
ನವದೆಹಲಿ: ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಾರಾ ಶಟ್ಲರ್ ಪಿ.ವಿ.ಸಿಂಧು, ಕನ್ನಡಿಗ ಆಯುಷ್ ಶೆಟ್ಟಿ ಪ್ರಿ ಕ್ವಾರ್ಟರ್ ಫೈನಲ್‌ಗೇರಿದ್ದಾರೆ.
ಬುಧವಾರ ಮಹಿಳಾ ಸಿಂಗಲ್ಸ್ 2ನೇ ಸುತ್ತಿನಲ್ಲಿ ಸಿಂಧು, ಕೆನಡಾದ ವೆನ್ ಯು ಝಾಂಗ್ ವಿರುದ್ಧ 21-16, 21-17ರಲ್ಲಿ ಗೆದ್ದರು. ಆದರೆ ಯುವ ತಾರೆ ಉನ್ನತಿ ಹೂಡಾ ಕೆನಡಾದ ಮಿಚೆಲ್ ಲಿ ವಿರುದ್ಧ 21-11, 9-21, 21-23ರಲ್ಲಿ ಪರಾಭವಗೊಂಡರು. ಕಾರ್ಕಳದ ಆಯುಷ್ ಪುರುಷರ ಸಿಂಗಲ್ಸ್ 2ನೇ ಸುತ್ತಿನಲ್ಲಿ ದುಮಿಂಡು ಅಭಯ್‌ವಿಕ್ರಮ ವಿರುದ್ಧ 21-8, 21-10ರಲ್ಲಿ ಸುಲಭ ಗೆಲುವು ದಾಖಲಿಸಿದರು. ಆದರೆ ಪದಕ ನಿರೀಕ್ಷೆಯಲ್ಲಿದ್ದ ಲಕ್ಷ್ಯ ಸೇನ್‌ಗೆ ಅಮೆರಿಕದ ಗ್ಯಾರೆಟ್ ಟಾನ್ ವಿರುದ್ಧ 21-19, 19-21, 17-21 ಗೇಮ್‌ಗಳಲ್ಲಿ ಆಘಾತಕಾರಿ ಸೋಲು ಎದುರಾಯಿತು.
ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ - ಚಿರಾಗ್ ಶೆಟ್ಟಿ ವಾಕ್‌ಓವರ್ ಪಡೆದು ಮುಂದಿನ ಸುತ್ತಿಗೇರಿದರು. ಆದರೆ ಹರಿಹರಣ್-ಅರ್ಜುನ್ ಜೋಡಿ ಸೋತುಹೊರಬಿತ್ತು. ಮಿಶ್ರ ಡಬಲ್ಸ್‌ನಲ್ಲಿ ತನಿಶಾ-ಧ್ರುವ್ ಕಪಿಲಾ ಜೋಡಿ ಕೂಡಾ ಪ್ರಿ ಕ್ವಾರ್ಟರ್‌ಗೇರಿತು.
ಭುವನೇಶ್ವರ್: 52ನೇ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ 2ನೇ ದಿನ ಮತ್ತೆ 9 ಚಿನ್ನ, 5 ಬೆಳ್ಳಿ, 2 ಕಂಚು ಸೇರಿ 16 ಪದಕ ಗೆದ್ದಿದೆ. ಇದರೊಂದಿಗೆ ಪದಕ ಗಳಿಕೆ 16 ಚಿನ್ನ ಸೇರಿ 32ಕ್ಕೆ ಏರಿಕೆಯಾಗಿದೆ.
ಬುಧವಾರ 100 ಮೀ. ಬ್ಯಾಕ್‌ಸ್ಟ್ರೋಕ್ ಬಾಲಕರ ವಿಭಾಗದಲ್ಲಿ ಸಮರ್ಥ್ ಗೌಡ, ಬಾಲಕಿಯರ ವಿಭಾಗ-1ರಲ್ಲಿ ವಿಹಿತಾ, ವಿಭಾಗ-2ರಲ್ಲಿ ತನಿಶಿ ಗುಪ್ತಾ, ಬಾಲಕರ 50 ಮೀ. ಫ್ರೀಸ್ಟೈಲ್‌ನಲ್ಲಿ ವೇದಾಂತ್, 50 ಮೀ. ಫ್ರೀಸ್ಟೈಲ್ ಬಾಲಕಿಯರ ವಿಭಾಗ-1ರಲ್ಲಿ ರುಜುಲಾ, ವಿಭಾಗ-2ರಲ್ಲಿ ಚರಿತಾ, ಬಾಲಕಿಯರ 400 ಮೀ. ಮೆಡ್ಲೆ ಸ್ಪರ್ಧೆಯಲ್ಲಿ ತಾನ್ಯಾ ಚಿನ್ನ ಗೆದ್ದರು. ಬಾಲಕಿಯರ 4*100 ಮೆಡ್ಲೆ ಸ್ಪರ್ಧೆಯಲ್ಲಿ ರಾಜ್ಯ ತಂಡ ಚಾಂಪಿಯನ್ ಆಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.