ಭಾರತ ವಿರುದ್ಧದ ಟಿ20ಗೆ ಗೇಲ್

By Suvarna Web DeskFirst Published Jul 5, 2017, 3:33 PM IST
Highlights

ಭಾರತದ ವಿರುದ್ಧದ ಪಂದ್ಯಕ್ಕೆ ಅನುಭವಿ ಬ್ಯಾಟ್ಸ್'ಮನ್ ಕ್ರಿಸ್ ಗೇಲ್'ಗೆ ಸ್ಥಾನ ನೀಡಲು ಆಯ್ಕೆ ಸಮಿತಿ ತೀರ್ಮಾನಿಸಿದೆ.

ಜಮೈಕಾ(ಜು.05): ಭಾರತ ವಿರುದ್ಧದ ಏಕೈಕ ಟಿ20 ಪಂದ್ಯಕ್ಕೆ ವೆಸ್ಟ್ ಇಂಡಿಸ್ ತಂಡವನ್ನು ಪ್ರಕಟಿಸಲಾಗಿದ್ದು, ಕ್ರಿಸ್ ಗೇಲ್ ತಂಡಕ್ಕೆ ಮರಳಿದ್ದಾರೆ.

2016ರ ಟಿ20 ವಿಶ್ವಕಪ್ ಬಳಿಕ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಕೆರಿಬಿಯನ್ ತಂಡದಿಂದ ಹೊರಬಿದ್ದಿದ್ದರು.

ಆಫ್ಘಾನಿಸ್ತಾನದ ಎದುರು ಗೇಲ್ ಬದಲಿಗೆ ಸ್ಥಾನ ಪಡೆದಿದ್ದ ಲಿಂಡ್ಲೆ ಸಿಮೋನ್ಸ್ ಮೂರು ಟಿ20 ಪಂದ್ಯಗಳಲ್ಲಿ ಕೇವಲ 38 (6, 17 ಮತ್ತು15) ರನ್ ಮಾತ್ರ ಗಳಿಸಿದ್ದರು. ಹೀಗಾಗಿ ಭಾರತದ ವಿರುದ್ಧದ ಪಂದ್ಯಕ್ಕೆ ಅನುಭವಿ ಬ್ಯಾಟ್ಸ್'ಮನ್ ಕ್ರಿಸ್ ಗೇಲ್'ಗೆ ಸ್ಥಾನ ನೀಡಲು ಆಯ್ಕೆ ಸಮಿತಿ ತೀರ್ಮಾನಿಸಿದೆ.

ಟಿ20 ತಂಡವನ್ನು ಯುವ ಆಲ್ರೌಂಡರ್ ಕಾರ್ಲೋಸ್ ಬ್ರಾಥ್'ವೈಟ್ ಮುನ್ನಡೆಸಿದರೆ, ಹಿರಿಯ ಅನುಭವಿ ಆಟಗಾರರಾದ ಸುನಿಲ್ ನರೈನ್, ಕಿರಾನ್ ಪೊಲ್ಲಾರ್ಡ್, ಮರ್ಲಾನ್ ಸ್ಯಾಮ್ಯುಯಲ್ಸ್ ಕೂಡಾ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಫಲವಾಗಿದ್ದಾರೆ.

ತಂಡ ಇಂತಿದೆ:

ಬ್ರಾಥ್'ವೈಟ್(ನಾಯಕ), ಕ್ರಿಸ್ ಗೇಲ್, ಇವಾನ್ ಲೀವಿಸ್, ಸ್ಯಾಮ್ಯುಯಲ್ ಬದ್ರಿ, ಬೇಟನ್, ಜೇಸನ್ ಮೊಹಮ್ಮದ್, ಸುನಿಲ್ ನರೈನ್, ಕಿರಾನ್ ಪೊಲ್ಲಾರ್ಡ್, ರೋಮನ್ ಪೋವೆಲ್, ಮಾರ್ಲಾನ್ ಸ್ಯಾಮ್ಯುಯಲ್ಸ್, ಜೇರೋಮ್ ಟೇಲರ್, ಚಾಡ್ವಿಕ್ ವಾಲ್ಟನ್(ವಿಕೆಟ್ ಕೀಪರ್), ಕೆಸ್ರಿಕ್ ವಿಲಿಯಮ್ಸ್.

click me!