ವಿಶ್ವಕಪ್‌ನಲ್ಲಿ ಯುವಿಗಿಂತ ಮೊದಲು ಕಣಕ್ಕಳಿದಿದ್ದೇಕೆ?-ಧೋನಿ ಬಿಚ್ಚಿಟ್ರು ಸತ್ಯ!

By Web DeskFirst Published Nov 23, 2018, 10:35 AM IST
Highlights

2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಅದ್ಬುತ ಪ್ರದರ್ಶನ ನೀಡಿ ಗೆಲುವು ದಾಖಲಿಸಿತ್ತು. ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನಾಯಕ ಎಂ.ಎಸ್.ಧೋನಿ ಬ್ಯಾಟಿಂಗ್ ಆರ್ಡರ್‌ನಲ್ಲಿ ಬಡ್ತಿ ಪಡೆದು ಕಣಕ್ಕಿಳಿದಿದ್ದರು. ಅಷ್ಟಕ್ಕೂ ಧೋನಿ ಈ ನಿರ್ಧಾರಕ್ಕೆ ಕಾರಣವೇನು? ಸ್ವತಃ ಧೋನಿ ಈ ಕುರಿತು ಮಾತನಾಡಿದ್ದಾರೆ. 

ಮುಂಬೈ(ನ.23): 2011ರ ವಿಶ್ವಕಪ್ ಯಾರಿಗೆ ನೆನಪಿಲ್ಲ ಹೇಳಿ? ಐತಿಹಾಸಿಕ ಗೆಲುವಿನ ಸಂಭ್ರಮ ಇನ್ನು ಮಾಸಿಲ್ಲ. ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯದಲ್ಲಿ ಧೋನಿ ಸಿಕ್ಸರ್ ಮೂಲಕ ಗೆಲುವು ದಾಖಲಿಸಿದ ಕ್ಷಣ ಇನ್ನು ಕಣ್ಣಿಗೆ ಕಟ್ಟಿದಂತಿದೆ. ಈ ಫೈನಲ್ ಪಂದ್ಯದಲ್ಲಿ ಯುವರಾಜ್ ಸಿಂಗ್ ಮೊದಲು ಧೋನಿ ಕಣಕ್ಕಿಳಿದು ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು.

2011ರ ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಅತ್ಯುತ್ತಮ ಆಲ್ರೌಂಡರ್ ಪ್ರದರ್ಶನ ನೀಡಿದ್ದಾರೆ. ಭರ್ಜರಿ ಫಾರ್ಮ್‌ನಲ್ಲಿದ್ದ ಯುವಿ ಬದಲು ಎಂ.ಎಸ್.ಧೋನಿ ದಿಢೀರ್ ಬ್ಯಾಟಿಂಗ್ ಇಳಿದಿದ್ದರು. ಈ ನಿರ್ಧಾರಕ್ಕೆ ಧೋನಿ ಕಾರಣ ಹೇಳಿದ್ದಾರೆ.

ಭಾರತ 3ನೇ ವಿಕೆಟ್ ಕಳೆದುಕೊಂಡ ವೇಲೆ ಶ್ರೀಲಂಕ ಹಿರಿಯ ಸ್ಪಿನ್ನರ್ ಮುತ್ತಯ್ಯ ಮರಳೀಧರನ್ ದಾಳಿ ಆರಂಭಿಸಿದ್ದರು. ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದ ಮುರಳೀಧರನ್ ಬೌಲಿಂಗ್ ಕುರಿತು ಎಂ.ಎಸ್.ಧೋನಿ ಚೆನ್ನಾಗಿ ಅರಿತಿದ್ದರು. ನೆಟ್ಸ್‌ನಲ್ಲಿ ಧೋನಿ ಅತೀ ಹೆಚ್ಚು ಬಾರಿ ಮುರಳೀಧರನ್ ಅವರನ್ನ ಎದುರಿಸಿದದ್ದರು. ಹೀಗಾಗಿ ಮುರಳಿ ಬೌಲಿಂಗ್‌ನಲ್ಲಿ ರನ್‌ಗಳಿಸುವ ವಿಶ್ವಾಸದಲ್ಲಿದ್ದ ಧೋನಿ, ಯುವರಾಜ್ ಸಿಂಗ್ ಬದಲು ಕಣಕ್ಕಿಳಿದೆ ಎಂದು ಧೋನಿ ಹೇಳಿದ್ದಾರೆ.

ಶ್ರೀಲಂಕ ನೀಡಿದ 275 ರನ್ ಗುರಿ ಚೇಸ್ ಮಾಡಿದ ಭಾರತ 28 ವರ್ಷಗಳ ಬಳಿಕ ವಿಶ್ವಕಪ್ ಪ್ರಶಸ್ತಿ ಗೆದ್ದು ಇತಿಹಾಸ ರಚಿಸಿತು. ಇದೀಗ 2019ರ ವಿಶ್ವಕಪ್ ಗೆಲುವಿಗೆ ಟೀಂ ಇಂಡಿಯಾ ಚಿತ್ತ ನೆಟ್ಟಿದೆ.  

click me!