Commonwealth Games 2022: ಕಂಚಿನ ಪದಕ ಗೆದ್ದು ಬೀಗಿದ ವೇಟ್‌ಲಿಫ್ಟರ್ ಲವ್‌ಪ್ರೀತ್ ಸಿಂಗ್

By Naveen Kodase  |  First Published Aug 3, 2022, 4:14 PM IST

ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಒಲಿದ ಮತ್ತೊಂದು ಪದಕ
109 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್ 355 ಕೆಜಿ ಭಾರ ಎತ್ತಿದ ಲವ್‌ಪ್ರೀತ್ ಸಿಂಗ್
24 ವರ್ಷದ ಅಮೃತ್‌ಸರ ಮೂಲದ ವೇಟ್‌ಲಿಫ್ಟರ್‌ ಲವ್‌ಪ್ರೀತ್ ಸಿಂಗ್


ಬರ್ಮಿಂಗ್‌ಹ್ಯಾಮ್‌(ಆ.03): ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟದ 6ನೇ ದಿನದಾರಂಭದಲ್ಲೇ ಭಾರತದ 24 ವರ್ಷದ ವೇಟ್‌ಲಿಫ್ಟರ್ ಲವ್‌ಪ್ರೀತ್ ಸಿಂಗ್ ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪುರುಷರ 109 kg ವಿಭಾಗದ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಲವ್‌ಪ್ರೀತ್ ಸಿಂಗ್ ಒಟ್ಟು 355 ಭಾರ ಎತ್ತುವ ಮೂಲಕ ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೊದಲ ಸ್ನ್ಯಾಚ್‌ನಲ್ಲಿ ಅಮೃತ್‌ಸರ್ ಮೂಲದ ಲವ್‌ಪ್ರೀತ್ ಸಿಂಗ್ ಅನಾಯಾಸವಾಗಿ 157 kg ವೇಟ್‌ಲಿಫ್ಟ್ ಮಾಡಿದರು. ಇನ್ನು ಎರಡನೇ ಸ್ನ್ಯಾಚ್‌ನಲ್ಲಿ 4 kg ಹೆಚ್ಚಿಗೆ ಅಂದರೆ 161 ಭಾರ ಎತ್ತುವಲ್ಲಿ ಯಶಸ್ವಿಯಾದರು. ಇನ್ನು ಮೂರನೇ ಹಾಗೂ ಕೊನೆಯ ಪ್ರಯತ್ನದಲ್ಲಿ ಲವ್‌ಪ್ರೀತ್ ಸಿಂಗ್ 163 kg ಭಾರ ಎತ್ತುವ ಮೂಲಕ ಸ್ನ್ಯಾಚ್‌ ಸ್ಪರ್ಧೆ ಮುಕ್ತಾಯದ ವೇಳೆಗೆ ಜಂಟಿ ಎರಡನೇ ಸ್ಥಾನ ಪಡೆದರು. ಕೆನಡಾದ ಪಿರ್ರೆ ಬೆಸೆಟ್ಟೆ ಕೂಡಾ 163 kg ವೇಟ್‌ಲಿಫ್ಟ್ ಮಾಡುವ ಮೂಲಕ ಲವ್‌ಪ್ರೀತ್ ಸಿಂಗ್ ಜತೆ ಜಂಟಿ ಎರಡನೇ ಸ್ಥಾನ ಹಂಚಿಕೊಂಡರು. ಸಮೊಹದ ಜಾಕ್‌ ಒಪ್ಲಾಂಜ್ 164 kg ಭಾರ ಎತ್ತುವ ಮೂಲಕ ಅಗ್ರಸ್ಥಾನ ಕಾಯ್ದಕೊಂಡರು

Tap to resize

Latest Videos

Commonwealth Games 2022: 5ನೇ ದಿನದಾಟ ಮುಕ್ತಾಯದ ಬಳಿಕ ಪದಕ ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?

ಇನ್ನು ಕ್ಲೀನ್ ಅಂಡ್ ಜರ್ಕ್‌ ವಿಭಾಗದಲ್ಲಿ ಲವ್‌ಪ್ರೀತ್ ಸಿಂಗ್ ಮೊದಲ ಪ್ರಯತ್ನದಲ್ಲಿ ಸುಲಭವಾಗಿ 185 kg ಭಾರ ಎತ್ತುವ ಮೂಲಕ ಉತ್ತಮ ಆರಂಭವನ್ನು ಪಡೆದರು. ಇನ್ನು ಎರಡನೇ ಕ್ಲೀನ್ ಅಂಡ್‌ ಜರ್ಕ್‌ ಸ್ಪರ್ಧೆಯಲ್ಲಿ 189 kg ಭಾರ ಎತ್ತಿದರು. ಇನ್ನು ಮೂರನೇ ಹಾಗೂ ಕೊನೆಯ ಪ್ರಯತ್ನದಲ್ಲಿ 192 kg ಭಾರ ಎತ್ತುವ ಮೂಲಕ ಲವ್‌ಪ್ರೀತ್ ಸಿಂಗ್ ಪದಕ ಗೆದ್ದು ಬೀಗಿದರು.

Team 🇮🇳 wins its 9th 🏋🏻‍♀️ medal through Lovepreet Singh’s 🥉 in the Men’s 109 KG Category at ! pic.twitter.com/PXijZhHIrK

— Team India (@WeAreTeamIndia)

ಪಂಜಾಬ್ ಮೂಲದ ಲವ್‌ಪ್ರೀತ್ ಸಿಂಗ್, ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಈ ಬಾರಿಯ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ 9ನೇ ಪದಕ ಗೆದ್ದು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಲವ್‌ಪ್ರೀತ್ ಸಿಂಗ್ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಸ್ನ್ಯಾಚ್‌(163) ಹಾಗೂ ಕ್ಲೀನ್‌ ಅಂಡ್ ಜರ್ಕ್‌(192) ವಿಭಾಗದಲ್ಲಿ ಹೊಸ ರಾಷ್ಟ್ರೀಯ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ. 

ಆಸ್ಟ್ರೇಲಿಯಾದ ಜಾಕ್ಸನ್‌ ಜಾರ್ಜ್‌ ಸ್ನ್ಯಾಚ್ ಸ್ಪರ್ಧೆಯಲ್ಲಿ ಕೇವಲ 145 ಕೆಜಿ ಭಾರ ಮಾತ್ರ ಎತ್ತಲು ಯಶಸ್ವಿಯಾಗಿದ್ದರು. ಆದರೆ ಕ್ಲೀನ್ ಅಂಡ್ ಜರ್ಕ್‌ ವಿಭಾಗದಲ್ಲಿ 200+ ಕೆಜಿ ಭಾರ ಎತ್ತುವ ಮೂಲಕ ಭಾರತೀಯ ಪಾಳಯದಲ್ಲಿ ನಡುಕ ಹುಟ್ಟಿಸಿದರು. ಆದರೆ ಕೊನೆಯ ಕ್ಲೀನ್ ಅಂಡ್ ಜರ್ಕ್ ವಿಭಾಗದಲ್ಲಿ 211 ಕೆಜಿ ಭಾರ ಎತ್ತಲು ವಿಫಲವಾದ ಬೆನ್ನಲ್ಲೇ ಲವ್‌ಪ್ರೀತ್ ಸಿಂಗ್ ಅವರ ಕಂಚಿನ ಪದಕ ಖಚಿತವಾಯಿತು.

click me!