2008ರ ಐಪಿಎಲ್ ಟೂರ್ನಿಯಲ್ಲಿ ಸ್ಪಿನ್ನರ್ ಹರ್ಭಜನ್ ಸಿಂಗ್, ಅಗ್ರೆಸ್ಸೀವ್ ಕ್ರಿಕೆಟಿಗ ಎಸ್ ಶ್ರೀಶಾಂತ್‌ಗೆ ಕೆನ್ನೆಗೆ ಭಾರಿಸಿದ ಪ್ರಕರಣ ಯಾರು ಮರೆತಿಲ್ಲ. ನಿಜಕ್ಕೂ ಅಂದು ಏನಾಯ್ತು ಅನ್ನೋದರ ಕುರಿತು ಇನ್ನೂ ಸ್ಪಷ್ಟತೆ ಇಲ್ಲ. ಇದೀಗ ಸ್ವತಃ ಶ್ರೀಶಾಂತ್ ಕಪಾಳ ಮೋಕ್ಷ ಪ್ರಕರಣವನ್ನ ಬಿಚ್ಚಿಟ್ಟಿದ್ದಾರೆ.
ಪುಣೆ(ನ.23): ಹಿಂದಿ ಬಿಗ್‌ಬಾಸ್ ಮನೆಯಲ್ಲಿ ವಿವಾದಿತ ಸ್ಪರ್ಧಿಯಾಗಿರುವ ಕ್ರಿಕೆಟಿಗ ಎಸ್.ಶ್ರೀಶಾಂತ್ ಮತ್ತೆ ಸುದ್ದಿಯಲ್ಲಿದ್ದಾರೆ. 2008ರ ಐಪಿಎಲ್ ಟೂರ್ನಿಯಲ್ಲಿ ನಡೆದ ಕಪಾಳ ಮೋಕ್ಷ ಪ್ರಕರಣವನ್ನ ಕೇರಳಾ ಎಕ್ಸ್‌ಪ್ರೆಸ್ ಶ್ರೀಶಾಂತ್ ಬಿಚ್ಚಿಟ್ಟಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿನ ಕ್ಯಾಪ್ಟನ್ ಟಾಸ್ಕ್‌ನಿಂದ 2008ರ ಐಪಿಎಲ್ ಕಪಾಳ ಮೋಕ್ಷ ಪ್ರಕರಣ ಮತ್ತೆ ಸದ್ದು ಮಾಡಿದೆ. ಇಷ್ಟೇ ಅಲ್ಲ ಅಂದು ನಿಜಕ್ಕೂ ನಡೆದಿದ್ದೇನು ಅನ್ನೋದನ್ನ ಶ್ರೀ ಬಿಗ್‌ಬಾಸ್ ಸಹ ಸ್ಪರ್ಧಿ ಜೊತೆ ಹೇಳಿಕೊಂಡಿದ್ದಾರೆ.
2008ರ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿತ್ತು. ಶ್ರೀಶಾಂತ್ ಕಿಂಗ್ಸ್ ಇಲೆವೆನ ಪಂಜಾಬ್ ಪರ ಕಣಕ್ಕಿಳಿದಿದ್ದರೆ, ಹರ್ಭಜನ್ ಸಿಂಗ್ ಮುಂಬೈ ಇಂಡಿಯನ್ಸ್ ಪರ ಆಡಿದ್ದರು.
ಈ ಪಂದ್ಯದಲ್ಲಿ ಪಂಜಾಬ್ ಗೆಲುವಿನ ನಗೆ ಬೀರಿತ್ತು. ಪಂದ್ಯದ ಬಳಿಕ ಶೇಕ್‌ಹ್ಯಾಂಡ್ ಮಾಡಲು ಹೋದ ನನಗೆ ಹರ್ಭಜನ್ ಸಿಂಗ್ ಕೆನ್ನೆಗೆ ಹೊಡೆದರು. ನಾನು ತುಂಬಾ ಅಗ್ರೆಸ್ಸೀವ್ ಒಪ್ಪಿಕೊಳ್ಳುತ್ತೇನೆ. ಆದರೆ ಅದು ಕೇವಲ ಕಪಾಳ ಮೋಕ್ಷ ಆಗಿರಿಲಿಲ್ಲ, ಹಲ್ಲೆಯಾಗಿತ್ತು. ಆ ಸಂದರ್ಭದಲ್ಲಿ ನಾನು ಅಸಾಹಾಯಕನಾಗಿದ್ದೆ. ಅದು ನನಗೆ ಅಳು ತರಿಸಿತ್ತು ಎಂದು ಶ್ರೀಶಾಂತ್ ಕಪಾಳ ಮೋಕ್ಷ ಪ್ರಕರಣವನ್ನ ಬಿಚ್ಚಿಟ್ಟಿದ್ದಾರೆ.