ಕಾಮನ್‌ವೆಲ್ತ್‌ ಗೇಮ್ಸ್ ಆತಿಥ್ಯ ರಾಷ್ಟ್ರ ಶೀಘ್ರದಲ್ಲೇ ಘೋಷಣೆ..?

By Kannadaprabha News  |  First Published Apr 9, 2024, 9:00 AM IST

2026ರ ಕ್ರೀಡಾಕೂಟ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿತ್ತು. ಆದರೆ ಆಸ್ಟ್ರೇಲಿಯಾ ಕಳೆದ ವರ್ಷ ಕ್ರೀಡಾಕೂಟ ಆಯೋಜನೆಯಿಂದ ಹಿಂದೆ ಸರಿದಿತ್ತು. ಬಳಿಕ ಮಲೇಷ್ಯಾ ಸೇರಿದಂತೆ ಇತರ ದೇಶಗಳು ಕೂಡಾ ವಿಪರೀತ ಖರ್ಚು ಕಾರಣಕ್ಕೆ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಲು ನಿರುತ್ಸಾಹ ತೋರಿದ್ದವು.


ಲಂಡನ್‌: 2026ರ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಆತಿಥ್ಯ ವಹಿಸುವ ದೇಶವನ್ನು ಆಯೋಜಕರು ಮುಂದಿನ ತಿಂಗಳು ಘೋಷಿಸುವ ಸಾಧ್ಯತೆಯಿದೆ. ಗೇಮ್ಸ್‌ ಆತಿಥ್ಯಕ್ಕೆ ಹಲವು ದೇಶಗಳಿಂದ ಪ್ರಸ್ತಾವಗಳು ಬಂದಿದ್ದಾಗಿ ಆಯೋಜಕರು ತಿಳಿಸಿದ್ದು, ಶೀಘ್ರವೇ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯೆತೆಯಿದೆ. 

2026ರ ಕ್ರೀಡಾಕೂಟ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿತ್ತು. ಆದರೆ ಆಸ್ಟ್ರೇಲಿಯಾ ಕಳೆದ ವರ್ಷ ಕ್ರೀಡಾಕೂಟ ಆಯೋಜನೆಯಿಂದ ಹಿಂದೆ ಸರಿದಿತ್ತು. ಬಳಿಕ ಮಲೇಷ್ಯಾ ಸೇರಿದಂತೆ ಇತರ ದೇಶಗಳು ಕೂಡಾ ವಿಪರೀತ ಖರ್ಚು ಕಾರಣಕ್ಕೆ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಲು ನಿರುತ್ಸಾಹ ತೋರಿದ್ದವು. ಈ ನಡುವೆ ಆತಿಥ್ಯ ರಾಷ್ಟ್ರ ಇನ್ನೂ ಖಚಿತವಾಗದ ಹಿನ್ನೆಲೆಯಲ್ಲಿ ಕ್ರೀಡಾಕೂಟ ವಿಳಂಬವಾಗಬಹುದು ಎಂದು ವರದಿಯಾಗಿದೆ.

Latest Videos

undefined

ಅಲ್ಟ್ರಾ ರನ್ನಿಂಗ್‌: ಭಾರತದ ಅಮರ್‌ಗೆ ಚಿನ್ನದ ಪದಕ

ಕ್ಯಾನ್‌ಬೆರ್ರಾ(ಆಸ್ಟ್ರೇಲಿಯಾ): ಇಲ್ಲಿ ನಡೆದ ಏಷ್ಯಾ-ಓಶಿಯಾನಿಯಾ ಅಲ್ಟ್ರಾ ರನ್ನಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅಮರ್‌ ಸಿಂಗ್‌ ದೇವಾಂಡ ಚಿನ್ನದ ಪದಕ ಗೆದ್ದಿದ್ದಾರೆ. 24 ಗಂಟೆಗಳ ಓಟದ ಸ್ಪರ್ಧೆಯಲ್ಲಿ ಅಮರ್‌ 272.537 ಕಿ.ಮೀ. ದೂರ ಕ್ರಮಿಸಿ ಬಂಗಾರ ಗೆಲ್ಲುವುದರ ಜೊತೆಗೆ, ತಮ್ಮದೇ ಹೆಸರಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಅವರು 2022ರಲ್ಲಿ 257.618 ಕಿ.ಮೀ. ದೂರ ಕ್ರಮಿಸಿ ದಾಖಲೆ ಬರೆದಿದ್ದರು. 

ಕಾನೂನಿನ ಲೋಪದಿಂದಾಗಿ ಫಿಕ್ಸಿಂಗ್ ಕೇಸ್‌ನಿಂದ ಶ್ರೀಶಾಂತ್ ಬಚಾವಾದರು! ಸ್ಪೋಟಕ ಮಾಹಿತಿ ಬಿಚ್ಚಿಟ್ಟ ತನಿಖಾಧಿಕಾರಿ

ಇದೇ ವೇಳೆ ಭಾರತದ ಪುರುಷರ ತಂಡವೂ ಚಿನ್ನ ಸಂಪಾದಿಸಿತು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಉಲ್ಲಾಸ್‌ ನಾರಾಯಣ(245.574 ಕಿ.ಮೀ) ಹಾಗೂ ಸೌರವ್‌ ರಂಜನ್‌(240.137) ಕ್ರಮವಾಗಿ 3 ಮತ್ತು 4ನೇ ಸ್ಥಾನಿಯಾದರು.

ಕೊಡವ ಕೌಟುಂಬಿಕ ಹಾಕಿ: 19 ತಂಡ ಮುಂದಿನ ಸುತ್ತಿಗೆ

ನಾಪೋಕ್ಲು: ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಸೋಮವಾರದ ಪಂದ್ಯಗಳಲ್ಲಿ ಐನಂಡ, ಬಿದ್ದಂಡ, ಐಚೆಟ್ಟಿರ, ಕಂಬೆಯಂಡ, ಚಂಗೇಟಿರ, ಚೋಕಿರ, ಮಂದನೆರವಂಡ ಸೇರಿದಂತೆ 19 ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸಿದವು. 

ಈ 4 ತಂಡಗಳು ಪ್ಲೇ ಆಫ್‌ಗೇರಲಿವೆ: ಅಚ್ಚರಿಯ ಭವಿಷ್ಯ ನುಡಿದ ನಟ ಅಕ್ಷಯ್ ಕುಮಾರ್

ಐನಂಡ ತಂಡವು ಚೇರಂಡ ತಂಡದ ವಿರುದ್ಧ 6-1 ಅಂತರದ ಭರ್ಜರಿ ಗೆಲುವು ಸಾಧಿಸಿತು. ಮೇಕೆರಿರ ತಂಡವು ಕಾಂಗೀರ ವಿರುದ್ಧ 6-2ರ ಅಂತರದ ಮುನ್ನಡೆ ಸಾಧಿಸಿತು. ಚೋಳಂಡ ವಿರುದ್ಧ ಬಿದ್ದಂಡ 3-1 ರಲ್ಲಿ ಜಯ ಸಾಧಿಸಿತು. ಮಾರ್ತಂಡ ವಿರುದ್ಧ ಐಚೆಟ್ಟಿರ ಟೈ ಬ್ರೇಕರ್‌ನಲ್ಲಿ 5 -4 ಅಂತರದ ಗೆಲುವು ಸಾಧಿಸಿತು. ಕೋಲು ಮಾದಂಡ ವಿರುದ್ಧ ಕಂಬೇಯಂಡ 4- 0 ಅಂತರದಿಂದ, ಪೋರಂಗಡ ವಿರುದ್ಧ ಮರುವಂಡ 4-0 ಅಂತರದಿಂದ, ಚೆಯ್ಯಂಡ ವಿರುದ್ಧ ಚೋಕಿರ 1-0 ಅಂತರದಿಂದ, ಕೋಲತಂಡ ವಿರುದ್ಧ ಮಂದನೆರವಂಡ 5- 0 ಅಂತರದಿಂದ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿದವು.
 

click me!