ಭಾರತದ ಚೊಚ್ಚಲ NBA ಪಂದ್ಯ; ಐತಿಹಾಸಿಕ ಕ್ಷಣಕ್ಕೆ ರಿಲಯನ್ಸ್ ಫೌಂಡೇಶನ್ ಮಕ್ಕಳು ಸಾಥ್!

By Web Desk  |  First Published Oct 6, 2019, 6:15 PM IST

ಇದೇ ಮೊದಲ ಬಾರಿಗೆ ಭಾರತದಲ್ಲಿ ಆಯೋಜಿಸಲಾದ NBA ಪಂದ್ಯ ಯಶಸ್ವಿ ಜೊತೆಗೆ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಈ ಪಂದ್ಯಕ್ಕೆ ರಿಲಯನ್ಸ್ ಫೌಂಡೇಶನ್ ಮಕ್ಕಳು ಕೂಡ ಸಾಥ್ ನೀಡಿದ್ದರು.


ಮುಂಬೈ(ಅ.06): ಭಾರತದಲ್ಲಿ ಬಾಸ್ಕೆಲ್ ಬಾಲ್ ಕ್ರೀಡೆ ಜನಪ್ರಿಯವಾಗುತ್ತಿದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ಆಯೋಜಿಸಲಾದ ಅಮೆರಿಕಾದ NBA ಬಾಸ್ಕೆಟ್ ಬಾಲ್ ಪಂದ್ಯಕ್ಕೆ ರಿಲಯನ್ಸ್ ಫೌಂಡೇಶನ್ ಮಕ್ಕಳು ಸಾಕ್ಷಿಯಾಗಿದ್ದರು. 10 ರಿಂದ 16 ವರ್ಷದೊಳಗಿನ ಮಕ್ಕಳು ಮುಂಬೈನಲ್ಲಿ ಆಯೋಜಿಸಿದ ಮಹತ್ವದ ಪಂದ್ಯಕ್ಕೆ ಸಾಕ್ಷಿಯಾದರು.

 

“It’s my dream to see India becoming a truly multi-sport nation.” - Mrs Nita Ambani at the first between & , where she thanks for partnering with over the last 6 years, for the Jr. NBA program. pic.twitter.com/1mR16ZFToR

— Reliance Foundation (@ril_foundation)

Tap to resize

Latest Videos

ಇದನ್ನೂ ಓದಿ: ಚೊಚ್ಚಲ NBA ಪಂದ್ಯಕ್ಕೆ ಭಾರತ ಆತಿಥ್ಯ: ಐತಿಹಾಸಿಕ ದಿನವೆಂದು ಬಣ್ಣಿಸಿದ ಪ್ರಧಾನಿ ಮೋದಿ

ಇಂಡಿಯಾನಾ ಪೇಸರ್ ಹಾಗೂ ಸಾಕ್ರಮೆಂಟೋ ಕಿಂಗ್ಸ್ ನಡುವಿನ ಪಂದ್ಯ ವೀಕ್ಷಿಸಲು ರಿಲಯನ್ಸ್ ಫೌಂಡೇಶನ್‌ನ ಜ್ಯೂನಿಯರ್ NBA ತರಬೇತಿ ಪಡೆದ ಮಕ್ಕಳು ಹಾಜರಾಗಿದ್ದರು. NBA ಜ್ಯೂನಿಯರ್ ಪ್ರೊಗ್ರಾಮ್ ಜೊತೆಗಿನ ರಿಲಯನ್ಸ್ ಒಪ್ಪಂದಕ್ಕೆ 6 ವರ್ಷ ತುಂಬಿದೆ. ಈ ಸಂದರ್ಭದಲ್ಲಿ NBA ತರಬೇತಿ ಪಡೆಯುವ ಮಕ್ಕಳಿಗೆ ಲೈವ್ ಪಂದ್ಯ ನೋಡುವ ಅವಕಾಶ ಸಿಕ್ಕಿದೆ ಎಂದು ನೀತಾ ಅಂಬಾನಿ ಹೇಳಿದರು.

ಜ್ಯೂನಿಯರ್ NBA ಪ್ರೊಗ್ರಾಂ ಅಡಿಯಲ್ಲಿ 11 ಮಿಲಿಯನ್ ಮಕ್ಕಳಿಗೆ  ತರಬೇತಿ ನೀಡಲಾಗಿದೆ. ಭಾರತದ  20 ರಾಜ್ಯಗಳ 34 ನಗರಗಳಲ್ಲಿ 10,000 ಕೋಚ್‌ಗಳು ಮಕ್ಕಳಿಗೆ ತರಬೇತಿ ನೀಡಿದ್ದಾರೆ. ಭಾರತದ ಇತರ ಕ್ರೀಡೆಗಳಲ್ಲೂ ಸಾಧನೆ ಮಾಡುತ್ತಿದೆ. ಇದನ್ನು ನೋಡಲು ಸಂತಸವಾಗುತ್ತಿದೆ ಎಂದು ನೀತಾ ಅಂಬಾನಿ ಹೇಳಿದರು. ಪಂದ್ಯ ಆರಂಭಕ್ಕೂ ಮುನ್ನ ನೀತಾ ಅಂಬಾನಿ ಮ್ಯಾಚ್ ಬಾಲ್ ಹಸ್ತಾಂತರಿಸಿದರು. 
 

click me!