ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾದ ಉಪಾಧ್ಯಕ್ಷ ಪುಲ್ಲೇಲ ಗೋಪಿಚಂದ್ , ಶಟ್ಲರ್ ಪಿ ಸಾಯಿ ಪ್ರಣೀತ್ ಸಮ್ಮುಖದಲ್ಲಿ ಹೊಸ ಸ್ಪೋರ್ಟ್ಸ್ ಆ್ಯಪ್‌ಗೆ ಚಾಲನೆ ಸಿಕ್ಕಿದೆ. ಎಲ್ಲಾ ಕ್ರೀಡೆಗಳ ಮಾಹಿತಿ ಒಂದೇ ವೇದಿಕೆಯಲ್ಲಿ ಲಭ್ಯವಾಗಿಲಿದೆ.
ಬೆಂಗಳೂರು(ಆ.03): ಹೊಚ್ಚ ಹೊಸ ಕ್ರಿಡಾ ಮಾಧ್ಯಮ ಮತ್ತು ಟೆಕ್ ಸ್ಟಾರ್ಟ್-ಅಪ್ 'WhatsInTheGameಗೆ ಅದ್ಧೂರಿ ಚಾಲನೆ ದೊರೆತಿದೆ. ಖ್ಯಾತ ಶಟ್ಲರ್ ಪಿ. ಸಾಯಿ ಪ್ರಣೀತ್ ಚಾಲನೆ ನೀಡಿದ್ದಾರೆ. ಸಂಸ್ಥಾಪಕ ಅನಿಲ್ ಕುಮಾರ್ ಮಮಿದಾಳ, ಇಜೆಬಿ ಪ್ರಮೀಳಾ ಸಮ್ಮುಖದಲ್ಲಿ ಹೊಸ ಆ್ಯಪ್‌ಗೆ ಚಾಲನೆ ನೀಡಲಾಗಿದೆ. ವಾಟ್ಸ್ ಇನ್ ದ ಗೇಮ್ ವೆಬ್ 3.0 ಮಾಧ್ಯಮವಾಗಿದ್ದು, ಮೆಟಾವರ್ಸ್ ಸ್ಪೋರ್ಟ್ಸ್ ಅಪ್ಲಿಕೇಶನ್ ನಿಮಗೆ 60 ಅಥವಾ ಅದಕ್ಕೂ ಕಡಿಮೆ ಪದಗಳಲ್ಲಿ ಕಿರು ಸುದ್ದಿಯನ್ನು ನೀಡುತ್ತದೆ. ಪಂದ್ಯಾವಳಿಗಳ ವೇಳಾಪಟ್ಟಿಗಳು ಮತ್ತು ಎಲ್ಲ ಜಾಗತಿಕ ಕ್ರಿಡೆಗಳ ಫಲಿತಾಂಶ - ಅಂಕಪಟ್ಟಿ ಸಹಿತ ಎಲ್ಲ ಕ್ರೀಡಾ ಸುದ್ದಿಗಳಿಗೆ ನೀವು ಭೇಟಿ ನೀಡಬೇಕಾದ ಏಕೈಕ ತಾಣ ಇದಾಗಿದೆ. ಸ್ಟಾರ್ಟ್-ಅಪ್ ಬಿಡುಗಡೆ ಸಮಾರಂಭದಲ್ಲಿ ತೆಲಂಗಾಣದ ಕೈಗಾರಿಕೆಗಳು, ವಾಣಿಜ್ಯ ಮತ್ತು ಐಟಿ ಖಾತೆ ಸಚಿವ ಕೆ.ಟಿ. ರಾಮರಾವ್, ಭಾರತೀಯ ಬ್ಯಾಡ್ಮಿಂಟನ್ ತಂಡದ ಪ್ರಧಾನ ಕೋಚ್ ಮತ್ತು ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾದ ಉಪಾಧ್ಯಕ್ಷ ಪುಲ್ಲೇಲ ಗೋಪಿಚಂದ್, ತೆಲಂಗಾಣದ ಸೆರಿಲಿಂಗಂಪಲ್ಲಿ ಕ್ಷೇತ್ರದ ಶಾಸಕರಾಗಿರುವ ಅರೆಕಪುಡಿ ಗಾಂಧಿ, ತೆಲಂಗಾಣ ಸರ್ಕಾರದ ಕೈಗಾರಿಕೆಗಳು ಮತ್ತು ವಾಣಿಜ್ಯ, ಮತ್ತು ಐಟಿ ಇಲಾಖೆ ಪ್ರಧಾನ ಕಾರ್ಯದರ್ಶಿ ಜಯೇಶ್ ರಂಜನ್ ಪಾಲ್ಗೊಂಡಿದ್ದರು.
ಕ್ರೀಡೆಯ ಸಮಗ್ರ ವಿಚಾರಗಳಿಗೆ ಸಂಬಂಧಿಸಿ ಡಿಜಿಟಲ್ ಅಪ್ಲಿಕೇಶನ್ WhatsInTheGame ಪ್ರಾರಂಭಿಸಿದ್ದಕ್ಕಾಗಿ ಸಾಯಿ ಪ್ರಣೀತ್, ಅನಿಲ್ ಕುಮಾರ್ ಅವರನ್ನು ಗಣ್ಯರು ಅಭಿನಂದಿಸಿದರು. ಸ್ಟಾರ್ಟ್ ಅಪ್ ಉದ್ಯಮಗಳಲ್ಲಿ ಹೈದರಾಬಾದ್ ಈಗ ವಿಜೃಂಭಿಸುತ್ತಿದೆ. ಪ್ರತಿಭಾವಂತರ ತಂಡದ ಈ ಪ್ರಯತ್ನ ಶ್ಲಾಘನೀಯವಾಗಿದೆ. ಈ ವೆಬ್‍ಸೈಟ್ ಅನಾವರಣದ ಜತೆಗೆ ಮುತ್ತಿನ ನಗರಿಯ ಖ್ಯಾತಿಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ ಎಂದು ಸಚಿವ ಕೆ.ಟಿ. ರಾಮರಾವ್ ಹೇಳಿದರು.
ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಗೋಪಿಚಂದ್ ಬೆಂಬಲಿತ ಧ್ಯಾನಾ ಜೊತೆ ಸಹಭಾಗಿತ್ವ ಘೋಷಿಸಿದ IOA!
ಜಗತ್ತು ವೇಗವಾಗಿ ಮತ್ತು ನಿರಂತರವಾಗಿ ಬದಲಾಗುತ್ತಿದೆ. ಜನರಿಗೆ ಸಮಯ ಬಹಳ ಕಡಿಮೆ ಇದೆ ಮತ್ತು ಅವರು ಹೆಚ್ಚು ಹೊತ್ತು ಕಾರ್ಯನಿರತರಾಗಿರುತ್ತಾರೆ. ವಿವಿಧ ಕ್ರೀಡೆಗಳ ಕುರಿತು ಓದಲು ಮತ್ತು ನೋಡಲು ಬೇರೆ ಬೇರೆ ಅಪ್ಲಿಕೇಶನ್‍ಗಳು ಅಥವಾ ವೆಬ್‍ಸೈಟ್‍ಗಳನ್ನು ಅನುಸರಿಸುವುದು ಅವರಿಗೆ ಕಷ್ಟ ಸಾಧ್ಯ. ಈ ಪ್ರಯತ್ನಗಳಲ್ಲಿ ತಮ್ಮ ಆಯ್ಕೆಯ ವಿಷಯಗಳನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ದೇಶದಲ್ಲಿ 75ಕ್ಕೂ ಹೆಚ್ಚು ಬಗೆಯ ಕ್ರೀಡೆಗಳಿದ್ದರೂ, ನಾವು ಬಹಳ ಸೀಮಿತವಾದ ಕ್ರೀಡಾ ವಿಷಯಗಳನ್ನು ನೋಡುತ್ತೇವೆ.
ಈ ಪ್ರವೃತ್ತಿಯನ್ನು ಸಕಾರಾತ್ಮಕವಾಗಿ ಬದಲಾಯಿಸಲು ಈ ತಂಡವು ಅವಿರತವಾಗಿ ಶ್ರಮಿಸಿ, ಪ್ರತಿಯೊಬ್ಬ ಅಭಿಮಾನಿ ಮತ್ತು ಕ್ರೀಡಾಪಟುಗಳಿಗೆ ಹೊಸ ದೃಷ್ಟಿಕೋನ ಮತ್ತು ಪರಿಹಾರವನ್ನು ನೀಡುವ ಅಪ್ಲಿಕೇಶನ್ ಸಿದ್ಧಪಡಿಸಿದೆ. ಆರಂಭಿಕ ಆವೃತ್ತಿಯಲ್ಲಿ, WhatsInTheGame ನಿಮಗೆ ಒಲಿಂಪಿಕ್, ಪ್ಯಾರಾ, ನಾನ್-ಒಲಿಂಪಿಕ್ ಕ್ರೀಡೆಗಳು ಮತ್ತು ಚಳಿಗಾಲದ ಕ್ರೀಡಾಕೂಟಗಳ ಕಿರುಸುದ್ದಿಗಳು, ವೇಳಾಪಟ್ಟಿಗಳು ಮತ್ತು ಫಲಿತಾಂಶಗಳ ಪಟ್ಟಿಯನ್ನು ಸರಳವಾಗಿ ವೀಕ್ಷಿಸುವ ಆಯ್ಕೆಯೊಂದಿಗೆ ಒದಗಿಸುತ್ತದೆ. ಎಲ್ಲ ಕ್ರೀಡೆಗಳ ಬಗ್ಗೆಯೂ ನೀವು ಅತ್ಯಂತ ಕಡಿಮೆ ಸಮಯದಲ್ಲಿ ಓದಬಹುದು ಹಾಗೂ ವೀಡಿಯೋಗಳನ್ನು ನೋಡಬಹುದು. ನೀವು ಇಷ್ಟಪಡುವ ಹಲವು ಕ್ರೀಡೆಗಳ ವಿಷಯಗಳು ಒಂದೇ ವೇದಿಕೆಯಲ್ಲಿ ಲಭ್ಯವಿವೆ. ಇದು ಕೇವಲ ಆರಂಭವಾಗಿದ್ದು, ಸಂಭಾವ್ಯ ವೈಶಿಷ್ಟ್ಯಗಳು ಮತ್ತು ನವೀಕರಣಗಳ ಮೇಲೆ ಕೊನೆಯಿಲ್ಲದಂತೆ ಶ್ರಮಿಸುತ್ತಿದ್ದೇವೆ. ಇದು ಜಾಗತಿಕವಾಗಿ ಕ್ರೀಡಾ ಮಾಧ್ಯಮ ಮತ್ತು ಟೆಕ್ ಉದ್ಯಮವನ್ನು ಅಡ್ಡಿಪಡಿಸುತ್ತದೆ ಎಂಬ ಖಚಿತ ವಿಶ್ವಾಸ ನಮಗಿದೆ.
ಪುಲ್ಲೇಲ ಆಲ್ ಇಂಗ್ಲೆಂಡ್ ಚಾಂಪಿಯನ್ ಗರಿಗೆ 20 ವರ್ಷ; ಭಾರತದ ಬ್ಯಾಡ್ಮಿಂಟನ್‌ಗೆ ಹೊಸ ಸ್ವರ್ಶ
ನಮ್ಮ ಕನಸೊಂದು ನನಸಾಗಿರುವ ಅದ್ಭುತ ದಿನವಿದು. ಇದನ್ನು ಇನ್ನೂ ದೊಡ್ಡದಾಗಿ ಬೆಳೆಸಲು ಮತ್ತು ನಮ್ಮಂತೆಯೇ ಕ್ರೀಡೆಯನ್ನು ಪ್ರೀತಿಸುವ ಜನರಿಗೆ ಬೇಕಾದ ಎಲ್ಲ ವಿಷಯಗಳೂ ಲಭ್ಯವಾಗುವಂತೆ ಮಾಡಲು ನಮ್ಮ ಪ್ರಯತ್ನ ನಿರಂತರವಾಗಿರುತ್ತದೆ. ಕ್ರೀಡಾಪ್ರೇಮಿಗಳಿಗೆ ಈ ಅಪ್ಲಿಕೇಶನ್ ಸಂಪೂರ್ಣ ಹೊಸ ಆಯಾಮದೊಂದಿಗೆ ಲಭ್ಯವಿದೆ. ಈಗಾಗಲೇ ನಾವು ಮೆಟಾವರ್ಸ್ ಮತ್ತು ವೆಬ್ 3.0 ತಂತ್ರಜ್ಞಾನಗಳಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಲು ತುಂಬಾ ಹೆಮ್ಮೆಪಡುತ್ತೇನೆ ಎಂದು ಸಂಸ್ಥಾಪಕ ಅನಿಲ್ ಕುಮಾರ್ ಮಮಿದಾಳ ಹೇಳಿದ್ದಾರೆ.
ಕ್ರೀಡಾಪಟು ಮತ್ತು ಕ್ರೀಡಾ ಪ್ರೇಮಿಯಾಗಿ ಈ ಪಯಣದ ಭಾಗವಾಗಿದ್ದೇನೆ, ಚಂದ್ರನ ಮೇಲಿರುವಂತೆ ನನಗೆ ಭಾಸವಾಗುತ್ತಿದೆ. ಯಾವುದೇ ವಯೋಮಾನ, ಲಿಂಗ, ಆಟದ ಹಂತದಲ್ಲಿರುವ ಕ್ರೀಡಾಪಟುಗಳು ತಮ್ಮ ಆಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಬಯಸುತ್ತಿದ್ದು, ಅವರಿಗೆ ಸಹಾಯ ಮಾಡುವ ವಿಭಿನ್ನ ವೈಶಿಷ್ಟ್ಯಗಳನ್ನು ಸೇರಿಸಲು ನಾವು ಯೋಜಿಸಿದ್ದೇವೆ. ಈ ಪ್ರಯತ್ನ ಸಾಕಷ್ಟು ಹೆಮ್ಮೆ ಹಾಗೂ ಸಂತೋಷವನ್ನು ಕೊಟ್ಟಿದೆ. ಮುಂದಿನ ದಿನಗಳಲ್ಲಿ ಕ್ರೀಡಾ ಪ್ರಪಂಚವನ್ನು ಸ್ವಾಧೀನಪಡಿಸಿಕೊಳ್ಳಲು ಸಂಪೂರ್ಣವಾಗಿ ಸಜ್ಜಾಗಿದ್ದೇವೆ ಎಂದು ಸಂಸ್ಥೆಯ ಪಾಲುದಾರ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಬ್ಯಾಡ್ಮಿಂಟನ್ ಆಟಗಾರರಾದ ಸಾಯಿ ಪ್ರಣೀತ್ ಬಿ ಹೇಳಿದ್ದಾರೆ.