ಕೊಹ್ಲಿ ವಿರುದ್ಧ ಗೇಲ್ ಸಿಡಿಸಿದ್ದಾರೆ ಹೊಸ ಬಾಂಬ್..!: RCB ದಿಗ್ಗಜರ ನಡುವೆ ಶುರುವಾಗಿದೆಯಾ ಮನಸ್ತಾಪ?

Published : Jul 17, 2017, 11:44 AM ISTUpdated : Apr 11, 2018, 12:47 PM IST
ಕೊಹ್ಲಿ ವಿರುದ್ಧ ಗೇಲ್ ಸಿಡಿಸಿದ್ದಾರೆ ಹೊಸ ಬಾಂಬ್..!: RCB ದಿಗ್ಗಜರ ನಡುವೆ ಶುರುವಾಗಿದೆಯಾ ಮನಸ್ತಾಪ?

ಸಾರಾಂಶ

ವೆಸ್ಟ್​​​ ಇಂಡೀಸ್​​ನ ಸ್ಫೋಟಕ ಬ್ಯಾಟ್ಸ್​​'ಮನ್​​ ಕ್ರಿಸ್​​​ ಗೇಲ್​​​ RCBಯ ದಿ ಕಿಲ್ಲರ್​​​​ ಹೊಸ ಬಾಂಬ್​​ ಸಿಡಿಸಿದ್ದಾರೆ. ಅವರಿಗೆ ಕೊಹ್ಲಿ ಜೊತೆ ಇನ್ನಿಂಗ್ಸ್​​​ ಆರಂಭಿಸುವುದು ಇಷ್ಟನೇ ಇಲ್ಲವಂತೆ.  ಅವರ ಕನಸಿನ ಓಪನ್ನಿಂಗ್​​ ಪಾರ್ಟನರ್​​ ಬೇರೇನೆ ಇದಾರಂತೆ. ಹೀಗಂತ ಸ್ವತಃ ಗೇಲ್​​ ಹೇಳಿಕೊಂಡಿದ್ದಾರೆ. ಹಾಗಾದರೆ ಗೇಲ್'​​​​ರ ಆ ಕನಸಿನ ಪಾರ್ಟನರ್​​ ಯಾರು.? ಗೇಲ್ ಈ ರೀತಿ ಹೇಳೋದಕ್ಕೆ ಕಾರಣವಾದರೂ ಏನು.? ಇಲ್ಲಿದೆ ವಿವರ.

ನವದೆಹಲಿ(ಜು.17): ವೆಸ್ಟ್​​​ ಇಂಡೀಸ್​​ನ ಸ್ಫೋಟಕ ಬ್ಯಾಟ್ಸ್​​'ಮನ್​​ ಕ್ರಿಸ್​​​ ಗೇಲ್​​​ RCBಯ ದಿ ಕಿಲ್ಲರ್​​​​ ಹೊಸ ಬಾಂಬ್​​ ಸಿಡಿಸಿದ್ದಾರೆ. ಅವರಿಗೆ ಕೊಹ್ಲಿ ಜೊತೆ ಇನ್ನಿಂಗ್ಸ್​​​ ಆರಂಭಿಸುವುದು ಇಷ್ಟನೇ ಇಲ್ಲವಂತೆ.  ಅವರ ಕನಸಿನ ಓಪನ್ನಿಂಗ್​​ ಪಾರ್ಟನರ್​​ ಬೇರೇನೆ ಇದಾರಂತೆ. ಹೀಗಂತ ಸ್ವತಃ ಗೇಲ್​​ ಹೇಳಿಕೊಂಡಿದ್ದಾರೆ. ಹಾಗಾದರೆ ಗೇಲ್'​​​​ರ ಆ ಕನಸಿನ ಪಾರ್ಟನರ್​​ ಯಾರು.? ಗೇಲ್ ಈ ರೀತಿ ಹೇಳೋದಕ್ಕೆ ಕಾರಣವಾದರೂ ಏನು.? ಇಲ್ಲಿದೆ ವಿವರ.

ಕೊಹ್ಲಿ-ಗೇಲ್​ ನಡುವೆ ಮನಸ್ತಾಪ ಶುರುವಾಗಿದ್ಯ.?

ವೆಸ್ಟ್​​ ಇಂಡೀಸ್'​​ನ ಕ್ರಿಸ್​​ ಗೇಲ್​ ಮತ್ತು ಟೀಂ ಇಂಡಿಯಾದ ವಿರಾಟ್​​ ಕೊಹ್ಲಿ ಸೇರಿಕೊಂಡುಬಿಟ್ಟರೆ ಮುಗಿಯಿತು. ವಿಶ್ವವನ್ನೇ ತಲೆಕೆಳಗೆ ಮಾಡಿಬಿಡುತ್ತಾರೆ. RCB ತಂಡದಲ್ಲಿ ಒಟ್ಟಿಗೆ ಆಡುವ ಇವರಿಬ್ಬರೂ ಇಟ್ಟಿಗೆ ಇನ್ನಿಂಗ್ಸ್​​ ಆರಂಭಿಸುತ್ತಾರೆ. ಇಬ್ಬರೂ ಸೇರಿ ಸಹಸ್ರಾರು ರನ್​ಗಳನ್ನ ಗುಡ್ಡೆ ಹಾಕಿದ್ದಾರೆ. ಇಬ್ಬರೂ ಜೊತೆಗೂಡಿ ಎಷ್ಟೋ ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಅವರ ಆಟವನ್ನು ಮರೆಯಲೂ ಕ್ರಿಕೆಟ್​​ ಅಭಿಮಾನಿಗಳಿಗೆ ಸಾಧ್ಯವೇ ಇಲ್ಲ. ಆ ಪರಿ ಇರುತ್ತೆ ಇವರಿಬ್ಬರ ಜುಗಲ್​​ ಬಂದಿ.

ಇವರ ಆಟ ನೋಡಿದ ಎಷ್ಟೋ ಜನ ಆರಂಭಿಕ ಜೋಡಿ ಅಂದರೆ ಇದು ಅಂತ ಹೇಳುತ್ತಿದ್ದರು. ಒಬ್ಬರ ಯಶಸ್ಸನ್ನು ಮತ್ತೊಬ್ಬರು ಸಂಭ್ರಮಿಸುತ್ತಿದ್ದರು. ಒಬ್ಬರೂ ಫ್ಲಾಪ್​ ಆದರೆ ಮತ್ತೊಬ್ಬರು ತಂಡದ ಜವಬ್ದಾರಿಯನ್ನು ಹೊರುತ್ತಿದ್ದರು. ಒಟ್ಟಾರೆ ಹೇಳಬೇಕೆಂದರೆ ವಿಶ್ವ ಕ್ರಿಕೆಟ್​​​ ಕಂಡ ಬೆಸ್ಟ್​​ ಒಪನರ್ಸ್​​​'ಗಳಲ್ಲಿ ಗೇಲ್​ ಮತ್ತು ಕೊಹ್ಲಿ ಜೋಡಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ.

ಈ ಜೋಡಿ ಇಷ್ಟರ ಮಟ್ಟಿಗೆ ಯಶಸ್ವಿಯಾಗಿರುವಾಗುವಾಗಲೇ ಕ್ರಿಸ್​​ ಗೇಲ್​​ ಹೊಸ ಬಾಂಬ್​ ಸಿಡಿಸಿದ್ದಾರೆ. ವಿಶ್ವವೇ ಇವರ ಜುಗಲ್​ ಬಂದಿ ಬಗ್ಗೆ ಮಾತನಾಡುತ್ತಿದ್ದರೆ ಗೇಲ್​ ಮಾತ್ರ ಅವರ ಜೋಡಿ ಬಗ್ಗೆ ಅತೃಪ್ತಿಯನ್ನು ಹೊರಹಾಕಿದ್ದಾರೆ. ನೇರವಾಗಿ ಹೇಳಬೇಕೆಂದರೆ ಗೇಲ್'​ಗೆ ಕೊಹ್ಲಿ ಉತ್ತಮ  ಜೋಡಿ ಅಲ್ಲವಂತೆ. ಕೊಹ್ಲಿ ಜೊತೆ ಇನ್ನಿಂಗ್ಸ್​​ ಆರಂಭಿಸುವುದು ಅವರಿಗೆ ಖುಷಿ ಇಲ್ಲವಂತೆ.

ಕೊಹ್ಲಿ ಬಗ್ಗೆ ಗೇಲ್​ ಯಾಕೆ ಹೀಗೇಳಿದ್ರು.?

ಕ್ರಿಸ್​​ ಗೇಲ್​​ ತಮ್ಮ ಜೊತೆ ಇನ್ನಿಂಗ್ಸ್​​​ ಆರಂಭಿಸಲು ಕೊಹ್ಲಿ ಸೂಕ್ತ ವ್ಯಕ್ತಿ ಕೊಹ್ಲಿ ಅಲ್ಲ ಎಂದಿರುವ ಗೇಲ್​​ ಅವರಿಗೆ ಇಷ್ಟವಾದ ಪಾರ್ಟ್​ನರ್​​ ಹೆಸರನ್ನೂ ಬಹಿರಂಗಪಡಿಸಿದ್ದಾರೆ. ಅವರ ಪ್ರಕಾರ ಟೀಂ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್​​'ಮನ್​​ ವಿರೇಂದ್ರ ಸೆಹ್ವಾಗ್​​ ಅವರ ಜೊತೆ ಇನ್ನಿಂಗ್ಸ್​​ ಅರಂಭಿಸಿದರೆ ಚನ್ನಾಗಿರುತ್ತಂತೆ. ಸೆಹ್ವಾಗ್​ ಜೊತೆ ಗೇಲ್​​ ಇನ್ನಿಂಗ್ಸ್​​​ ಆರಂಭಿಸುವುದು ಇಷ್ಟವಂತೆ.

ವಿರೂ ಜೊತೆ ಬ್ಯಾಟ್​​ ಬೀಸಬೇಕಾದರೆ ಗೇಲ್​ ಏನು ಮಾಡಬೇಕು

ತನಗೆ ವಿರೂ ಜೊತೆ ಇನ್ನಿಂಗ್ಸ್​​​ ಆರಂಭಿಸುವ ಆಸೆ ಇದೆ ಎಂದಿರುವ ಗೇಲ್​​'ಗೆ ಅವರ ಕನಸು ನನಸಾಗುತ್ತಾ ಎಂಬುದು ಸ್ವತಃ ಅವರಿಗೇ ಗೊತ್ತಿಲ್ಲ. ಹಾಗೇನಾದರೂ ಅವರು ವಿರೂ ಜೊತೆ ಇನ್ನಿಂಗ್ಸ್​​​ ಆರಂಭಿಸಲೇಬೇಕಂದ್ರೆ ಗೇಲ್​ ಆದಷ್ಟು ಬೇಗ ಕ್ರಿಕೆಟ್'​​ಗೆ ಗುಡ್​ಬೈ ಹೇಳಬೇಕು. ನಂತರ ಆಲ್​​​ ಸ್ಟಾರ್ಸ್​​​​ ಲೀಗ್​'ನಲ್ಲಿ ಪಾಲ್ಗೊಳ್ಳಬೇಕು ಹಾಗಾದಲ್ಲಿ ಮಾತ್ರ ಗೇಲ್​'ಗೆ ತಮ್ಮ ಕನಸ್ಸನ್ನು ನನಸುಮಾಡಿಕೊಳ್ಳಲು ಅವಕಾಶ ಸಿಗುತ್ತದೆ.

ಗೇಲ್​ ಕನಸು ನನಸಾಗುತ್ತದೋ ಇಲ್ಲವೋ ಗೊತ್ತಿಲ್ಲ, ಆದರೆ ವಿರಾಟ್​​ ಕೊಹ್ಲಿ ಜೊತೆ ಅಬ್ಬರಿಸಿ ಬೊಬ್ಬರೆದು ಇಡೀ ವಿಶ್ವವನ್ನೇ ದಂಗು ಬಡಿಸಿ ಈಗ ತಮಗೆ ಕೊಹ್ಲಿ ಜೊತೆ ಇನ್ನಿಂಗ್ಸ್​​ ಆರಂಭಿಸುವುದು ಇಷ್ಟವೇ ಇಲ್ಲ ಅಂದಿದ್ದು ನಿಜಕ್ಕೂ ದುರಂತ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?