ್ಳತನಕ್ಕೆ ಇಳಿದಿದ್ದಾರೆ. ಯಶವಂತಪುರದ ಮತ್ತಿಕೆರೆಯಲ್ಲಿ ಮಹಿಳೆಯೊಬ್ಬರ 35 ಗ್ರಾಂ ಸರ ಕಸಿದು ಎಸ್ಕೇಪ್ ಆಗಿದ್ರು. ಸಿಸಿಟಿ ಆಧಾರದಲ್ಲಿ ಕಳ್ಳರನ್ನ ಪತ್ತೆ ಹಚ್ಚಿದ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ವೇಳೆ ಬೈಕ್ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ.
ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ವೇಗಿಯಾಗಿ ಗುರುತಿಸಿಕೊಂಡಿದ್ದ ಅರವಿಂದ್ 38 ಪಂದ್ಯಗಳಿಂದ 45 ವಿಕೆಟ್ ಕಬಳಿಸಿದ್ದಾರೆ. 2011ರಲ್ಲಿ 13 ಐಪಿಎಲ್ ಪಂದ್ಯಗಳಿಂದ 23 ವಿಕೆಟ್ ಕಬಳಿಸೋ ಮೂಲಕ ಯಶಸ್ವಿ ಬೌಲರ್ ಆಗಿ ಮಿಂಚಿದ್ದರು.