
ಚೆಲ್ಮ್ಸ್‌ಫೋರ್ಡ್(ಜು.25): ಎಸೆಕ್ಸ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡಿದೆ. ಆರಂಭಿಕರಾಗಿ ಕಣಕ್ಕಿಳಿದ ಮುರಳಿ ವಿಜಯ್ ಹಾಗೂ ಶಿಖರ್ ಧವನ್ ಉತ್ತಮ ಆರಂಭ ನೀಡಲು ಸಾಧ್ಯವಾಗಲಿಲ್ಲ.
ಮ್ಯಾಟ್ ಕೊಲೆಸ್ ಎಸೆತದಲ್ಲಿ ಧವನ್ ಡಕೌಟ್ ಆದರು. ಹೀಗಾಗಿ 1 ರನ್‌ಗೆ ಭಾರತ ಮೊದಲ ವಿಕೆಟ್ ಕಳೆದುಕೊಂಡಿತು. ಟೀಂ ಇಂಡಿಯಾದ ಆಧಾರ ಸ್ಥಂಭ ಚೇತೇಶ್ವರ್ ಪೂಜರ ಕೇವಲ 1 ರನ್ ಸಿಡಿಸಿ ಔಟಾದರು. ಆರಂಭಿಕ ಹಂತದಲ್ಲಿ ಭಾರತ ಪ್ರಮುಖ 2 ವಿಕೆಟ್ ಕಳೆದುಕೊಂಡಿದೆ.
ಎಸೆಕ್ಸ್ ವಿರುದ್ಧದ ನಾಲ್ಕು ದಿನದ ಅಭ್ಯಾಸ ಪಂದ್ಯವನ್ನ 3 ದಿನಕ್ಕೆ ಸೀಮಿತಗೊಳಿಸಲಾಗಿದೆ. ಕಳಪೆ ಪಿಚ್ ಹಾಗೂ ಔಟ್‌ಫೀಲ್ಡ್‌ಗೆ ಭಾರತ ಅಸಮಧಾನ ವ್ಯಕ್ತಪಡಿಸಿತ್ತು. ಇಷ್ಟೇ ಅಲ್ಲ ಪಂದ್ಯವನ್ನ 3 ದಿನಕ್ಕೆ ಸೀಮಿತಗೊಳಿಸಲು ಸೂಚಿಸಿತ್ತು.
ಇದನ್ನು ಓದಿ: ವಿರಾಟ್ ಕೊಹ್ಲಿಯ ಪ್ರತಿ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಕೊಡಬೇಕು 82 ಲಕ್ಷ ರೂಪಾಯಿ!
ಇದನ್ನು ಓದಿ: ಎರಡೂ ಕೈಗಳಲ್ಲಿ ಬೌಲಿಂಗ್-ಅಚ್ಚರಿ ಮೂಡಿಸಿದ ಮೋಕಿತ್ ಹರಿಹರನ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.