
ಮುಂಬೈ(ಜು.25): ಆಸ್ಟ್ರೇಲಿಯಾ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಸದ್ಯ ಅಲ್ ಜಝೀರಾ ಮಾಡಿರುವ ಮ್ಯಾಚ್ ಫಿಕ್ಸಿಂಗ್ ಆರೋಪದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ, ಇದೀಗ ಮ್ಯಾಕ್ಸ್‌ವೆಲ್ ಕುರಿತ ಸ್ಫೋಟಕ ಮಾಹಿತಿಯನ್ನ ಬಿಸಿಸಿಐ ಮೂಲಗಳು ಬಹಿರಂಗ ಪಡಿಸಿದೆ.
2017ರ ಐಪಿಎಲ್ ಟೂರ್ನಿ ವೇಳೆ ಗ್ಲೆನ್ ಮ್ಯಾಕ್ಸ್‌ವೆಲ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಭಾಗವಾಗಿದ್ದರು. ಟೂರ್ನಿಯ ವೇಳೆ ಗುಜರಾತ್ ಲಯನ್ಸ್ ತಂಡ ರಾತ್ರಿ ಆಯೋಜಿಸಿದ್ದ ಪಾರ್ಟಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಭಾಗವಹಿಸಿದ್ದರು.
ಮ್ಯಾಕ್ಸ್‌ವೆಲ್ ಯಾವುದೇ ಭದ್ರತೆಯನ್ನ ಪಡೆದುಕೊಳ್ಳದೇ, ತಂಡದ ಮ್ಯಾನೇಜರ್‌ಗೂ ಮಾಹಿತಿ ನೀಡದೆ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಪಾರ್ಟಿಯಲ್ಲಿ ಮ್ಯಾಕ್ಸ್‌ವೆಲ್ ಪಾನಮತ್ತರಾಗಿದ್ದಾರೆ. ಬಳಿಕ ಸೈಕಲ್ ಮೂಲಕ ಯಾರೋಬ್ಬರ ಸಹಾಯ ಪಡೆಯದೇ ಪಂಜಾಬ್ ತಂಡ ಉಳಿದುಕೊಂಡಿದ್ದ ಹೊಟೆಲ್‌ಗೆ ವಾಪಾಸ್ಸಾಗಿದ್ದಾರೆ.
ಇದನ್ನು ಓದಿ: ವಿರಾಟ್ ಕೊಹ್ಲಿಯ ಪ್ರತಿ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಕೊಡಬೇಕು 82 ಲಕ್ಷ ರೂಪಾಯಿ!
ಸೈಕಲ್ ಮೂಲಕ ವಾಪಾಸ್ಸಾಗುವ ದಾರಿಯಲ್ಲಿ ಮ್ಯಾಕ್ಸ್‌ವೆಲ್ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ. ಸಾಕಷ್ಟು ವಾಹನ ಓಡಾಡೋ ದಾರಿಯಲ್ಲೇ ಬಿದ್ದ ಮ್ಯಾಕ್ಸ್‌ವೆಲ್ ಹರಸಾಹಸ ಮಾಡಿ ಹೊಟೆಲ್ ತಲುಪಿದ್ದಾರೆ. ಹೈವೇ ರೋಡ್‌ನಲ್ಲಿ ಈ ಘಟನೆ ನಡೆದಿತ್ತು. ಅಂದೇ ಮ್ಯಾಕ್ಸ್‌ವೆಲ್ ಕತೆ ಮುಗಿಯುತಿತ್ತು ಎಂದು ಕ್ರಿಕ್‌ಟ್ರಾಕರ್ ವೆಬ್‌ಸೈಟ್ ಬಿಸಿಸಿಐ ಮೂಲಗಳ ವರದಿಯನ್ನ ಪ್ರಕಟಿಸಿದೆ.
ಈ ಘಟನೆಯನ್ನ ಬಿಸಿಸಿಐ ಬಹಿರಂಗವಾಗದಂತೆ ನೋಡಿಕೊಂಡಿತ್ತು. ಕಾರಣ ಇದು ಐಪಿಎಲ್ ಟೂರ್ನಿ ಮೇಲೂ ಕೆಟ್ಟ ಪರಿಣಾಮ ಬೀರಲಿದೆ ಅನ್ನೋ ಕಾರಣಕ್ಕೆ ಘಟನೆ ಹೊರಗೆೇ ಬರಲೇ ಇಲ್ಲ ಎಂದು ಬಿಸಿಸಿಐ ಮೂಲಗಳು ಹೇಳಿವೆ.
ಇದನ್ನು ಓದಿ: ಎರಡೂ ಕೈಗಳಲ್ಲಿ ಬೌಲಿಂಗ್-ಅಚ್ಚರಿ ಮೂಡಿಸಿದ ಮೋಕಿತ್ ಹರಿಹರನ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.