ಕೆರಿಬಿಯನ್ ಲೀಗ್ ಜೊತೆ ಕಾಣಿಸಿಕೊಂಡ ಕಾರ್ತಿಕ್, BCCIನಿಂದ ನೊಟೀಸ್!

Published : Sep 07, 2019, 06:34 PM IST
ಕೆರಿಬಿಯನ್ ಲೀಗ್ ಜೊತೆ ಕಾಣಿಸಿಕೊಂಡ ಕಾರ್ತಿಕ್, BCCIನಿಂದ ನೊಟೀಸ್!

ಸಾರಾಂಶ

ಟೀಂ ಇಂಡಿಯಾ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್‌ಗೆ ಸಂಕಷ್ಟ ಎದುರಾಗಿದೆ. ಬಿಸಿಸಿಐ ಅನುಮತಿ ಇಲ್ಲದೆ ವಿಂಡೀಸ್‌ನ ಕೆರಿಬಿಯನ್ ಲೀಗ್ ಜೊತೆ ಕಾಣಿಸಿಕೊಂಡ ಕಾರ್ತಿಕ್‌ ಇದೀಗ ಬಿಗ್‌ಬಾಸ್ ಮುಂದೆ ವಿವರಣೆ ನೀಡಬೇಕಿದೆ.

ಮುಂಬೈ(ಸೆ.07): ವಿಶ್ವಕಪ್ ಟೂರ್ನಿ ಬಳಿಕ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಟೈಮ್ ಸರಿಯಾಗಿಲ್ಲ. ಟೀಂ ಇಂಡಿಯಾದಲ್ಲಿ ಅವಕಾಶ ಸಿಗುತ್ತಿಲ್ಲ. ವೆಸ್ಟ್ ಇಂಡೀಸ್ ಪ್ರವಾಸದಿಂದ ದೂರ ಉಳಿದ ಕಾರ್ತಿಕ್, ಸೌತ್ ಆಫ್ರಿಕಾ ಸರಣಿಗೂ ಆಯ್ಕೆಯಾಗಿಲ್ಲ. ಇದರ ನಡುವೆ ಸದ್ದಿಲ್ಲದೆ ಕೆರಿಬಿಯನ್ ಪ್ರಿಮಿಯರ್ ಲೀಗ್ ಜೊತೆ ಕಾಣಿಸಿಕೊಂಡ ದಿನೇಶ್ ಕಾರ್ತಿಕ್‌ಗೆ ಇದೀಗ ಬಿಸಿಸಿಐ ಶೋಕಾಸ್ ನೊಟೀಸ್ ನೀಡಿದೆ. ಇದು ಕಾರ್ತಿಕ್‌ಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಇದನ್ನೂ ಓದಿ: ಮೊದಲ ವಿಶ್ವಕಪ್ ಪಂದ್ಯಕ್ಕಾಗಿ 15 ವರ್ಷ ಕಾದ ದಿನೇಶ್ ಕಾರ್ತಿಕ್!

ಐಪಿಎಲ್ ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್, ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ. ಬಾಲಿವುಡ್ ನಟ ಶಾರೂಖ್ ಖಾನ್ ಮಾಲೀಕತ್ವದ ಕೆಕೆಆರ್ ಫ್ರಾಂಚೈಸಿ, ಕೆರಿಬಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಟ್ರಿನಿಬ್ಯಾಗೋ ನೈಟ್ ರೈಡರ್ಸ್ ತಂಡದ ಮಾಲೀಕತ್ವವನ್ನೂ ಹೊಂದಿದೆ. ಹೀಗಾಗಿ ದಿನೇಶ್ ಕಾರ್ತಿಕ್, ಕೆರಿಬಿಯನ್ ಪ್ರಮಿಯರ್ ಲೀಗ್ ಟೂರ್ನಿ ವೇಳೆ ಟ್ರಿನಿಬ್ಯಾಗ್ ನೈಟ್ ರೈಡರ್ಸ್ ತಂಡದ ಜೊತೆ ಕಾಣಿಸಿಕೊಂಡಿದ್ದಾರೆ. ಬ್ರೆಂಡನ್ ಮೆಕಲಂ ಜೊತೆ ಟ್ರಿನಿಬ್ಯಾಗೋ ತಂಡದ ಜರ್ಸಿ ಹಾಕಿಕೊಂಡ ಫೋಟೋ ವೈರಲ್ ಆಗಿದೆ.

ಇದನ್ನೂ ಓದಿ: ಧೋನಿ ನಾನು ಕಲಿಯುತ್ತಿರುವ ಕಾಲೇಜಿನ ಟಾಪರ್

ಟ್ರಿನಿಬ್ಯಾಗ್ ತಂಡದ ಡ್ರೆಸ್ಸಿಂಗ್ ರೂಂನಲ್ಲಿ ಕಾಣಿಸಿಕೊಳ್ಳೋ ಮೂಲಕ ಕಾರ್ತಿಕ್ ಬಿಸಿಸಿಐ ಪ್ರೊಟೊಕಾಲ್ ಉಲ್ಲಂಘಿಸಿದ್ದಾರೆ. ಈ ಕುರಿತು ವಿವರಣೆ ಕೇಳಿರುವ ಬಿಸಿಸಿಐ ನೊಟೀಸ್ ನೀಡಿದೆ. ಈಗಾಗಲೇ ಟೀಂ ಇಂಡಿಯಾದಿಂದ ಹೊರಬಿದ್ದಿರುವ ಕಾರ್ತಿಕ್‌ಗೆ ಇದೀಗ ನೊಟೀಸ್ ಮತ್ತಷ್ಟು  ಸಂಕಷ್ಟ ತರಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಆಸೀಸ್‌, ಆಫ್ಘನ್‌ಗೆ ಟಿ20 ಪಂದ್ಯಗಳೇ ಇಲ್ಲ! ಯಾಕೆ?
ಭಾರತ-ದಕ್ಷಿಣ ಆಫ್ರಿಕಾ 2ನೇ ಟಿ20: ಮತ್ತೊಂದು ಗೆಲುವಿನ ವಿಶ್ವಾಸದಲ್ಲಿ ಟೀಂ ಇಂಡಿಯಾ!