ಗೇಲ್ ಶತಕ ನೀರಲ್ಲಿ ಹೋಮ, ಪಂದ್ಯದಲ್ಲಿ ದಾಖಲಾಯ್ತು ಬರೋಬ್ಬರಿ 37 ಸಿಕ್ಸರ್..!

By Web Desk  |  First Published Sep 11, 2019, 6:03 PM IST

ಕ್ರಿಸ್ ಗೇಲ್ ಪಾಲಿಗೆ ವಯಸ್ಸು ಕೇವಲ ಸಂಖ್ಯೆ ಅಷ್ಟೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. 39 ವಯಸ್ಸಿನಲ್ಲೂ ಸಿಡಿಲಬ್ಬರದ ಶತಕ ಸಿಡಿಸಿದ ಗೇಲ್ ತಂಡಕ್ಕೆ ಗೇಲ್ ಸಿಕ್ಕದಿರುವುದು ಮಾತ್ರ ವಿಪರ್ಯಾಸ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ಜಮೈಕಾ[ಸೆ.11]: ಕ್ರಿಸ್ ಗೇಲ್ ದಾಖಲೆಯ 22ನೇ ಟಿ20 ಶತಕದ ಹೊರತಾಗಿಯೂ ಕೆರಿಬಿಯನ್ ಪ್ರೀಮಿಯರ್ ಲೀಗ್’ನಲ್ಲಿ ಸೇಂಟ್ ಕಿಟ್ಸ್ ಅಂಡ್ ನೇವಿಸ್ ಪೇಟ್ರಿಯಾಟ್ಸ್ ತಂಡವು 4 ವಿಕೆಟ್’ಗಳಿಂದ ಜಮೈಕಾ ತಲ್ವಾಸ್ ತಂಡವನ್ನು ರೋಚಕವಾಗಿ ಮಣಿಸಿದೆ. ಇದರ ಜತೆಗೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಗರಿಷ್ಠ ರನ್ ಯಶಸ್ವಿ ಚೇಸ್ ಮಾಡಿದ ಸಾಧನೆ ಮಾಡಿದೆ.

ಭಾರತದ ಮೇಲೆ ಗೂಬೆ ಕೂರಿಸಿದ ಪಾಕ್ ಸಚಿವನಿಗೆ ಲಂಕಾ ಚಾಟಿ!

Tap to resize

Latest Videos

undefined

ಗೇಲ್ ತಂಡ ನೀಡಿದ್ದ 242 ರನ್’ಗಳ ಗುರಿ ಬೆನ್ನತ್ತಿದ ಸೇಂಟ್ ಕಿಟ್ಸ್ ಅಂಡ್ ನೇವಿಸ್ ಪೇಟ್ರಿಯಾಟ್ಸ್ ತಂಡ ಇನ್ನೂ ಏಳು ಎಸೆತಗಳು ಬಾಕಿ ಇರುವಂತೆಯೇ ಭರ್ಜರಿ ಜಯ ದಾಖಲಿಸಿದೆ. ಮೊದಲ ವಿಕೆಟ್’ಗೆ ನಾಯಕ ಡೇವೋನ್ ಥಾಮಸ್ ಹಾಗೂ ಎವಿನ್ ಲೆವಿಸ್ ಜೋಡಿ 85 ರನ್’ಗಳ ಜತೆಯಾಟವಾಡುವ ಮೂಲಕ ಸ್ಫೋಟಕ ಆರಂಭ ಒದಗಿಸಿತು. ಇನ್ನು ಎರಡನೇ ವಿಕೆಟ್’ಗೆ ಥಾಮಸ್ ಹಾಗೂ ಲೌರೆ ಇವನ್ಸ್ ನಡುವೆ 76 ರನ್’ಗಳ ಜತೆಯಾಟ ಮೂಡಿ ಬಂತು. ಕೊನೆಯಲ್ಲಿ ಫ್ಯಾಬ್ರಿಯನ್ ಅಲನ್ ಕೇವಲ 15 ಎಸೆತಗಳಲ್ಲಿ ಅಜೇಯ 37 ರನ್ ಚಚ್ಚುವ ಮೂಲಕ ಪೇಟ್ರಿಯಾಟ್ಸ್ ತಂಡದ ಗೆಲುವನ್ನು ಇನ್ನಷ್ಟು ಸುಲಭಗೊಳಿಸಿದರು. ಅಂದಹಾಗೆ ಈ ಪಂದ್ಯದಲ್ಲಿ ದಾಖಲೆಯ 37 ಸಿಕ್ಸರ್’ಗಳೂ ಸೇರಿದ್ದವು. 

ಇನ್ನೂ ಮುಗಿದಿಲ್ಲ ಅಂತಾರಾಷ್ಟ್ರೀಯ ಕರಿಯರ್ , ಪ್ರತಿಕ್ರಿಯೆ ನೀಡಿದ ಗೇಲ್!

ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಜಮೈಕಾ ತಲ್ವಾಸ್ ಆರಂಭಿಕ ಆಘಾತದ ಹೊರತಾಗಿಯೂ ಸಿಡಿಲಬ್ಬರದ ಆರಂಭ ಪಡೆಯಿತು. 39 ವರ್ಷದ ಕ್ರಿಸ್ ಗೇಲ್ ಅಬ್ಬರಕ್ಕೆ ಪೇಟ್ರಿಯಾಟ್ಸ್ ತಂಡ ಅಕ್ಷರಶಃ ನಲುಗಿ ಹೋಯಿತು. ಕೇವಲ 62 ಎಸೆತಗಳಲ್ಲಿ 10 ಸಿಕ್ಸರ್ ಹಾಗೂ 7 ಆಕರ್ಷಕ ಬೌಂಡರಿಗಳ ನೆರವಿನಿಂದ ಬರೋಬ್ಬರಿ 116 ರನ್ ಬಾರಿಸಿದರು. ಇದರೊಂದಿಗೆ ಟಿ20 ಕ್ರಿಕೆಟ್’ನಲ್ಲಿ 22 ಶತಕ ಹಾಗೂ 80 ಅರ್ಧಶತಕಗಳ ನೆರವಿನಿಂದ 12,952 ರನ್ ಬಾರಿಸಿದ್ದು, ಇನ್ನು ಕೇವಲ 48 ರನ್ ಬಾರಿಸಿದರೆ, ಚುಟುಕು ಕ್ರಿಕೆಟ್’ನಲ್ಲಿ 13 ಸಾವಿರ ರನ್ ಪೂರೈಸಿದ ಮೊದಲ ಕ್ರಿಕೆಟಿಗ ಎನ್ನುವ ಗೌರವಕ್ಕೆ ಭಾಜನರಾಗಲಿದ್ದಾರೆ.

ಗೇಲ್’ಗೆ ಉತ್ತಮ ಸಾಥ್ ನೀಡಿದ ಚಾಡ್ವಿಕ್ ವಾಲ್ಟನ್ ಕೇವಲ 36 ಎಸೆತಗಳಲ್ಲಿ 3 ಬೌಂಡರಿ ಹಾಗೂ 8 ಮುಗಿಲೆತ್ತರದ ಸಿಕ್ಸರ್’ಗಳ ನೆರವಿನಿಂದ 73 ರನ್ ಚಚ್ಚಿದರು. ಇದರ ಜತೆಗೆ ಮೂರನೇ ವಿಕೆಟ್’ಗೆ    162 ರನ್’ಗಳ ಜತೆಯಾಟ ನಿಭಾಯಿಸಿದರು.   
 

click me!