Commonwealth Games 2022: 5ನೇ ದಿನದಾಟ ಮುಕ್ತಾಯದ ಬಳಿಕ ಪದಕ ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?

By Naveen Kodase  |  First Published Aug 3, 2022, 1:00 PM IST

* ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮುಂದುವರಿದ ಭಾರತದ ಪದಕ ಬೇಟೆ
* ಇದುವರೆಗೂ 5 ಚಿನ್ನದ ಪದಕ ಜಯಿಸಿದ ಭಾರತ
* ಪದಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರೆದ ಆಸ್ಟ್ರೇಲಿಯಾ


ಬರ್ಮಿಂಗ್‌ಹ್ಯಾಮ್‌(ಆ.03): 22ನೇ ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟದ 5ನೇ ದಿನವಾದ ಮಂಗಳವಾರ ಭಾರತ ಮತ್ತೆರಡು ಬಂಗಾರದ ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಲಾನ್‌ ಬಾಲ್ಸ್‌ನಲ್ಲಿ ಭಾರತ ಮಹಿಳಾ ನಾಲ್ವರ ತಂಡವು ಐತಿಹಾಸಿಕ ಚಿನ್ನದ ಪದಕ ಜಯಿಸಿದರೇ, ಪುರುಷರ ಟೇಬಲ್‌ ಟೆನಿಸ್‌ ವಿಭಾಗದಲ್ಲಿ ಚಿನ್ನದ ಪದಕ ಉಳಿಸಿಕೊಳ್ಳುವಲ್ಲಿ ಭಾರತ ತಂಡವು ಯಶಸ್ವಿಯಾಗಿದೆ. ಇನ್ನು ಭಾರತೀಯ ಮಿಶ್ರ ಬ್ಯಾಡ್ಮಿಂಟನ್ ತಂಡವು ಫೈನಲ್‌ನಲ್ಲಿ ಮಲೇಷ್ಯಾ ಎದುರು ಮುಗ್ಗರಿಸುವ ಮೂಲಕ ಬೆಳ್ಳಿ ಪದಕ ಜಯಿಸುವಲ್ಲಿ ಯಶಸ್ವಿಯಾಗಿದೆ.

ಸದ್ಯ ಭಾರತ, ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 5 ಚಿನ್ನ, 5 ಬೆಳ್ಳಿ ಹಾಗೂ 3 ಕಂಚಿನ ಪದಕಗಳ ಸಹಿತ 13 ಪದಕಗಳನ್ನು ಜಯಿಸಿದ್ದು, ಒಟ್ಟಾರೆ ಪದಕ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದಿವೆ. ಇದೀಗ ಮಂಗಳವಾರದ ಸ್ಪರ್ಧೆ ಮುಕ್ತಾಯದ ವೇಳೆಗೆ ಪದಕ ಪಟ್ಟಿಯಲ್ಲಿ ಯಾವ ರಾಷ್ಟ್ರ ಯಾವ ಸ್ಥಾನದಲ್ಲಿದೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

Tap to resize

Latest Videos

Commonwealth Games 2022: ಬೆಳ್ಳಿ ಪದಕ ಗೆದ್ದ ಭಾರತ ಬ್ಯಾಡ್ಮಿಂಟನ್ ಮಿಶ್ರ ತಂಡ..!

ಸ್ಥಾನ- ದೇಶ- ಪದಕಗಳ ವಿವರ

1. ಆಸ್ಟ್ರೇಲಿಯಾ: 42 ಚಿನ್ನ, 32 ಬೆಳ್ಳಿ, 32 ಕಂಚು: ಒಟ್ಟು 106 ಪದಕಗಳು 
2. ಇಂಗ್ಲೆಂಡ್: 31 ಚಿನ್ನ, 34 ಬೆಳ್ಳಿ, 21 ಕಂಚು: ಒಟ್ಟು 86 ಪದಕಗಳು
3. ನ್ಯೂಜಿಲೆಂಡ್: 13 ಚಿನ್ನ, 7 ಬೆಳ್ಳಿ, 6 ಕಂಚು: ಒಟ್ಟು 26 ಪದಕಗಳು
4. ಕೆನಡಾ: 11 ಚಿನ್ನ, 16 ಬೆಳ್ಳಿ, 19 ಕಂಚು: ಒಟ್ಟು 46 ಪದಕಗಳು
5. ದಕ್ಷಿಣ ಆಫ್ರಿಕಾ: 6 ಚಿನ್ನ, 5 ಬೆಳ್ಳಿ, 5 ಕಂಚು: ಒಟ್ಟು 16 ಪದಕಗಳು
6. ಭಾರತ: 5 ಚಿನ್ನ, 5 ಬೆಳ್ಳಿ, 3 ಕಂಚು: ಒಟ್ಟು 13 ಪದಕಗಳು
7. ಸ್ಕಾಟ್ಲೆಂಡ್: 3 ಚಿನ್ನ, 8 ಬೆಳ್ಳಿ, 15 ಕಂಚು: ಒಟ್ಟು 26 ಪದಕಗಳು
8. ವೇಲ್ಸ್: 3 ಚಿನ್ನ, 2 ಬೆಳ್ಳಿ, 8 ಕಂಚು: ಒಟ್ಟು 13 ಪದಕಗಳು
9. ಮಲೇಷ್ಯಾ: 3 ಚಿನ್ನ, 2 ಬೆಳ್ಳಿ, 3 ಕಂಚು: ಒಟ್ಟು 8 ಪದಕಗಳು
10. ನೈಜೀರಿಯಾ: 3 ಚಿನ್ನ, 1 ಬೆಳ್ಳಿ, 4 ಕಂಚು: ಒಟ್ಟು 8 ಪದಕಗಳು
11. ಸೈಪ್ರಸ್: 2 ಚಿನ್ನ, 1 ಬೆಳ್ಳಿ, 4 ಕಂಚು: ಒಟ್ಟು 7 ಪದಕಗಳು
12. ಉಗಾಂಡ: 2 ಚಿನ್ನ: ಒಟ್ಟು 2 ಪದಕಗಳು
13. ಸಿಂಗಾಪುರ: 1 ಚಿನ್ನ, 3 ಬೆಳ್ಳಿ, 1 ಕಂಚು: ಒಟ್ಟು 5 ಪದಕಗಳು
14. ಸಮೊಹ: 1 ಚಿನ್ನ, 1 ಬೆಳ್ಳಿ: ಒಟ್ಟು 2 ಪದಕಗಳು
15. ಬರ್ಮೊಡ: 1 ಚಿನ್ನ : ಒಟ್ಟು 1 ಪದಕ
16. ನಾರ್ಥನ್ ಐಲ್ಯಾಂಡ್‌: 2 ಬೆಳ್ಳಿ, 3 ಕಂಚು: ಒಟ್ಟು 5 ಪದಕಗಳು
17. ಕೀನ್ಯಾ: 2 ಬೆಳ್ಳಿ, 2 ಕಂಚು: ಒಟ್ಟು 4 ಪದಕಗಳು
18. ಫಿಜಿ: 2 ಬೆಳ್ಳಿ, 1 ಕಂಚು: ಒಟ್ಟು 3 ಪದಕಗಳು
19. ಮಾರಿಷಸ್: 1 ಬೆಳ್ಳಿ, 1 ಕಂಚು: ಒಟ್ಟು 2 ಪದಕಗಳು
20. ಗ್ಯುರ್ನೆಸೆ: 1 ಬೆಳ್ಳಿ: ಒಟ್ಟು 1 ಪದಕ
21. ಜಮೈಕಾ: 1 ಬೆಳ್ಳಿ: ಒಟ್ಟು 1 ಪದಕ
22. ಪಪುವಾ ನ್ಯೂಗಿನಿ: 1 ಬೆಳ್ಳಿ: ಒಟ್ಟು 1 ಪದಕ
23. ತಾಂಜೇನಿಯಾ: 1 ಬೆಳ್ಳಿ: ಒಟ್ಟು 1 ಪದಕ
24. ದ ಜಾಂಬಿಯಾ: 1 ಬೆಳ್ಳಿ: ಒಟ್ಟು 1 ಪದಕ
25. ಮಾಲ್ಟಾ: 1 ಕಂಚು: ಒಟ್ಟು 1 ಪದಕ
26. ನಮೀಬಿಯಾ: 1 ಕಂಚು ಒಟ್ಟು 1 ಪದಕ
27. ನೌರು: 1 ಕಂಚು ಒಟ್ಟು 1 ಪದಕ
28. ಶ್ರೀಲಂಕಾ: 1 ಕಂಚು: ಒಟ್ಟು 1 ಪದಕ

click me!