IPL 2019: ರಾಜಸ್ಥಾನ ವಿರುದ್ಧ ಅಬ್ಬರಿಸಿ ದಾಖಲೆ ಬರೆದ ಗೇಲ್!

By Web Desk  |  First Published Mar 25, 2019, 10:22 PM IST

ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಕ್ರಿಸ್ ಗೇಲ್, ದಾಖಲೆ ಬರೆದಿದ್ದಾರೆ. ಗೇಲ್ ಅಬ್ಬರಕ್ಕೆ ಡೇವಿಡ್ ವಾರ್ನರ್ ದಾಖಲೆ ಪುಡಿಯಾಗಿದೆ. ಇಲ್ಲಿದೆ ಗೇಲ್ ದಾಖಲೆ ವಿವರ.


ಜೈಪುರ(ಮಾ.25): ರಾಜಸ್ಥಾನ ರಾಯಲ್ಸ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿ ಅತೀ ವೇಗದಲ್ಲಿ 4000 ರನ್ ಪೂರೈಸಿದ ಕ್ರಿಕೆಟಿಗ ಅನ್ನೋ ದಾಖಲೆಗೆ ಗೇಲ್ ಪಾತ್ರರಾಗಿದ್ದಾರೆ.

ಇದನ್ನೂ ಓದಿ: 6 ಭಾಷೆಯಲ್ಲಿ ಧೋನಿ -ಪುತ್ರಿ ಝಿವಾ ಮಾತುಕತೆ - ವೈರಲ್ ಆಯ್ತು ವೀಡಿಯೋ!

Latest Videos

undefined

ಕ್ರಿಸ್ ಗೇಲ್ 112 ಇನ್ನಿಂಗ್ಸ್‌ಗಳಲ್ಲಿ 4000 ರನ್ ಪೂರೈಸಿದರು. ಈ ಮೂಲಕ ಸನ್ ರೈಸರ್ಸ್ ಹೈದರಾಬಾದ್ ತಂಡದ ಡೇವಿಡ್ ವಾರ್ನರ್ ದಾಖಲೆ ಅಳಿಸಿ ಹಾಕಿದ್ದಾರೆ. ಡೇವಿಡ್ ವಾರ್ನರ್ 114 ಇನ್ನಿಂಗ್ಸ್‌ಗಳಲ್ಲಿ 4000 ರನ್ ಪೂರೈಸಿದ್ದರು. ಇಷ್ಟೇ ಅಲ್ಲ ಐಪಿಎಲ್ ಕ್ರಿಕೆಟ್‌ನಲ್ಲಿ 4000 ರನ್ ಪೂರೈಸಿದ 2 ವಿದೇಶಿ ಕ್ರಿಕೆಟಿಗ ಹಾಗೂ ಒಟ್ಟಾರೆ 9ನೇ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಅಂಬಾನಿ ಕಾರು ಕಲೆಕ್ಷನ್ ಕಂಡು ದಂಗಾದ ಮುಂಬೈ ಇಂಡಿಯನ್ಸ್!

ರಾಜಸ್ಥಾನ ವಿರುದ್ಧ ಗೇಲ್ 47 ಎಸೆತದಲ್ಲಿ 8 ಬೌಂಡರಿ, 4 ಸಿಕ್ಸರ್ ಮೂಲಕ 79 ರನ್ ಸಿಡಿಸಿದರು. ಈ ಮೂಲಕ ಗೇಲ್ 113 ಐಪಿಎಲ್ ಪಂದ್ಯಗಳಿಂದ 4073 ರನ್ ಸಿಡಿಸಿದ್ದಾರೆ.  ಗೇಲ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪಂಜಾಬ್ 184 ರನ್ ಸಿಡಿಸಿತು. 12ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ಗೇಲ್ ಅದ್ಬುತ ಬ್ಯಾಟಿಂಗ್ ಪ್ರದರ್ಶನ ನೀಡಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

click me!