PKL 2019: ತವರಿನಲ್ಲಿ ಬೆಂಗಳೂರು ಬುಲ್ಸ್‌ಗೆ ಮೊದಲ ಗೆಲುವು!

Published : Sep 01, 2019, 10:10 PM IST
PKL 2019: ತವರಿನಲ್ಲಿ ಬೆಂಗಳೂರು ಬುಲ್ಸ್‌ಗೆ ಮೊದಲ ಗೆಲುವು!

ಸಾರಾಂಶ

ತಮಿಳ್ ತಲೈವಾಸ್ ವಿರುದ್ದ ತವರಿನಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಅಬ್ಬರಿಸಿದೆ. ರೋಹಿತ್ ಕುಮಾರ್ ಹಾಗೂ ಪವನ್ ಶೆರಾವತ್ ರೈಡ್ ಬುಲ್ಸ್ ತಂಡಕ್ಕೆ ಹೆಚ್ಚಿನ ಅಂಕ ತಂದುಕೊಟ್ಟಿತು. ಮಹೇಂದ್ರ ಸಿಂಗ್ ಟ್ಯಾಕಲ್ ಬುಲ್ಸ್ ಅಂತರವನ್ನು ಹೆಚ್ಚಿಸಿತು. ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ. 

ಬೆಂಗಳೂರು(ಸೆ.01): ಪ್ರೊ ಕಬಡ್ಡಿ ಲೀಗ್ ಟೂರ್ನಿಯ ತವರಿನ ಚರಣದ ಮೊದಲ ಪಂದ್ಯದಲ್ಲಿ ಮುಗ್ಗರಿಸಿದ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್, ಇದೀಗ ಕಮ್‌ಬ್ಯಾಕ್ ಮಾಡಿದೆ. ತಮಿಳ್ ತಲೈವಾಸ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 33-27 ಅಂಕಗಳಿಂದ ಪಂದ್ಯ ಗೆದ್ದುಕೊಂಡಿದೆ. 

ಇದನ್ನೂ ಓದಿ: ಬೆಂಗಳೂರು ಬುಲ್ಸ್‌ನ ಓನ್‌ ಮ್ಯಾನ್‌ ಆರ್ಮಿ ಪವನ್‌!

ಮೊದಲಾರ್ಧದ ಆರಂಭದಲ್ಲಿ ನಾಯಕ ರೋಹಿತ್ ಕುಮಾರ್ ಅದ್ಬುತ ರೈಡ್‌ನಿಂದ 2-0 ಅಂಕಗಳ ಮೂಲಕ ಬೆಂಗಳೂರು ಪಂದ್ಯ ಆರಂಭಿಸಿತು. ಎಂದಿನಂತೆ ಪವನ್ ಶೆರಾವತ್ ರೈಡ್ ಬುಲ್ಸ್ ತಂಡಕ್ಕೆ ನರವಾಯಿತು. ಡಿಫೆಂಡರ್ ಅಮಿತ್ ಶೆರೋನ್ ಹಾಗೂ ಮಹೇಂದ್ರ ಸಿಂಗ್ ಟ್ಯಾಕಲ್‌ನಿಂದ ಮೊದಲಾರ್ಧದಲ್ಲಿ ಬೆಂಗಳೂರು 14-13 ಅಂಕಗಳಿಂದ ಮುನ್ನಡೆ ಕಾಯ್ದುಕೊಂಡಿತು.

ಇದನ್ನೂ ಓದಿ: PKL 2019: ಮೈದಾನದಲ್ಲೇ ಕುಸಿದು ಬಿದ್ದ ಸಂದೀಪ್ ನರ್ವಾಲ್!

ದ್ವಿತಿಯಾರ್ಧದಲ್ಲಿ ತಿರುಗೇಟು ನೀಡಲು ಪ್ರಯತ್ನಿಸಿದ ತಮಿಳ್ ತಲೈವಾಸ್‌ಗೆ ಬುಲ್ಸ್ ಅವಕಾಶ ನೀಡಲಿಲ್ಲ. ಮುನ್ನಡೆಯಲ್ಲಿದ್ದ ಬುಲ್ಸ್‌ಗೆ ತಮಿಳ್ ತಲೈವಾಸ್ ಸೂಪರ್ ಟ್ಯಾಕಲ್ ಕೊಂಚು ಮುಳುವಾಯಿತು. ಇದರಿಂದ ಅಂಕಗಳ ಅಂತರ ಕಡಿಮೆಯಾಯಿತು.  15ನೇ  ನಿಮಿಷದಲ್ಲಿ ತಮಿಳ್ ತಲೈವಾಸ್ ತಂಡವನ್ನು ಆಲೌಟ್ ಮಾಡಿದ ಬೆಂಗಳೂರು 30-23 ಅಂಕಗಳ ಮುನ್ನಡೆ ಪಡೆಯಿತು. ಅಂತ್ಯದಲ್ಲಿ ಬೆಂಗಳೂರು 33-27 ಅಂಕಗಳಿಂದ ಗೆಲುವು ಸಾಧಿಸಿತು.

ಯುಪಿ ಯೋಧಾಗೆ ಗೆಲುವು:
ಬೆಂಗಳೂರು ಬುಲ್ಸ್ ಪಂದ್ಯಕ್ಕೂ ಮುನ್ನ ಯುಪಿ ಯೋಧ ಹಾಗೂ ಬೆಂಗಾಲ್ ವಾರಿಯರ್ಸ್ ಮುಖಾಮುಖಿಯಾಗಿತ್ತು. ರೋಚಚಕ ಪಂದ್ಯದಲ್ಲಿ ಯುಪಿ ಯೋಧ 32-29 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು. ಮೊದಲಾರ್ಧದಲ್ಲಿ ದಿಟ್ಟ ಹೋರಾಟ ನೀಡಿದ ಬೆಂಗಾಲ್ ವಾರಿಯರ್ಸ್ 13-12 ಅಂಕಗಳ ಮುನ್ನಡೆ ಪಡೆದಿತ್ತು. ಆದರೆ ದ್ವಿತಿಯಾರ್ಧದ ಅಂತ್ಯದಲ್ಲಿ ಕಮ್‌ಬ್ಯಾಕ್ ಮಾಡಿದ ಯುಪಿ, ಬೆಂಗಾಲ್‌ಗೆ ಶಾಕ್ ನೀಡಿತು. ಅಂತಿಮ ಹಂತದಲ್ಲಿ 3 ಅಂಕಗಳಿಂದ ಗೆಲುವು ಸಾಧಿಸಿತು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐತಿಹಾಸಿಕ ಕ್ಲೀನ್‌ ಸ್ವೀಪ್: ವಿಶ್ವದಾಖಲೆ ಬರೆದ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಟೀಂ ಇಂಡಿಯಾ!
ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿಯಲ್ಲಿ ಈ ಇಬ್ಬರು ಸ್ಟಾರ್ ಆಟಗಾರರಿಗೆ ರೆಸ್ಟ್‌!