ಚಿನ್ನ ಗೆದ್ದ ತೋಮರ್, ಪೋಗಟ್

Published : Oct 24, 2016, 03:52 PM ISTUpdated : Apr 11, 2018, 12:53 PM IST
ಚಿನ್ನ ಗೆದ್ದ ತೋಮರ್, ಪೋಗಟ್

ಸಾರಾಂಶ

ಇಂದಿನಿಂದ ಆರಂಭವಾದ ಕುಸ್ತಿ ಸ್ಪರ್ಧಾವಳಿಯ ಪುರುಷರ 57 ಕೆಜಿ ಸ್ಪರ್ಧೆಯ ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ ಹರಿಯಾಣದ ಅನುಭವಿ ಅಮಿತ್ ಕುಮಾರ್ ಎದುರು ಗೆಲುವು ಪಡೆದ ಆರ್‌ಎಸ್‌ಪಿಬಿಯ ಉತ್ಕರ್ಷ್ ಕಾಳೆ, ಪ್ರಶಸ್ತಿ ಸುತ್ತಿನಲ್ಲಿ ಎಸ್‌ಎಸ್‌ಸಿಬಿಯ ಸಂದೀಪ್ ತೋಮರ್ ವಿರುದ್ಧ ಸೋಲು ಕಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.

ನವದೆಹಲಿ(ಅ.24): ರಿಯೊ ಕೂಟದ ಸ್ಟಾರ್ ಕುಸ್ತಿಪಟುಗಳಾದ ಸಂದೀಪ್ ತೋಮರ್ ಮತ್ತು ರಿತು ಪೋಗಟ್, ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನ ಹಿರಿಯ ಪುರುಷ ಮತ್ತು ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

ಇಲ್ಲಿನ ಉತ್ತರಪ್ರದೇಶದ ಗೊಂಡಾದಲ್ಲಿ ಇಂದಿನಿಂದ ಆರಂಭವಾದ ಕುಸ್ತಿ ಸ್ಪರ್ಧಾವಳಿಯ ಪುರುಷರ 57 ಕೆಜಿ ಸ್ಪರ್ಧೆಯ ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ ಹರಿಯಾಣದ ಅನುಭವಿ ಅಮಿತ್ ಕುಮಾರ್ ಎದುರು ಗೆಲುವು ಪಡೆದ ಆರ್‌ಎಸ್‌ಪಿಬಿಯ ಉತ್ಕರ್ಷ್ ಕಾಳೆ, ಪ್ರಶಸ್ತಿ ಸುತ್ತಿನಲ್ಲಿ ಎಸ್‌ಎಸ್‌ಸಿಬಿಯ ಸಂದೀಪ್ ತೋಮರ್ ವಿರುದ್ಧ ಸೋಲು ಕಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.

ಇನ್ನು ಮಹಿಳೆಯರ 48ಕೆಜಿ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ ರಿತು ಪೋಗಟ್, ಪ್ರಿಯಾಂಕಾ ಸಿಂಗ್ ಎದುರು ಜಯ ಪಡೆದು ಚಿನ್ನ ಗೆದ್ದರು.

ಫಲಿತಾಂಶ : ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗ: ಸಂದೀಪ್ ತೋಮರ್- ಚಿನ್ನ, ಉತ್ಕರ್ಷ್ ಕಾಳೆ- ಬೆಳ್ಳಿ, ಅಮಿತ್ ಕುಮಾರ್ ಮತ್ತು ಪಂಕಜ್- ಕಂಚು; 65 ಕೆಜಿ ವಿಭಾಗ: ಭಜರಂಗ್- ಚಿನ್ನ, ರಾಹುಲ್ ಮನ್- ಬೆಳ್ಳಿ, ರಜನೀಶ್ ಮತ್ತು ಸುರ್ಜಿತ್-ಕಂಚು; 74 ಕೆಜಿ ವಿಭಾಗ: ಜಿತೇಂದರ್-ಚಿನ್ನ, ಸಂದೀಪ್ ಖರೆ-ಬೆಳ್ಳಿ, ದಿನೇಶ್ ಮತ್ತು ಸತ್ಪಾಲ್- ಕಂಚು

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಜಯ್ ಹಜಾರೆ ಸೆಮಿಫೈನಲ್: ಒಂದಂಕಿ ಮೊತ್ತಕ್ಕೆ ಮಯಾಂಕ್, ಪಡಿಕ್ಕಲ್ ಔಟ್; ಮತ್ತೆ ಕರ್ನಾಟಕಕ್ಕೆ ಆಸರೆಯಾದ ಅನುಭವಿ ಕ್ರಿಕೆಟಿಗ!
ಸಂಜು ಸ್ಯಾಮ್ಸನ್ ಬ್ಯಾಟರ್‌ ಆಗಿ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಅಗತ್ಯವೇ ಇರಲಿಲ್ಲ ಎಂದ ಮಾಜಿ ಕ್ರಿಕೆಟಿಗ! ಹೀಗೆ ಹೇಳಲು ಕಾರಣವೂ ಇದೆ