ಭಾರತದ ಅಳಿಯ, ಆರ್‍‌ಸಿಬಿ ಮಾಜಿ ಸ್ಟಾರ್‍‌ ಮನೆಗೆ ಮಹಾಲಕ್ಷ್ಮಿ ಆಗಮನ.. ಹೆಸರೇನು ಗೊತ್ತಾ?

Published : Aug 20, 2026, 07:04 AM IST
Glenn Maxwell

ಸಾರಾಂಶ

ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವಿನಿ ರಾಮನ್ ದಂಪತಿಗೆ ಎರಡನೇ ಮಗು (ಹೆಣ್ಣು ಮಗು) ಜನಿಸಿದೆ. ಮುದ್ದಾದ ಮಗಳಿಗೆ ವೆಲ್‌ಕಮ್ ಹೇಳಿರುವ ಜೋಡಿ, ಏನು ಹೆಸರು ಇಟ್ಟಿದೆ ಗೊತ್ತಾ?

ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಹಾಗೂ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಿ ಕನ್ನಡಿಗರಿಗೆ ಆಪ್ತರಾಗಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಎರಡನೇ ಬಾರಿಗೆ ತಂದೆಯಾಗಿದ್ದಾರೆ. ಮ್ಯಾಕ್ಸ್‌ವೆಲ್ ಮತ್ತು ಅವರ ಪತ್ನಿ ವಿನಿ ರಾಮನ್ (Vini Raman) ದಂಪತಿಗೆ ಹೆಣ್ಣು ಮಗು ಜನಿಸಿದೆ.

ಮಗಳ ಹೆಸರೇನು?

ತಮಗೆ ಹೆಣ್ಣು ಮಗು ಜನಿಸಿರುವ ವಿಷಯವನ್ನು ಮ್ಯಾಕ್ಸ್‌ವೆಲ್ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಮಗುವಿನ ಫೋಟೋ ಶೇರ್ ಮಾಡಿರುವ ಅವರು, ಮಗಳಿಗೆ ಮೈಯಾ ಮ್ಯಾಕ್ಸ್‌ವೆಲ್ (Maia Maxwell) ಎಂದು ಹೆಸರಿಟ್ಟಿರುವುದಾಗಿ ತಿಳಿಸಿದ್ದಾರೆ. ನಮ್ಮ ಕನಸಿನ ರಾಣಿ ಬಂದಿದ್ದಾಳೆ, ಅವಳೇ ಮೈಯಾ ಮ್ಯಾಕ್ಸ್‌ವೆಲ್ ಎಂದು ದಂಪತಿ ಭಾವನಾತ್ಮಕವಾಗಿ ಬರೆದುಕೊಂಡಿದೆ.

ಮ್ಯಾಕ್ಸ್‌ವೆಲ್ ದಂಪತಿಗೆ ಎರಡನೇ ಮಗು ಜನಿಸಿದ ವಿಷಯ ತಿಳಿಯುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳು ಹಾಗೂ ಸಹ ಆಟಗಾರರು ಶುಭಾಶಯಗಳ ಸುರಿಮಳೆ ಸುರಿಸುತ್ತಿದ್ದಾರೆ. ಈ ದಂಪತಿಗೆ ಈಗಾಗಲೇ ಲೋಗನ್ ಮಾವೆರಿಕ್ ಮ್ಯಾಕ್ಸ್‌ವೆಲ್ ಎಂಬ ಮಗನಿದ್ದಾನೆ. ಲೋಗನ್ 2023ರ ಸೆಪ್ಟೆಂಬರ್‌ನಲ್ಲಿ ಜನಿಸಿದ್ದ. ಇದೀಗ ಮೈಯಾ ಆಗಮನದಿಂದ ಮ್ಯಾಕ್ಸ್‌ವೆಲ್ ಕುಟುಂಬ ಪೂರ್ಣಗೊಂಡಂತಾಗಿದೆ.

ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಪತ್ನಿ ವಿನಿ ರಾಮನ್ ಭಾರತೀಯ ಮೂಲದವರಾಗಿದ್ದು (ತಮಿಳುನಾಡು), ಆಸ್ಟ್ರೇಲಿಯಾದಲ್ಲಿ ಫಾರ್ಮಸಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಮ್ಯಾಕ್ಸ್‌ವೆಲ್ ಅವರನ್ನು ಭಾರತೀಯ ಅಭಿಮಾನಿಗಳು ಪ್ರೀತಿಯಿಂದ 'ಭಾರತದ ಅಳಿಯ' ಎಂದೇ ಕರೆಯುತ್ತಾರೆ. ಇವರಿಬ್ಬರು 2022ರ ಮಾರ್ಚ್‌ನಲ್ಲಿ ಮೆಲ್ಬೋರ್ನ್‌ನಲ್ಲಿ ವಿವಾಹವಾಗಿದ್ದರು. ವಿಶೇಷವೆಂದರೆ ಇವರ ಮದುವೆಯು ಕ್ರಿಶ್ಚಿಯನ್ ಸಂಪ್ರದಾಯದ ಜೊತೆಗೆ ತಮಿಳು ಬ್ರಾಹ್ಮಣ ಪದ್ಧತಿಯಂತೆಯೂ ಅದ್ದೂರಿಯಾಗಿ ನಡೆದಿತ್ತು. ಅಂದು ಮ್ಯಾಕ್ಸ್‌ವೆಲ್ ಸಾಂಪ್ರದಾಯಿಕ ಶೇರ್ವಾನಿ ಧರಿಸಿ ಮಿಂಚಿದ್ದು ಭಾರಿ ವೈರಲ್ ಆಗಿತ್ತು.

ಸ್ನೇಹದಿಂದ ಪ್ರೇಮಕ್ಕೆ

ಮ್ಯಾಕ್ಸ್‌ವೆಲ್ ಮತ್ತು ವಿನಿ ರಾಮನ್ 2013 ರಿಂದ ಒಬ್ಬರಿಗೊಬ್ಬರು ಪರಿಚಯವಿದ್ದರು. ಮೊದಲು ಸ್ನೇಹಿತರಾಗಿದ್ದ ಇವರ ನಡುವೆ ನಂತರ ಪ್ರೀತಿ ಮೊಳೆತು, 2020ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮ್ಯಾಕ್ಸ್‌ವೆಲ್ ಅವರ ಕಷ್ಟದ ಕಾಲದಲ್ಲಿ (ಮಾನಸಿಕ ಒತ್ತಡದ ಸಮಯದಲ್ಲಿ) ವಿನಿ ರಾಮನ್ ದೊಡ್ಡ ಬೆಂಬಲವಾಗಿ ನಿಂತಿದ್ದರು ಎಂಬುದು ಗಮನಾರ್ಹ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಪಿಎಲ್‌ ಫೈನಲ್‌ ಬಳಿಕ ಬೆಂಗಳೂರಿಗೆ ತಪ್ಪಿದ ಮತ್ತೊಂದು ಪ್ರಮುಖ ಟೂರ್ನಿಯ ಫೈನಲ್‌!