
ಮುಂಬೈ(ಅ.06): ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ಮಾಡಲಾಗ ಶಸ್ತ್ರ ಚಿಕಿತ್ಸೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಬೆನ್ನು ನೋವಿನಿಂದ ಬಳಲುತ್ತಿದ್ದ ಹಾರ್ದಿಕ್ ಪಾಂಡ್ಯಗೆ ಲಂಡನ್‌ಲ್ಲಿ ಯಶಸ್ವಿ ಸರ್ಜರಿ ಮಾಡಲಾಗಿದೆ. ಸರ್ಜರಿ ಬಳಿಕ ಪಾಂಡ್ಯ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿದ್ದರು. ಈ ಫೋಟೋದಲ್ಲಿ ಪಾಂಡ್ಯ ವಾಚ್ ಕಟ್ಟಿಕೊಂಡಿದ್ದಾರೆ. ಇದನ್ನೇ ಕ್ರಿಕೆಟಿಗ ವಿರಾಟ್ ಕೊಹ್ಲಿ ಮಾಜಿ ಗೆಳೆತಿ ಇಸಾಬೆಲ್ಲಾ ಲಿಟೆ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯಾಗೆ ಯಶಸ್ವಿ ಸರ್ಜರಿ; ಫ್ಯಾನ್ಸ್‌ಗೆ ಕ್ರಿಕೆಟಿಗನ ಸಂದೇಶ!
ಸೌತ್ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಯಿಂದ ವಿಶ್ರಾಂತಿ ಪಡೆದ ಹಾರ್ದಿಕ್ ಪಾಂಡ್ಯ, ಶಸ್ತ್ರಿ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ವಾಚ್ ಕಟ್ಟಿಕೊಂಡಿದ್ದಾಗಲೇ ಸರ್ಜರಿ ಮಾಡಿಲಾಯಿತಾ? ಹಹಹ...ಎಂದು ಬ್ರೆಜಿಲ್ ಮಾಡೆಲ್, ಬಾಲಿವುಡ್ ನಟಿ ಇಸಾಬೆಲ್ಲಾ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಬೆನ್ನಿನ ಜೊತೆಗೆ ಮೆದುಳಿಗೂ ಶಸ್ತ್ರಚಿಕಿತ್ಸೆ; ಹಾರ್ದಿಕ್ ಟ್ರೋಲ್ ಮಾಡಿದ ರಾಹುಲ್!
ಇಸಾಬೆಲ್ಲಾ ಪ್ರಶ್ನೆಗೆ ಪಾಂಡ್ಯ ಉತ್ತರ ನೀಡಿದ್ದಾರೆ. ಯಾವಾಗಲು..ಹಹಹ.. ಎಂದು ಪ್ರತಿಕ್ರಿಯಿಸಿದ್ದಾರೆ. ಬ್ರೆಜಿಲ್ ಮಾಡೆಲ್ ಇಸಾಬೆಲ್ಲಾ ಜೊತೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಹೆಸರು ಥಳುಕು ಹಾಕಿಕೊಂಡಿತ್ತು, 2011-12ರಲ್ಲಿ ಕೊಹ್ಲಿ ಹಾಗೂ ಇಸಾಬೆಲ್ಲಾ ಮುಂಬೈನ ರೆಸ್ಟೊರೆಂಟ್ ಒಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಬಳಿಕ ಕೊಹ್ಲಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಗಪ್ ಚುಪ್ ಪ್ರೀತಿ ಆರಂಭಗೊಂಡಿತು. ಇತ್ತ ಇಸಾಬೆಲ್ಲಾ ಬಾಲಿವುಡ್ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಪಾಂಡ್ಯಗೆ ಟ್ವೀಟ್ ಮಾಡೋ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.