117 ರನ್‌ಗೆ ವಿಂಡೀಸ್ ಆಲೌಟ್; ಭಾರತಕ್ಕೆ 299 ರನ್ ಭರ್ಜರಿ ಮುನ್ನಡೆ

By Web Desk  |  First Published Sep 1, 2019, 9:18 PM IST

ವೆಸ್ಟ್ ಇಂಡೀಸ್ ವಿರುದ್ದದ 2ನೇ ಟೆಸ್ಟ್ ಪಂದ್ಯದಲ್ಲೂ ಟೀಂ ಇಂಡಿಯಾ ಬಿಗಿ ಹಿಡಿತ ಸಾಧಿಸಿದೆ. ಬ್ಯಾಟಿಂಗ್ ಬಳಿಕ ಬೌಲಿಂಗ್‌ನಲ್ಲಿ ಮಿಂಚಿದ ಭಾರತ, ವಿಂಡೀಸ್ ತಂಡವನ್ನು 117 ರನ್‌ಗೆ ಆಲೌಟ್ ಮಾಡಿದೆ. 


ಕಿಂಗ್ಸ್‌ಸ್ಟನ್(ಸೆ.01): ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಟೀಂ ಇಂಡಿಯಾ ಇದೀಗ ಬೌಲಿಂಗ್‌ನಲ್ಲೂ ಮಿಂಚಿನ ಪ್ರದರ್ಶನ ನೀಡಿದೆ. ಜಸ್ಪ್ರೀತ್ ಬುಮ್ರಾ ದಾಳಿಗೆ ನಲುಗಿದ ವಿಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 117 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ಭಾರತ 299 ರನ್‌ಗಳ ಬೃಹತ್ ಮುನ್ನಡೆ ಪಡೆದುಕೊಂಡಿದೆ. ವಿಂಡೀಸ್ ಮೇಲೆ ಫಾಲೋ ಆನ್ ಹೇರದ ಭಾರತ 2ನೇ ಇನ್ನಿಂಗ್ಸ್ ಮುಂದುವರಿಸು ನಿರ್ಧರಿಸಿದೆ.

ಇದನ್ನೂ ಓದಿ: ಭಜ್ಜಿ to ಬುಮ್ರಾ; 3 ಭಾರತೀಯರ ಹ್ಯಾಟ್ರಿಕ್ ವಿಕೆಟ್ ವಿಡಿಯೋ!

Tap to resize

Latest Videos

undefined

ತೃೀತಯ ದಿನದಾಟದಲ್ಲಿ 7 ವಿಕೆಟ್ ನಷ್ಟಕ್ಕೆ 87 ರನ್‌ಗಳೊಂದಿಗೆ ದಿನದಾಟ ಆರಂಭಿಸಿದ ವಿಂಡೀಸ್ ಹೆಚ್ಚು ಹೊತ್ತು ಬ್ಯಾಟ್ ಬೀಸಲಿಲ್ಲ. ರಖೀಮ್ ಕಾರ್ನವಲ್ 14 ರನ್ ಸಿಡಿಸಿ ಔಟಾದರು. ಕೆಮರ್ ರೋಚ್ 17 ರನ್ ಸಿಡಿಸಿ ಔಟಾದರು. ಈ ಮೂಲಕ ವೆಸ್ಟ್ ಇಂಡೀಸ್ 117 ರನ್‌ಗೆ ಆಲೌಟ್ ಆಗೋ ಮೂಲಕ 299 ರನ್ ಹಿನ್ನಡೆ ಅನುಭವಿಸಿತು. ಭಾರತ ಫಾಲೋ  ಆನ್ ಹೇರದೆ 2ನೇ ಇನ್ನಿಂಗ್ಸ್ ಆರಂಭಿಸಲಿದೆ. ಈ  ಮೂಲಕ ಬೃಹತ್ ಟಾರ್ಗೆಟ್ ನೀಡಲು ಕೊಹ್ಲಿ ಸೈನ್ಯ ನಿರ್ಧರಿಸಿದೆ.

ಜಸ್ಪ್ರೀತ್ ಬುಮ್ರಾ 6, ಮೊಹಮ್ಮದ್ ಶಮಿ 2, ಇಶಾಂತ್ ಶರ್ಮಾ 1 ಹಾಗೂ ರವೀಂದ್ರ ಜಡೇಜಾ 1 ವಿಕೆಟ್  ಕಬಳಿಸಿದರು. 

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 416 ರನ್ ಸಿಡಿಸಿ ಆಲೌಟ್ ಆಗಿತ್ತು. ಹುನುಮಾ ವಿಹಾರಿ ಭರ್ಜರಿ ಶತಕ, ನಾಯಕ ವಿರಾಟ್ ಕೊಹ್ಲಿ 76 , ಮಯಾಂಕ್ ಅಗರ್ವಾಲ್ 55 ಹಾಗೂ ವೇಗಿ ಇಶಾಂತ್ ಶರ್ಮಾ 57  ರನ್ ಕಾಣಿಕೆ ನೀಡಿದರು. ಈ ಮೂಲಕ ಬೃಹತ್ ಮೊತ್ತ ಪೇರಿಸಿತ್ತು.

click me!