4ರ ಪೋರನ ಫುಟ್ಬಾಲ್ ಆಟಕ್ಕೆ ಮನಸೋತ ಮಹೀಂದ್ರ ಮಾಲೀಕ!

Published : May 18, 2019, 09:36 PM ISTUpdated : May 19, 2019, 01:32 PM IST
4ರ ಪೋರನ ಫುಟ್ಬಾಲ್ ಆಟಕ್ಕೆ ಮನಸೋತ ಮಹೀಂದ್ರ ಮಾಲೀಕ!

ಸಾರಾಂಶ

ಮಹೀಂದ್ರ ಮೋಟಾರ್ ಮಾಲೀಕ ಆನಂದ್ ಮಹೀಂದ್ರ ಈ ಬಾರಿ ವೀಡಿಯೋವೊಂದನ್ನು ಟ್ವೀಟ್ ಮಾಡಿದ್ದಾರೆ. 4ರ ಪೋರನ ಫುಟ್ಬಾಲ್ ಆಟದ ಕುರಿತು ಬೆಳಕು ಚೆಲ್ಲಿದ್ದಾರೆ. ಆನಂದ್ ಮಹೀಂದ್ರ ಪೋಸ್ಟ್ ಮಾಡಿರೋ ವೀಡಿಯೋ ಇಲ್ಲಿದೆ.

ಮುಂಬೈ(ಮೇ.17):  ಮಹೀಂದ್ರ ಮೋಟಾರ್ ಮಾಲೀಕ ಆನಂದ್ ಮಹೀಂದ್ರ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಟ್ವಿಟರ್ ಮೂಲಕ ಸದಾ ಸುದ್ದಿಯಲ್ಲಿರುವ ಮಹೀಂದ್ರ ಇದೀಗ 5ರ ಪೋರನ ಫುಟ್ಬಾಲ್ ಆಟಕ್ಕೆ ಮನಸೋತು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಪುಟಾಣಿ ಹುಡುಗನ ಫುಟ್ಬಾಲ್ ಪ್ರತಿಭೆ ಇದೀಗ ಭಾರತದಲ್ಲಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಚಾಲಾಕಿ ಹೆಂಡ್ತಿ ಇರೋದರ ಅಪಾಯ: ಏನು ಆನಂದ್ ಮಹೀಂದ್ರಾ ಉಪಾಯ?

ಆನಂದ್ ಮಹೀಂದ್ರ ವ್ಯಾಟ್ಸಾಪ್ ಗ್ರೂಪ್‌ಗೆ ಬಂದ ವೀಡಿಯೋ ಒಂದನ್ನು ಗಮನಿಸಿದ ಆನಂದ್ ಮಹೀಂದ್ರಾಗೆ ಅಚ್ಚರಿ ಕಾದಿತ್ತು. ಅದ್ಬುತ ಫುಟ್ಬಾಲ್ ಪ್ರತಿಗೆ ಆನಂದ್ ಮಹೀಂದ್ರ ಮನದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಆರಂಭದಲ್ಲಿ ಹುಡುಗಿ ಎಂದುಕೊಂಡಿದ್ದ ಆನಂದ್ ಮಹೀಂದ್ರ ಅಂತರ್ಜಾಲದಲ್ಲಿ ಹೆಚ್ಚಿನ ಮಾಹಿತಿ ಹುಡುಕಿದ್ದಾರೆ. ಫುಟ್ಬಾಲ್ ಮೋಡಿ ಮಾಡುತ್ತಿರುವ ಈ ಪುಣಾಣಿ ಹುಡುಗ ಅನ್ನೋ ಸತ್ಯ ಬಹಿರಂಗವಾಗಿದೆ. ಇಷ್ಟೇ ಅಲ್ಲ 4 ವರ್ಷದ ಇರಾನಿ ಹುಡುಗನ ಫುಟ್ಬಾಲ್ ಆಟ ಅಚ್ಚರಿಗೊಳಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

 

 

ಇದನ್ನೂ ಓದಿ: ಕಾರು ಎಷ್ಟು ಕೊಡುತ್ತೆ ಪ್ರಶ್ನೆಗೆ ಮಹೀಂದ್ರ ಮಾಲೀಕರ ತಕ್ಕ ತಿರುಗೇಟು!

ಆನಂದ್ ಮಹೀಂದ್ರ ಮೇಲ್ನೋಟಕ್ಕೆ ಹುಡುಗಿ ಎಂದುಕೊಳ್ಳಲು ಕಾರಣವಿದೆ. ಉದ್ದ ಕೂದಲು ಬಿಟ್ಟಿದ್ದ ಈ ಪೋರ ಮೊದಲ ನೋಟಕ್ಕೆ ಪುಟಾಣಿ ಹುಡುಗಿಯಂತೆ ಕಾಣಿಸುತಿದ್ದ. ಇಷ್ಟೇ ಅಲ್ಲ ಈ ವೀಡಿಯೋ ಕ್ಲಾರಿಟಿ ಕೂಡ ಕಡಿಮೆ. ಇದೀಗ ಆನಂದ್ ಮಹೀಂದ್ರ ಟ್ವೀಟ್ ಮೂಲಕ ಇರಾನಿ ಹುಡುಗನ ಫುಟ್ಬಾಲ್ ಆಟವನ್ನು ಬಣ್ಣಿಸಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ
ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana