ಸಯ್ಯದ್‌ ಮೋದಿ ಟೂರ್ನಿ: ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟ ಸೈನಾ!

Published : Nov 23, 2018, 10:04 AM ISTUpdated : Nov 23, 2018, 10:06 AM IST
ಸಯ್ಯದ್‌ ಮೋದಿ  ಟೂರ್ನಿ: ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟ ಸೈನಾ!

ಸಾರಾಂಶ

ಸಯ್ಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೈನಾ ನೆಹ್ವಾಲ್ ಹಾಗೂ ಸಮೀರ್ ವರ್ಮಾ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಸಯ್ಯದ್ ಮೋಡಿ ಟೂರ್ನಿ ಪಂದ್ಯದ ಹೈಲೈಟ್ಸ್ ಇಲ್ಲಿದೆ.

ಲಖನೌ(ನ.23): ಹಾಲಿ ಚಾಂಪಿಯನ್‌ ಸಮೀರ್‌ ವರ್ಮಾ, ಸೈನಾ ನೆಹ್ವಾಲ್‌ ಮತ್ತು ಪಾರುಪಳ್ಳಿ ಕಶ್ಯಪ್‌, ಇಲ್ಲಿ ನಡೆಯುತ್ತಿರುವ ಸಯ್ಯದ್‌ ಮೋದಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ವಿಶ್ವ ಸೂಪರ್‌ ಟೂರ್‌ನಲ್ಲಿ ಕ್ವಾರ್ಟರ್‌ಫೈನಲ್‌ ಪ್ರವೆಶಿಸಿದ್ದಾರೆ. 

 

 

ಮಿಶ್ರ ಡಬಲ್ಸ್‌ನಲ್ಲಿ ಸಾತ್ವಿಕ್‌-ಅಶ್ವಿನಿ ಜೋಡಿ ಎಂಟರಘಟ್ಟಕ್ಕೆ ಲಗ್ಗೆ ಇಟ್ಟಿದೆ. ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ನಲ್ಲಿ ಸೈನಾ, ತಮ್ಮವರೇ ಆದ ಅಮೋಲಿಕಾ ವಿರುದ್ಧ 21-14, 21-9 ಗೇಮ್‌ಗಳಲ್ಲಿ ಗೆದ್ದರು. ಪುರುಷರ ಸಿಂಗಲ್ಸ್‌ನಲ್ಲಿ ಕಶ್ಯಪ್‌, ಇಂಡೋನೇಷ್ಯಾದ ಫಿರ್ಮನ್‌ ವಿರುದ್ಧ 9-21, 22-20, 21-8 ಗೇಮ್‌ಗಳಲ್ಲಿ ಜಯಿಸಿದರು. 

ಸಮೀರ್‌ ವರ್ಮಾ, ಚೀನಾದ ಜಾವೊ ಜನ್ಪೆಂಗ್‌ ವಿರುದ್ಧ 22-20, 21-17 ಗೇಮ್‌ಗಳಲ್ಲಿ ಗೆದ್ದರು. ಪುರುಷರ ಹಾಗೂ ಮಹಿಳಾ ಸಿಂಗಲ್ಸ್‌ನಲ್ಲಿ ತಲಾ ಮೂವರು ಭಾರತೀಯರು ಅಂತಿಮ 8ರ ಘಟ್ಟಪ್ರವೇಶಿಸಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?
ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ