ಸೆಲಿಬ್ರೆಟಿ ಕ್ರಿಕೆಟ್ ಲೀಗ್'ನಲ್ಲೂ ಮಿಂಚಲಿದ್ದಾರೆ ಈ ದಿಗ್ಗಜ ಕ್ರಿಕೆಟಿಗರು

Published : Nov 11, 2016, 10:44 AM ISTUpdated : Apr 11, 2018, 12:49 PM IST
ಸೆಲಿಬ್ರೆಟಿ ಕ್ರಿಕೆಟ್ ಲೀಗ್'ನಲ್ಲೂ ಮಿಂಚಲಿದ್ದಾರೆ ಈ ದಿಗ್ಗಜ ಕ್ರಿಕೆಟಿಗರು

ಸಾರಾಂಶ

2017ರ ಸೆಲಿಬ್ರಿಟಿ ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ಯಾವ್ಯಾವ ಮಾಜಿ ಕ್ರಿಕೆಟಿಗರು  ಭಾಗವಹಿಸುತ್ತಿದ್ದಾರೆ ಎಂಬ ಬಗ್ಗೆ ಅಂತಿಮ ಪಟ್ಟಿ ಸಿದ್ದವಾಗದಿದ್ದರು. ವಿರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ, ಜಾಂಟಿ ರೋಡ್ಸ್, ಡೇನಿಯಲ್ ವಿಟೋರಿ, ಕುಮಾರ್ ಸಂಗಾಕ್ಕರ, ಜಹೀರ್ ಖಾನ್ ಸೇರಿದಂತೆ ಇನ್ನೂ ಅನೇಕ ಮಾಜಿ ಕ್ರಿಕೆಟಿಗರು ಭಾಗವಹಿಸಲಿದ್ದಾರೆ.

ನವದೆಹಲಿ(ನ.11): ತಮ್ಮ ಮನೋಜ್ಞ ಕ್ರಿಕೆಟ್ ಮೂಲಕ ಕ್ರೀಡಾ ಪ್ರೇಮಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವ ಕ್ರಿಕೆಟ್ ದಿಗ್ಗಜರು ಮತ್ತೊಮ್ಮೆ ಮೈದಾನಕ್ಕಿಳಿಯಲಿದ್ದಾರೆ. ಹೌದು ಏಳನೇ ಆವೃತ್ತಿಯ ಸೆಲಿಬ್ರಿಟಿ ಕ್ರಿಕೆಟ್ ಲೀಗ್ ಮುಂದಿನ ವರ್ಷದ ಜನವರಿ ಹಾಗೂ ಫೆಬ್ರವರಿಯಲ್ಲಿ ನಡೆಯಲಿದೆ. ಮತ್ತೊಮ್ಮೆ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಲು ಮಾಜಿ ಕ್ರಿಕೆಟಿಗರು ರೆಡಿಯಾಗಿದ್ದಾರೆ.

2017ರ ಸೆಲಿಬ್ರಿಟಿ ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ಯಾವ್ಯಾವ ಮಾಜಿ ಕ್ರಿಕೆಟಿಗರು  ಭಾಗವಹಿಸುತ್ತಿದ್ದಾರೆ ಎಂಬ ಬಗ್ಗೆ ಅಂತಿಮ ಪಟ್ಟಿ ಸಿದ್ದವಾಗದಿದ್ದರು. ವಿರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ, ಜಾಂಟಿ ರೋಡ್ಸ್, ಡೇನಿಯಲ್ ವಿಟೋರಿ, ಕುಮಾರ್ ಸಂಗಾಕ್ಕರ, ಜಹೀರ್ ಖಾನ್ ಸೇರಿದಂತೆ ಇನ್ನೂ ಅನೇಕ ಮಾಜಿ ಕ್ರಿಕೆಟಿಗರು ಭಾಗವಹಿಸಲಿದ್ದಾರೆ ಎಂದು ಸೆಲಿಬ್ರಿಟಿ ಕ್ರಿಕೆಟ್ ಲೀಗ್ ಟೂರ್ನಿಯ ಸ್ಥಾಪಕ ಅಧ್ಯಕ್ಷ ವಿಷ್ಣುವರ್ಧನ್ ಇಂದೂರಿ ತಿಳಿಸಿದ್ದಾರೆ.

2011ರಲ್ಲಿ ಮೊಟ್ಟಮೊದಲ ಬಾರಿಗೆ ಸೆಲಿಬ್ರಿಟಿ ಕ್ರಿಕೆಟ್ ಲೀಗ್ ಅನ್ನು ಪರಿಚಯಿಸಲಾಗಿತ್ತು. ಕಳೆದ ಆರು ಆವೃತ್ತಿಗಳು ಯಶಸ್ವಿಯಾಗಿ ಆಯೋಜಿಸಲಾಗಿದೆ. ಈ ಬಾರಿಯ ಟೂರ್ನಿಯು ಹೈದರಾಬಾದ್, ಚೆನ್ನೈ, ಬೆಂಗಳೂರು ಹಾಗೂ ರಾಂಚಿ ಸೇರಿದಂತೆ ಇನ್ನೂ ಹಲವಡೆ ಪಂದ್ಯಗಳು ಜರುಗಲಿವೆ.  

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್‌ನಿಂದ ಶುಭ್‌ಮನ್ ಗಿಲ್ ಹೊರಬಿದ್ದ ಬೆನ್ನಲ್ಲೇ ಗೌತಮ್ ಗಂಭೀರ್ ರಿಯಾಕ್ಷನ್ ಹೀಗಿತ್ತು ನೋಡಿ! ವಿಡಿಯೋ ವೈರಲ್
ಟಿ20 ವಿಶ್ವಕಪ್ ತಂಡದಿಂದ ಗಿಲ್‌ಗೆ ಔಟ್: ಅಷ್ಟಕ್ಕೂ ಕೊನೆಯ ಕ್ಷಣದಲ್ಲಿ ಆಯ್ಕೆ ಸಮಿತಿ ಈ ತೀರ್ಮಾನ ಮಾಡಿದ್ದೇಕೆ?