ಸ್ಪಾಟ್ ಫಿಕ್ಸಿಂಗ್'ನಲ್ಲಿ ವೇಗದ ಬೌಲರ್ ಮೊಹಮದ್ ಸಮಿ ಭಾಗಿ? ಪಾಕ್' ಮಂಡಳಿಯಿಂದ ತನಿಖೆ

By Suvarna Web DeskFirst Published Jul 17, 2017, 12:41 AM IST
Highlights

ಇಬ್ಬರೂಆಟಗಾರರಮೇಲೆಕೇವಲಆರೋಪಮಾತ್ರಮಾಡಲಾಗಿದ್ದು, ಇದರಸತ್ಯಾಸತ್ಯತೆತಿಳಿದಬಳಿಕಕ್ರಿಕೆಟ್ಮಂಡಳಿಕ್ರಮಕ್ಕೆಮುಂದಾಗಲಿದೆಎಂದುಮೂಲಗಳುತಿಳಿಸಿವೆ.

ಕರಾಚಿ(ಜು.17): ಪಾಕ್'  ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ಉಮರ್ ಅಕ್ಮಲ್ ಮತ್ತು ವೇಗದ ಬೌಲರ್ ಮೊಹಮ್ಮದ್ ಸಮಿ ಸೇರಿದಂತೆ ಹಲವು ಆಟಗಾರರು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ಪಾಕಿಸ್ತಾನದ ‘ಜಂಗ್’ ಪತ್ರಿಕೆ ವರದಿ ಮಾಡಿದೆ.

ಈ ಸಂಬಂಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆಟಗಾರರು ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರುವ ಬಗ್ಗೆ ಕೂಲಂಕುಷ ತನಿಖೆ ನಡೆಸಲು ಮುಂದಾಗಿದೆ. ಈ ಇಬ್ಬರೂ ಆಟಗಾರರ ಮೇಲೆ ಕೇವಲ ಆರೋಪ ಮಾತ್ರ ಮಾಡಲಾಗಿದ್ದು, ಇದರ ಸತ್ಯಾಸತ್ಯತೆ ತಿಳಿದ ಬಳಿಕ ಕ್ರಿಕೆಟ್ ಮಂಡಳಿ ಕ್ರಮಕ್ಕೆ ಮುಂದಾಗಲಿದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ಉಮರ್ ತಂಡದಿಂದ 2 ಬಾರಿ ಹೊರಬಿದ್ದಿದ್ದರು. ವಿಂಡೀಸ್ ಪ್ರವಾಸ ಹಾಗೂ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಅವರಿಗೆ ಸ್ಥಾನ ನೀಡಲಾಗಿರಲಿಲ್ಲ.

ಇನ್ನು ಸಮಿ 2016ರ ಟಿ20 ವಿಶ್ವಕಪ್ ಬಳಿಕ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಆದರೆ ಇಬ್ಬರೂ ಆಟಗಾರರ ವಿದೇಶಿ ಟಿ20 ಲೀಗ್ ಟೂರ್ನಿಗಳಲ್ಲಿ ಭಾಗವಹಿಸುತ್ತಿದ್ದಾರೆ.

click me!