ಸ್ಪಿನ್ ಮನಸ್ಸಿಗೆ ಸಂಬಂಧಿಸಿದ್ದು: ಹರ್ಭಜನ್

Published : Nov 11, 2016, 12:56 PM ISTUpdated : Apr 11, 2018, 12:49 PM IST
ಸ್ಪಿನ್ ಮನಸ್ಸಿಗೆ ಸಂಬಂಧಿಸಿದ್ದು: ಹರ್ಭಜನ್

ಸಾರಾಂಶ

‘‘ಸ್ಪಿನ್ ಬೌಲಿಂಗ್‌ನಲ್ಲಿ ಯಶಸ್ಸು ಸಾಸಬೇಕೆಂದರೆ ಮೊದಲು ಮನಸ್ಸನ್ನು ನಿಶ್ಚಲವಾಗಿಟ್ಟುಕೊಂಡಿರಬೇಕು. ಕ್ಷಮತೆಯೊಂದಿಗೆ ಸದಾ ಎಚ್ಚರಿಕೆಯಿಂದಿರಬೇಕು. ವಿಕೆಟ್ ಗಳಿಸುವ ದಾಹ ಹಾಗೂ ಎದುರಾಳಿ ಬ್ಯಾಟ್ಸ್‌ಮನ್‌ಗಳ ಬಲ, ದೌರ್ಬಲ್ಯಗಳನ್ನು ಅರಿಯುವಂಥ ಜಾಣ್ಮೆಯನ್ನು ಹೊಂದಿರಬೇಕು" - ಹರ್ಭಜನ್ ಸಿಂಗ್  

ನವದೆಹಲಿ(ನ.11): ಸ್ಪಿನ್ ಬೌಲಿಂಗ್ ಕೇವಲ ಕೈಚಳಕ್ಕೆ ಸಂಬಂಸಿದ ವಿಚಾರವಲ್ಲ, ಅದು ಮಾನಸಿಕ ಸದೃಢತೆಗೆ ಸಂಬಂಧಪಟ್ಟ ವಿಚಾರವೂ ಆಗಿದೆ ಎಂದು ಟೀಂ ಇಂಡಿಯಾ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಸ್ಪಿನ್ ಬೌಲಿಂಗ್‌ನಲ್ಲಿ ಯಶಸ್ಸು ಸಾಸಬೇಕೆಂದರೆ ಮೊದಲು ಮನಸ್ಸನ್ನು ನಿಶ್ಚಲವಾಗಿಟ್ಟುಕೊಂಡಿರಬೇಕು. ಕ್ಷಮತೆಯೊಂದಿಗೆ ಸದಾ ಎಚ್ಚರಿಕೆಯಿಂದಿರಬೇಕು. ವಿಕೆಟ್ ಗಳಿಸುವ ದಾಹ ಹಾಗೂ ಎದುರಾಳಿ ಬ್ಯಾಟ್ಸ್‌ಮನ್‌ಗಳ ಬಲ, ದೌರ್ಬಲ್ಯಗಳನ್ನು ಅರಿಯುವಂಥ ಜಾಣ್ಮೆಯನ್ನು ಹೊಂದಿರಬೇಕು. ಅಲ್ಲದೆ, ತಂತ್ರಗಾರಿಕೆಯನ್ನು ಬದಲಿಸುವ ಛಾತಿಯಿರಬೇಕು’’ ಎಂದು ಅವರು ತಿಳಿಸಿದ್ದಾರೆ.

ಕಳೆದ ಐಪಿಎಲ್ ನಂತರ ಕ್ರಿಕೆಟ್'ನಿಂದ ದೂರ ಉಳಿದಿರುವ ಭಜ್ಜಿ ಸಧ್ಯ ಅಂತರಾಷ್ಟ್ರೀಯ ಕ್ರಿಕೆಟ್ ಆಡಲು ತಯಾರಿ ನಡೆಸಿಲ್ಲ ಎಂದಿರುವ ಅವರು, ಮುಂದಿನ ರಣಜಿ ಟ್ರೋಫಿಯಲ್ಲಿ ಪಂಜಾಬ್ ತಂಡದ ಪರ ಕಣಕ್ಕಿಳಿಯಲಿದ್ದೇನೆ ಎಂದು 417 ಟೆಸ್ಟ್ ವಿಕೆಟ್ ಪಡೆದಿರುವ ಭಜ್ಜಿ ಹೇಳಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

60 ದೇಶಗಳಿಂದ 1.5 ಲಕ್ಷಕ್ಕೂ ಹೆಚ್ಚು ಬೈಕರ್ಸ್‌; Royal Enfield One Ride 2026 ಹೊಸ ದಾಖಲೆ!
ವಿರಾಟ್ ಕೊಹ್ಲಿ '55ನೇ ಶತಕ'ದ ಹಿಂದಿದೆ ಅದ್ಭುತ ನ್ಯೂಮರಾಲಜಿ ಲೆಕ್ಕಾಚಾರ: 'ಡಬಲ್ 5' ಅಂದ್ರೆ ಏನು ಗೊತ್ತಾ?