
ಮುಂಬೈ(ಅ.24): ಭಾರತ ಏಕದಿನ ತಂಡದ ಆರಂಭಿಕ ಆಟಗಾರ ಅಜಿಂಕ್ಯ ರಹಾನೆ ಸಿಯೆಟ್ ಲಿಮಿಟೆಡ್ ಕಂಪೆನಿಯ ಪ್ರಚಾರ ರಾಯಭಾರಿಯಾಗಿ ನಾಲ್ಕು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದರೊಂದಿಗೆ ರೋಹಿತ್ ಶರ್ಮಾ, ಸುರೇಶ್ ರೈನಾ ಮತ್ತು ಈಶನ್ ಕಿಶನ್ ಜತೆಗೆ ರಹಾನೆ ಸೇರ್ಪಡೆಗೊಂಡಂತಾಗಿದೆ.
ಕಳೆದ ಕೆಲವು ವರ್ಷಗಳಿಂದ ಮೂರು ಪ್ರಕಾರದ ಕ್ರಿಕೆಟ್‌ನಲ್ಲಿ ಭಾರತ ತಂಡದ ಕಾಯಂ ಆಟಗಾರನಾಗಿ ರೂಪುಗೊಂಡಿರುವ ರಹಾನೆ, ಮುಂದಿನ ದಿನಗಳಲ್ಲಿ ರಹಾನೆ ಬ್ಯಾಟ್ ಮೇಲೆ ಸಿಯೆಟ್ ಲೋಗೋ ರಾರಾಜಿಸಲಿದೆ.
‘‘ಸಿಯೆಟ್ ಜತೆಗೆ ಕೈಜೋಡಿಸುತ್ತಿರುವುದಕ್ಕೆ ನನಗೆ ಅತೀವ ಸಂತಸವಾಗುತ್ತಿದೆ. ಕ್ರಿಕೆಟ್ ಜತೆಗೆ ಉತ್ತಮ ಸಂಬಂಧ ಹೊಂದಿರುವ ಅದರೊಂದಿಗಿನ ನನ್ನ ಒಪ್ಪಂದದ ಅವಧಿ ಫಲಪ್ರದವಾಗಿರುವ ವಿಶ್ವಾಸವಿದೆ’’ ಎಂದು ರಹಾನೆ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.