
ಗ್ರಾಸ್ ಐಲೆಟ್(ಜೂ.19): ಜೇಬಲ್ಲಿಟ್ಟುಕೊಂಡಿದ್ದ ಸಿಹಿ ಬಳಸಿ ಚೆಂಡು ವಿರೂಪಗೊಳಿಸಿರುವ ಆರೋಪವನ್ನು ಶ್ರೀಲಂಕಾ ನಾಯಕ ದಿನೇಶ್ ಚಾಂಡಿಮಲ್ ತಳ್ಳಿಹಾಕಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ನ 3ನೇ ದಿನದಾಟದಂದು ಅಂಪೈರ್‌ಗಳ ಚೆಂಡು ಬದಲಾವಣೆ ನಿರ್ಧಾರದಿಂದಾಗಿ ಶ್ರೀಲಂಕಾ
ಆಟಗಾರರು ಮೈದಾನಕ್ಕಿಳಿಯದೆ ಪ್ರತಿಭಟಿಸಿದ್ದರು.
ಇದನ್ನೂ ಓದಿ: ನಿಷೇಧದ ಭೀತಿಯಲ್ಲಿ ಶ್ರೀಲಂಕಾ ನಾಯಕ ದಿನೇಶ್ ಚಾಂಡಿಮಾಲ್
ಲಂಕಾ ಆಟಗಾರರ ಪ್ರತಿಭಟನೆಯಿಂದಾಗಿ ಆಟ ಆರಂಭವಾಗುವುದು 2 ಗಂಟೆ ತಡವಾಗಿತ್ತು. ಹೀಗಾಗಿ ಮ್ಯಾಚ್ ರೆಫ್ರಿ ಶ್ರೀಲಂಕಾ ತಂಡಕ್ಕೆ ಎಚ್ಚರಿಕೆ ನೀಡಿ ವಿಂಡೀಸ್ ತಂಡಕ್ಕೆ 5 ರನ್ ಹೆಚ್ಚುವರಿಯಾಗಿ ನೀಡಿತ್ತು. ಈ ನಾಟಕೀಯ ಬೆಳವಣಿಗೆ ಬಳಿಕ ಪಂದ್ಯದ ಅಧಿಕಾರಿಗಳು 2ನೇ ದಿನದಾಟದ ಕೊನೆ ಅವಧಿಯ ಆಟದ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಚಾಂಡಿಮಲ್ ಚೆಂಡು ವಿರೂಪಕ್ಕೆ ಯತ್ನಿಸಿರುವ ಅನುಮಾನಗಳು ಹುಟ್ಟಿಕೊಂಡಿದ್ದವು.
ಇದನ್ನೂ ಓದಿ:ವೆಸ್ಟ್ಇಂಡೀಸ್-ಶ್ರೀಲಂಕಾ ಟೆಸ್ಟ್ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ಆರೋಪ
ಬಾಲ್ ಟ್ಯಾಂಪರಿಂಗ್ ಮಾಡಿರುವ ಕುರಿತು ಮ್ಯಾಚ್ ಅಂಪೈರ್ ಅಲೀಮ್ ದಾರ್ ಹಾಗೂ ಇಯನ್ ಗೋಲ್ಡ್ ಅನುಮಾನ ವ್ಯಕ್ತಪಡಿಸಿ, ಚೆಂಡು ಬದಲಾಯಿಸಿದ್ದರು. ಅನುಮಾನ ಬಲವಾಗುತ್ತಿದ್ದಂತೆ, ನಾಯಕ ದಿನೇಶ್ ಚಾಂಡಿಮಾಲ್ ಐಸಿಸಿ ಕೆಂಗಣ್ಣಿಗೂ ಗುರಿಯಾಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.