ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್. ಆದರೆ ಬಾಲಿವುಡ್ ನಟ ಕೊಹ್ಲಿ ವಿರುದ್ಧ ಗರಂ ಆಗಿದ್ದಾರೆ. ಕೊಹ್ಲಿ ಅತ್ಯಂತ ಕೆಟ್ಟ ಆಟಗಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಬೈ(ಡಿ.17): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರೆಸ್ಸಿವ್ ಕ್ಯಾಪ್ಟನ್ ಎಂದೇ ಹೆಸರುವಾಸಿ. ಆದರೆ ಕೆಲವೊಮ್ಮೆ ಕೊಹ್ಲಿ ಅತೀರೇಕವಾಗಿ ವರ್ತಿಸಿದ ಊದಾಹರಣೆಗಳಿವೆ. ವಿರಾಟ್ ಕೊಹ್ಲಿಯ ಮೈದಾನದಲ್ಲಿನ ವರ್ತನೆಗೆ ಬಾಲಿವುಡ್ ಹಿರಿಯ ನಟ ನಾಸಿರುದ್ದೀನ್ ಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪರ್ತ್ ಟೆಸ್ಟ್: ಆಸಿಸ್ ಬಿಗಿ ಹಿಡಿತ- ಸಂಕಷ್ಟದಲ್ಲಿ ಭಾರತ!
ಪರ್ತ್ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಎದುರಾಳಿ ಆಸ್ಟ್ರೇಲಿಯಾ ಕ್ರಿಕೆಟಿಗರ ವಿರುದ್ಧ ಸ್ಲೆಡ್ಜಿಂಗ್ ಇಳಿದಿದ್ದರು. ಕೊಹ್ಲಿ ಹಾಗೂ ಆಸ್ಟ್ರೇಲಿಯಾ ನಾಯಕ ಟಿಮ್ ಪೈನೆ ನಡುವಿನ ಸಮರ ತಾರಕಕ್ಕೇರಿತ್ತು. ಇಷ್ಟೇ ಅಲ್ಲ ಅಂಪೈರ್ ಮಧ್ಯಪ್ರವೇಶಸಿಬೇಕಾಯಿತು. ಕೊಹ್ಲಿ ಈ ವರ್ತನೆಗೆ ನಾಸಿರುದ್ದೀನ್ ಶಾ ಗರಂ ಆಗಿದ್ದಾರೆ. ಕೊಹ್ಲಿ ಅತ್ಯುತ್ತಮ ಬ್ಯಾಟ್ಸಮನ್, ಆದರೆ ಮೈದಾನದಲ್ಲಿ ಅತೀ ಕೆಟ್ಟ ವರ್ತನೆಯ ಆಟಗಾರ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಸಾಕ್ಷಿ ಶೂ ಲೇಸ್ ಕಟ್ಟಿದ ಧೋನಿ..!
ಕೊಹ್ಲಿ ಆಟವನ್ನ ಕೆಟ್ಟ ನಡವಳಿಕೆ ನುಂಗಿ ಹಾಕುತ್ತಿದೆ. ಇಷ್ಟೇ ಅಲ್ಲ ನಾನು ಭಾರತ ಬಿಡುವ ಯಾವುದೇ ಯೋಚನೆ ಇಲ್ಲ ಎಂದು ಕೊಹ್ಲಿ ಭಾರತ ಬಿಟ್ಟ ತೊಲಗಿ ವಿವಾದಕ್ಕೂ ನಾಸಿರುದ್ದೀನ್ ಶಾ ತಿರುಗೇಟು ನೀಡಿದ್ದಾರೆ.