ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪರ್ತ್ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ ಮುಕ್ತಾಯಗೊಂಡಿದೆ. 4ನೇ ದಿನವೂ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ. ಗೆಲುವಿಗಾಗಿ ಹೋರಾಟ ನಡೆಸುತ್ತಿರುವ ಟೀಂ ಇಂಡಿಯಾ ಒತ್ತಡಕ್ಕೆ ಸಿಲುಕಿದೆ. ಇಲ್ಲಿದೆ ಹೈಲೈಟ್ಸ್.
ಪರ್ತ್(ಡಿ.17): ಆಸ್ಟ್ರೇಲಿಯಾ ವಿರುದ್ದದ 2ನೇ ಟೆಸ್ಟ್ ಪಂದ್ಯದ ಗೆಲುವು ಭಾರತಕ್ಕೆ ಮುಳ್ಳಿನ ಹಾದಿಯಾಗಿ ಪರಿಣಮಿಸಿದೆ. ಗೆಲುವಿಗೆ 287 ರನ್ ಟಾರ್ಗೆಟ್ ಪಡೆದಿರುವ ವಿರಾಟ್ ಕೊಹ್ಲಿ ಸೈನ್ಯ ಈಗಾಗಲೇ ಪ್ರಮುಖ 5 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದೆ.
ಇದನ್ನೂ ಓದಿ: ಔಟ್/ನಾಟೌಟ್ ನೀವೇ ಹೇಳಿ: ಚರ್ಚೆಗೆ ಗ್ರಾಸವಾದ ಕೊಹ್ಲಿ ಕ್ಯಾಚ್..!
ಆಸಿಸ್ ತಂಡವನ್ನ 243 ರನ್‌ಗೆ ಆಲೌಟ್ ಮಾಡಿದ ಭಾರತ ದ್ವಿತೀಯ ಇನ್ನಿಂಗ್ಸ್ ಆರಂಭಿಸಿತು. ಎಂದಿನಂತೆ ಟೀಂ ಇಂಡಿಯಾಗೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಕೆಎಲ್ ರಾಹುಲ್ ಶೂನ್ಯ ಸುತ್ತಿದರೆ, ಭರವಸೆ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಕೇವಲ 4 ರನ್‌ಗೆ ಔಟಾದರು. 13 ರನ್‌ಗಳಿಸುವಷ್ಟರಲ್ಲೇ ಭಾರತ 2 ವಿಕೆಟ್ ಕಳೆದುಕೊಂಡಿತು.
ಇದನ್ನೂ ಓದಿ: ಆರ್’ಸಿಬಿಗೆ ಶಾಕ್ ಕೊಟ್ಟ ಗ್ಯಾರಿ ಕರ್ಸ್ಟನ್..!
ನಾಯಕ ವಿರಾಟ್ ಕೊಹ್ಲಿ 17 ರನ್ ಸಿಡಿಸಿ ಪೆವಿಲಿಯನ್ ಸೇರಿದರು. ಆದರೆ ಕೊಹ್ಲಿ ಔಟ್ ತೀರ್ಪು ವಿವಾದಕ್ಕೆ ಕಾರಣವಾಯಿತು. ಇನ್ನು 67 ಎಸೆತ ಎದುರಿಸಿ ಡಿಫೆನ್ಸ್‌ಗೆ ಹೆಚ್ಚು ಒತ್ತು ನೀಡಿದ ಮುರಳಿ ವಿಜಯ್ 20 ರನ್ ದಾಟಲಿಲ್ಲ. 55 ರನ್‌ಗೆ 4 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತು.
ಇದನ್ನೂ ಓದಿ: ಸೌರವ್ ಗಂಗೂಲಿ ನಾಯಕತ್ವ ಉಳಿಸಿತ್ತು ಲಕ್ಷ್ಮಣ್ 281 ರನ್!
ಅಜಿಂಕ್ಯ ರಹಾನೆ ಹಾಗೂ ಹನುಮಾ ವಿಹಾರಿ ಹೋರಾಟ ನಡೆಸಿದರು. ಆದರೆ ರಹಾನೆ 30 ರನ್ ಸಿಡಿಸಿದ ರಹಾನೆ ಔಟಾಗುತ್ತಿದ್ದಂತೆ ಟೀಂ ಇಂಡಿಯಾ ಪಾಳಯದಲ್ಲಿ ಆತಂಕ ಗೆರೆ ಹೆಚ್ಚಾಯಿತು. ಸದ್ಯ ಹನುಮಾ ವಿಹಾರಿ ಹಾಗೂ ರಿಷಬ್ ಪಂತ್ ಕ್ರೀಸ್ ಕಾಯ್ದುಕೊಂಡಿದ್ದಾರೆ. ದಿನದಾಟ ಅಂತ್ಯದಲ್ಲಿ ಭಾರತ 5 ವಿಕೆಟ್ ನಷ್ಟಕ್ಕೆ 112 ರನ್ ಸಿಡಿಸಿದೆ. ಗೆಲವಿಗೆ ಇನ್ನೂ 175 ರನ್ ಗಳಿಸಬೇಕಿದೆ.