
ಕಿಂಗ್‌ಸ್ಟನ್(ಸೆ.15): ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) 2019ರ ಆವೃತ್ತಿಯಲ್ಲಿ ಶಾರೂಕ್ ಖಾನ್ ಒಡೆತನದ ಟ್ರಿನಿಬಾಗೋ ನೈಟ್ರೈಡರ್ಸ್ (ಟಿಕೆಆರ್) ತಂಡ ಶುಕ್ರವಾರ ಹೊಸ ದಾಖಲೆ ಬರೆಯಿತು.
ಗೇಲ್ ಶತಕ ನೀರಲ್ಲಿ ಹೋಮ, ಪಂದ್ಯದಲ್ಲಿ ದಾಖಲಾಯ್ತು ಬರೋಬ್ಬರಿ 37 ಸಿಕ್ಸರ್..!
ಜಮೈಕಾ ತಲ್ಹವಾಸ್ ತಂಡದ ವಿರುದ್ಧ ಮೊದಲು ಬ್ಯಾಟ್ ಮಾಡಿದ ಹಾಲಿ ಚಾಂಪಿಯನ್ ಟಿಕೆಆರ್, 20 ಓವರಲ್ಲಿ 2 ವಿಕೆಟ್ ನಷ್ಟಕ್ಕೆ 267 ರನ್ ಸಿಡಿಸಿತು. ಫ್ರಾಂಚೈಸಿ ಟಿ20 ಕ್ರಿಕೆಟ್‌ನಲ್ಲಿ ತಂಡವೊಂದು ದಾಖಲಿಸಿದ ಅತ್ಯಧಿಕ ಮೊತ್ತವಿದು. ಒಟ್ಟಾರೆ ಟಿ20ಯಲ್ಲಿ 3ನೇ ಗರಿಷ್ಠ ಮೊತ್ತ. ಕಾಲಿನ್ ಮನ್ರೋ 50 ಎಸೆತಗಳಲ್ಲಿ 96 ರನ್ ಸಿಡಿಸಿದರೆಮ ಲಿಂಡ್ಲೆ ಸಿಮೊನ್ಸ್ 42 ಎಸೆತದಲ್ಲಿ 86 ರನ್ ಬಾರಿಸಿದರು. ಇನ್ನು ಕೊನೆಯಲ್ಲಿ ನಾಯಕ ಕಿರನ್ ಪೊಲ್ಲಾರ್ಡ್ 17 ಅಜೇಯ 45 ರನ್ ಸಿಡಿಸುವ ಮೂಲಕ ಬೃಹತ್ ಮೊತ್ತ ಬಾರಿಸಲು ನೆರವಾದರು.
ಭಾರತ-ಸೌತ್ ಆಫ್ರಿಕಾ ಸರಣಿ; ಯಾರು ಮರೆತಿಲ್ಲ 4 ಅತಿ ದೊಡ್ಡ ವಿವಾದ!
2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 5 ವಿಕೆಟ್‌ಗೆ 263 ರನ್ ಗಳಿಸಿದ್ದು ಈ ವರೆಗಿನ ದಾಖಲಾಗಿತ್ತು. ಐರ್ಲೆಂಡ್ ವಿರುದ್ಧ 278 ರನ್ ಸಿಡಿಸಿದ್ದ ಆಫ್ಘಾನಿಸ್ತಾನ, ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ಮೊತ್ತದ ದಾಖಲೆ ಹೊಂದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.