ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌: ವಿಶ್ವ ನಂ.1 ವಿಕ್ಟರ್‌ ಆಕ್ಸೆಲ್ಸನ್‌ ಮಣಿಸಿ ಪದಕ ಖಚಿತಪಡಿಸಿಕೊಂಡ ಪ್ರಣಯ್‌

By Kannadaprabha News  |  First Published Aug 26, 2023, 9:33 AM IST

 ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಪ್ರಣಯ್
ವಿಶ್ವ ನಂ.1, ಡೆನ್ಮಾರ್ಕ್‌ನ ವಿಕ್ಟರ್‌ ಆಕ್ಸೆಲ್ಸನ್‌ ವಿರುದ್ಧ ರೋಚಕ ಜಯ
ವಿಶ್ವ ನಂ.2 ಡಬಲ್ಸ್‌ ಜೋಡಿ ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿಗೆ ಸೋಲಿನ ಶಾಕ್


ಕೋಪೆನ್‌ಹೇಗನ್‌(ಡೆನ್ಮಾರ್ಕ್‌): ಭಾರತದ ತಾರಾ ಶಟ್ಲರ್‌ ಎಚ್‌.ಎಸ್‌.ಪ್ರಣಯ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದು, ಭಾರತಕ್ಕೆ ಪದಕ ಖಚಿತಪಡಿಸಿದ್ದಾರೆ.

ಶುಕ್ರವಾರ ವಿಶ್ವ ನಂ.1, ಡೆನ್ಮಾರ್ಕ್‌ನ ವಿಕ್ಟರ್‌ ಆಕ್ಸೆಲ್ಸನ್‌ ವಿರುದ್ಧ 13-21, 21-15, 21-16 ಗೇಮ್‌ಗಳಲ್ಲಿ ಜಯಭೇರಿ ಬಾರಿಸಿದರು. ಮೊದಲ ಗೇಮ್‌ನಲ್ಲಿ ಸೋತ ಹೊರತಾಗಿಯೂ ಹೋರಾಟ ಬಿಡದ ವಿಶ್ವ ರ್‍ಯಾಂಕಿಂಗ್‌ನಲ್ಲಿ 9ನೇ ಸ್ಥಾನದಲ್ಲಿರುವ ಪ್ರಣಯ್‌, ನಂತರದ 2 ಗೇಮ್‌ಗಳಲ್ಲಿ ಅಭೂತಪೂರ್ವ ಪ್ರದರ್ಶನ ತೋರಿ ಸೆಮೀಸ್‌ಗೆ ಲಗ್ಗೆ ಇಟ್ಟರು.



HS PRANNOY IS A WORLD CHAMPIONSHIPS MEDALLIST!

At 31, the greatest moment of his career (in an individual event). He defeats Viktor Axelsen from a game down.

WHAT. A. STORY. 😭🙏🏼https://t.co/bQ2jzI1iuc pic.twitter.com/m1lbfWM6hQ

— Vinayakk (@vinayakkm)

Latest Videos

undefined

ಸಾತ್ವಿಕ್‌- ಚಿರಾಗ್‌ ಔಟ್‌!

ವಿಶ್ವ ನಂ.2 ಡಬಲ್ಸ್‌ ಜೋಡಿ ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿಯ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಸತತ 2ನೇ ಪದಕ ಗೆಲ್ಲುವ ಕನಸು ಭಗ್ನಗೊಂಡಿದೆ. ಕಳೆದ ಬಾರಿ ಕಂಚಿನ ಪದಕ ಜಯಿಸಿದ್ದ ಭಾರತೀಯ ಜೋಡಿ, ಶುಕ್ರವಾರ 48 ನಿಮಿಷಗಳ ಕಾಲ ನಡೆದ ಪುರುಷರ ಡಬಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಡೆನ್ಮಾರ್ಕ್‌ನ ಕಿಮ್‌ ಆ್ಯಸ್ಟ್ರುಪ್‌ ಹಾಗೂ ಆ್ಯಂಡರ್ಸ್‌ ರಾಸ್ಮುಸೆನ್‌ ವಿರುದ್ಧ 18-21, 19-21 ನೇರ ಗೇಮ್‌ಗಳಲ್ಲಿ ಪರಾಭವಗೊಂಡಿತು. ಸ್ಥಳೀಯ ಆಟಗಾರರ ಪ್ರಬಲ ಸ್ಮ್ಯಾಶ್‌ಗಳ ಮುಂದೆ ಚಿರಾಗ್‌-ಸಾತ್ವಿಕ್‌ರನ್ನು ಮಂಡಿಯೂರುವಂತೆ ಮಾಡಿತು. ಸರ್ವ್‌ನಲ್ಲಿ ಹಲವು ತಪ್ಪುಗಳನ್ನೆಸಗಿದ ಭಾರತೀಯ ಜೋಡಿ ಅಂತಿಮ16ರ ಘಟ್ಟದಲ್ಲೇ ಹೊರಬಿತ್ತು.

Chess World Cup 2023: ಫೈನಲ್‌ನಲ್ಲಿ ಮುಗ್ಗರಿಸಿದ ಪ್ರಜ್ಞಾನಂದ ಗೆದ್ದ ನಗದು ಬಹುಮಾನವೆಷ್ಟು ಗೊತ್ತಾ?

2010ರ ಬಳಿಕ ಎಲ್ಲಾ ವರ್ಷ ಭಾರತಕ್ಕೆ ಪದಕ

ಭಾರತ ಕೊನೆ ಬಾರಿ ವಿಶ್ವ ಕೂಟದಲ್ಲಿ ಪದಕ ಪಡೆಯಲು ವಿಫಲವಾಗಿದ್ದು 2010ರಲ್ಲಿ. ಆ ಬಳಿಕ ಪ್ರತಿ ಆವೃತ್ತಿಯಲ್ಲೂ ಭಾರತ ಕನಿಷ್ಠ ಒಂದು ಪದಕವಾದರೂ ಗೆದ್ದಿದೆ. ಕಳೆದ ವರ್ಷ ಸಾತ್ವಿಕ್‌-ಚಿರಾಗ್‌ ಕಂಚು ಗೆದ್ದು, ಭಾರತಕ್ಕೆ ಏಕೈಕ ಪದಕ ತಂದುಕೊಟ್ಟಿದ್ದರು.

ವಿಶ್ವ ರ್‍ಯಾಂಕಿಂಗ್‌: 20ನೇ ಸ್ಥಾನಕ್ಕೇರಿದ ಪ್ರಜ್ಞಾನಂದ

ನವದೆಹಲಿ: ಚೆಸ್‌ ವಿಶ್ವಕಪ್‌ನಲ್ಲಿ ರನ್ನರ್‌-ಅಪ್‌ ಆಗಿ ವಿಶ್ವದ ಗಮನ ಸೆಳೆದ ಭಾರತದ 18ರ ಆರ್‌.ಪ್ರಜ್ಞಾನಂದ ವಿಶ್ವ ರ್‍ಯಾಂಕಿಂಗ್‌ನಲ್ಲಿ 20ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಅವರು ನೂತನ ಪಟ್ಟಿಯಲ್ಲಿ ವೃತ್ತಿಬದುಕಿನ ಶ್ರೇಷ್ಠ 2727.2 ರೇಟಿಂಗ್‌ ಅಂಕದೊಂದಿಗೆ 9 ಸ್ಥಾನ ಪ್ರಗತಿ ಸಾಧಿಸಿದರು. ಇದೇ ವೇಳೆ ವಿಶ್ವಕಪ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೇರಿದ್ದ 17ರ ಡಿ.ಗುಕೇಶ್‌ 3 ಸ್ಥಾನ ಮೇಲೇರಿ 2758 ಅಂಕದೊಂದಿಗೆ 8ನೇ ಸ್ಥಾನ ಪಡೆದಿದ್ದು, 5 ಬಾರಿ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌ 9ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ವಿಶ್ವಕಪ್‌ ವಿಜೇತ, ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಅಗ್ರಸ್ಥಾನದಲ್ಲೇ ಇದ್ದು, ಅಮೆರಿಕದ ಫ್ಯಾಬಿಯಾನೋ ಕರುವಾನಾ ಮತ್ತೆ 2ನೇ ಸ್ಥಾನಕ್ಕೇರಿದ್ದಾರೆ.

ಕಿಂಗ್ ಕೊಹ್ಲಿಯ ಸಿಂಪ್ಲಿಸಿಟಿಗೆ ಫ್ಯಾನ್ಸ್ ಫಿದಾ..! ಕೊಹ್ಲಿ ಎಲ್ಲರಿಗೂ ಇಷ್ಟ ಆಗೋದೇ ಈ ಕಾರಣಕ್ಕೆ..!

ಹಾಕಿ ಫೈವ್ಸ್‌: ಭಾರತಕ್ಕೆ ಮಲೇಷ್ಯಾ ವಿರುದ್ಧ ಜಯ

ಸಲಾಲ(ಒಮಾನ್‌): ಇಲ್ಲಿ ಆರಂಭಗೊಂಡ ಮಹಿಳೆಯರ ಏಷ್ಯನ್ ಹಾಕಿ ಫೈವ್ಸ್‌ ವಿಶ್ವಕಪ್‌ ಅರ್ಹತಾ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತ, ಮಲೇಷ್ಯಾ ವಿರುದ್ಧ 7-2 ಗೋಲುಗಳಿಂದ ಜಯಗಳಿಸಿದೆ. ಭಾರತದ ಪರ ನವ್‌ಜೋತ್‌ ಕೌರ್‌, ಟೊಪ್ಪೊ ಮೋನಿಕಾ ತಲಾ 2, ಅಕ್ಷತಾ, ಮರಿಯಾನಾ, ಮಹಿಮಾ ಚೌಧರಿ ತಲಾ 1 ಗೋಲು ಬಾರಿಸಿದರು. ಎಲೈಟ್‌ ಗುಂಪಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಭಾರತ ತನ್ನ 2ನೇ ಪಂದ್ಯದಲ್ಲಿ ಶನಿವಾರ ಜಪಾನ್‌ ವಿರುದ್ಧ ಆಡಲಿದೆ. ಕೊನೆ ಪಂದ್ಯದಲ್ಲಿ ಭಾನುವಾರ ಥಾಯ್ಲೆಂಡ್‌ ಸವಾಲು ಎದುರಾಗಲಿದೆ.

click me!