ಬೆಂಗಳೂರು ಓಪನ್ ಟೆನಿಸ್ ಟೂರ್ನಿಯ ಡಬಲ್ಸ್‌ನಲ್ಲಿ ಭಾರತದ ಜೋಡಿ ರನ್ನರ್ ಅಪ್
ಡಬಲ್ಸ್‌ನಲ್ಲಿ ಕೊರಿಯಾದ ಚುಂಗ್-ಚೈನೀಸ್ ತೈಪೆಯ ಯು ಚಾಂಪಿಯನ್
ಕಳೆದೆರಡು ಆವೃತ್ತಿಯ ಡಬಲ್ಸ್‌ನಲ್ಲಿ ಭಾರತೀಯರು ಚಾಂಪಿಯನ್ ಆಗಿದ್ದರು
ಬೆಂಗಳೂರು(ಫೆ.26): 5ನೇ ಆವೃತ್ತಿಯ ಬೆಂಗಳೂರು ಓಪನ್ ಎಟಿಪಿ ಟೆನಿಸ್ ಟೂರ್ನಿಯಲ್ಲಿ ಭಾರತದ ಡಬಲ್ಸ್ ಜೋಡಿ ಅನಿರುದ್ಧ್ ಚಂದ್ರಶೇಖರ್ ಹಾಗೂ ವಿಜಯ್ ಸುಂದರ್ ಪ್ರಶಾಂತ್ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಕಳೆದೆರಡು ಆವೃತ್ತಿಗಳಲ್ಲಿ ಡಬಲ್ಸ್‌ನಲ್ಲಿ ಭಾರತದ ಜೋಡಿ ಚಾಂಪಿಯನ್ ಆಗಿದ್ದರೂ ಈ ಬಾರಿ ಪ್ರಶಸ್ತಿ ಗೆಲ್ಲಲು ಭಾರತೀಯರು ವಿಫಲರಾದರು.
ಶನಿವಾರ ನಡೆದ ಪುರುಷರ ಡಬಲ್ಸ್ ಫೈನಲ್ನಲ್ಲಿ ಭಾರತ ಜೀಡು ದಕ್ಷಿಣ ಕೊರಿಯಾದ ಚುಂಗ್ ಯನ್ ಸಿಯಾಂಗ್-ಚೈನೀಸ್ ತೈಪೆಯ ಯು ಸು ವಿರುದ್ಧ 6-3, 6-7, 9-11ರಿಂದ ವೀರೋಚಿತ ಸೋಲು ಕಂಡಿತು. ಆರಂಭದಲ್ಲೇ ಪ್ರಾಬಲ್ಯ ಸಾಧಿಸಿ ಮೊದಲ ಸೆಟ್ ಗೆದ್ದ ಭಾರತೀಯ ಜೋಡಿ 2ನೇ ಸೆಟ್ನಲ್ಲೂ ಉತ್ತಮ ಆರಂಭ ಪಡೆಯಿತು. ಆದರೆ ಬಳಿಕ ತಿರುಗೇಟು ನೀಡಿದ ಕೊರಿಯಾ-ತೈಪೆ ಜೋಡಿ 2ನೇ ಸೆಟ್ನಲ್ಲಿ ತೀವ್ರ ಹೋರಾಟ ಪ್ರದರ್ಶಿಸಿ ಪಂದ್ಯ ಸಮಬಲಗೊಳಿಸಲು ಯಶಸ್ವಿಯಾಯಿತು. ಕೊನೆ ಸೆಟ್ನಲ್ಲಿ ಉಭಯ ಜೋಡಿಗಳಿಂದ ತೀವ್ರ ಪೈಪೋಟಿ ಕಂಡುಬಂದರೂ ಭಾರತದ ಜೋಡಿಗೆ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ.
2017ರ ಚೊಚ್ಚಲ ಅವೃತ್ತಿಯ ಡಬಲ್ಸ್‌ನಲ್ಲಿ ಭಾರತದ ದಿವಿಜ್ ಶರಣ್-ರಷ್ಯಾದ ಎಲ್ಗಿನ್ ಪ್ರಶಸ್ತಿ ಗೆದ್ದಿದ್ದರು. 2018ರಲ್ಲಿ ಟ್ರೋಫಿ ಆಸ್ಪ್ರೇಲಿಯಾದ ಮ್ಯಾಕ್ಸ್ ಪುರ್ಸೆಲ್-ಲ್ಯುಕ್ ಸ್ಯಾವಿಲ್ಲೆ ಜೋಡಿಯ ಪಾಲಾಗಿತ್ತು. 2020ರಲ್ಲಿ ಪೂರವ್ ರಾಜ್ ಜೊತೆಗೂಡಿ ಡಬಲ್ಸ್ ಚಾಂಪಿಯನ್ ಆಗಿದ್ದ ರಾಮ್ಕುಮಾರ್ ರಾಮನಾಥನ್, ಕಳೆದ ಆವೃತ್ತಿಯಲ್ಲಿ ಸಾಕೇತ್ ಮೈನೇನಿ ಜೊತೆ 2ನೇ ಬಾರಿ ಡಬಲ್ಸ್ ಪ್ರಶಸ್ತಿಗೆ ಮುತ್ತಿಕ್ಕಿದ್ದರು.
NAIL BITER!!
In a thrilling finish, Yunseong Chung/ Yu Hsiou Hsu defeat N. Vijay Sundar Prashanth/ Anirudh Chandrasekhar 3-6, 7-6, 11-9 to win the doubles title at the pic.twitter.com/xxFWaIkB71
ಅಲಿಬಾಗ್‌ನಲ್ಲಿ ಕೋಟ್ಯಾಂತರ ರುಪಾಯಿ ಮೌಲ್ಯದ ಐಶಾರಾಮಿ ವಿಲ್ಲಾ ಖರೀದಿಸಿದ ವಿರಾಟ್ ಕೊಹ್ಲಿ..! ಏನಿದರ ವಿಶೇಷತೆ?
ಸಿಂಗಲ್ಸ್ ಫೈನಲ್ನಲ್ಲಿ ಪುರ್ಸೆಲ್-ಡಕ್ವರ್ತ್
ಇದೇ ವೇಳೆ ಪುರುಷರ ಸಿಂಗಲ್ಸ್ನಲ್ಲಿ ಹಾಲಿ ವಿಂಬಲ್ಡನ್ ಡಬಲ್ಸ್ ಚಾಂಪಿಯನ್ ಆಸ್ಪ್ರೇಲಿಯಾದ ಮ್ಯಾಕ್ಸ್ ಪುರ್ಸೆಲ್ ಹಾಗೂ ಜೇಮ್ಸ್ ಡಕ್ವತ್‌ರ್ ಫೈನಲ್ಗೆ ಲಗ್ಗೆ ಇಟ್ಟರು. ಕಳೆದ ವಾರ ಚೆನ್ನೈ ಓಪನ್ ಪ್ರಶಸ್ತಿ ಗೆದ್ದಿದ್ದ ಪುರ್ಸೆಲ್ ಸೆಮಿಫೈನಲ್ನಲ್ಲಿ ಕ್ರೊವೇಷಿಯಾದ ಹಮದ್ ಮೆಡ್ಜೆಡೋವಿಚ್ರನ್ನು 6-2, 5-7, 7-6 ಸೆಟ್ಗಳಲ್ಲಿ ಮಣಿಸಿದರು. ಅವರ ಒಂದು ವಾರದೊಳಗೆ 2ನೇ ಪ್ರಶಸ್ತಿ ಗೆಲ್ಲಲು ಕಾತರಿಸುತ್ತಿದ್ದಾರೆ. ಇನ್ನು, ಡಕ್ವತ್‌ರ್ ತಮ್ಮದೇ ದೇಶದ ಜೇಮ್ಸ್ ಮೆಕ್ಕಾಬೆ ವಿರುದ್ಧ 6-3, 6-3 ಸೆಟ್ಗಳಲ್ಲಿ ಜಯಗಳಿಸಿದರು. ಭಾನುವಾರ ಫೈನಲ್ ನಡೆಯಲಿದೆ.
ಇಂದು ಡೆಲ್ಲಿ ಮ್ಯಾರಥಾನ್: ಏಷ್ಯಾಡ್ ಅರ್ಹತೆ ಮೇಲೆ ರಾಜ್ಯದ ಬೆಳ್ಳಿಯಪ್ಪ ಕಣ್ಣು
ನವದೆಹಲಿ: ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್(ಎಎಫ್‌ಐ), ಫಿಟ್ ಇಂಡಿಯಾ ಮಾನ್ಯತೆಯೊಂದಿಗೆ ಭಾನುವಾರ ಡೆಲ್ಲಿ ಮ್ಯಾರಥಾನ್ ನಡೆಯಲಿದ್ದು, ಮುಂಬರುವ ಹ್ಯಾಂಗ್ಝೂ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿರುವ ಕನ್ನಡಿಗ ಎ.ಬೆಳ್ಳಿಯಪ್ಪ, ದೇಶದ ಅಗ್ರ ಓಟಗಾರರಾದ ಶ್ರೀನು ಬುಗತ, ಜ್ಯೋತಿ ಸಿಂಗ್ ಗಾವಟೆ, 2022ರ ಆವೃತ್ತಿಯ ಬೆಳ್ಳಿ ವಿಜೇತ ಅನೀಶ್ ಥಾಪ ಸೇರಿದಂತೆ ಪ್ರಮುಖ ಅಥ್ಲೀಟ್‌ಗಳು ಕಣಕ್ಕಿಳಿಯಲಿದ್ದಾರೆ. ರೇಸ್‌ನಲ್ಲಿ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆಯಲು ಪುರುಷರಿಗೆ 2 ಗಂಟೆ 15 ನಿಮಿಷ, ಮಹಿಳೆಯರಿಗೆ 2 ಗಂಟೆ 37 ನಿಮಿಷದ ಅರ್ಹತಾ ಸಮಯ ನಿಗದಿಪಡಿಸಲಾಗಿದೆ. ಏಷ್ಯನ್ ಗೇಮ್ಸ್ ಸೆ.23ರಿಂದ ಅ.8ರ ವರೆಗೆ ಚೀನಾದಲ್ಲಿ ನಡೆಯಲಿದೆ.