ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಹ್ವಾನ ತಿರಸ್ಕರಿಸಿದ ಬಿಸಿಸಿಐ!

By Web DeskFirst Published Mar 9, 2019, 5:01 PM IST
Highlights

ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನ ಜೊತೆಗಿನ ಯಾವುದೇ ವ್ಯವಹಾರಕ್ಕೂ ಭಾರತ ಸಿದ್ಧವಿಲ್ಲ. ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನೀಡಿರುವ ಆಹ್ವಾನವನ್ನೂ ಬಿಸಿಸಿಐ ತಿರಸ್ಕರಿಸಿದೆ. ಬಿಸಿಸಿ ಮಾತ್ರವಲ್ಲ ಐಸಿಸಿ ಚೇರ್ಮೆನ್ ಕೂಡ ಪಾಕಿಸ್ತಾನ ಆಹ್ವಾನ ತಿರಸ್ಕರಿಸಿದ್ದಾರೆ.

ಮುಂಬೈ(ಮಾ.09): ಪಾಕಿಸ್ತಾನ ಕ್ರಿಕೆಟ್ ಮಂಡಳಿ(PCB) ಕರಾಚಿಯಲ್ಲಿ ಪಾಕಿಸ್ತಾನ ಸೂಪರ್ ಲೀಗ್(PSL) ಟೂರ್ನಿ ಫೈನಲ್ ಪಂದ್ಯ ಆಯೋಜಿಸುತ್ತಿದೆ. ಇಷ್ಟು ದಿನ ದುಬೈನಲ್ಲಿ ನಡೆಯುತ್ತಿದ್ದ ಟೂರ್ನಿ ಇದೀಗ ಪಾಕಿಸ್ತಾನಕ್ಕೆ ಶಿಫ್ಟ್ ಆಗಿದೆ. ಪಾಕ್ ನೆಲದಲ್ಲಿ ಕ್ರಿಕೆಟ್ ಆಯೋಜಿಸುತ್ತಿರುವ ಸಂಭ್ರಮದಲ್ಲಿರುವ PCB, ಭಾರತೀಯ ಕ್ರಿಕೆಟ್ ಮಂಡಳಿಗೆ ಆಹ್ವಾನ ನೀಡಿದೆ. ಆದರೆ ಬಿಸಿಸಿಐ ಆಹ್ವಾನ ತಿರಸ್ಕರಿಸಿದೆ.

ಇದನ್ನೂ ಓದಿ: ಕೊಹ್ಲಿ ಬಾಯ್ಸ್ ಸೇನಾ ಕ್ಯಾಪ್ ಧರಿಸಿದ್ದಕ್ಕೆ ಪಾಕಿಸ್ತಾನ ಆಕ್ರೋಶ !

ಸುದ್ಧಿಗೋಷ್ಠಿಯಲ್ಲಿ ಪಿಸಿಬಿ ಮುಖ್ಯಸ್ಥ ಎಹಸಾನ್ ಮಾನಿ ಈ ಕುರಿತು ಹೇಳಿಕೆ ನೀಡಿದ್ದಾರೆ. ಪಿಸಿಬಿ ಆಹ್ವಾನವನ್ನು ಬಿಸಿಸಿಐ ತಿರಸ್ಕರಿಸಿದೆ ಎಂದಿದ್ದಾರೆ. ಬಿಸಿಸಿಐ ಮಾತ್ರವಲ್ಲ ಐಸಿಸಿ ಚೇರ್ಮೆನ್ ಶಶಾಂಕ್ ಮನೋಹರ್ ಕೂಡ ಪಾಕಿಸ್ತಾನಕ್ಕೆ ಭೇಟಿ ನೀಡಲು ನಿರಾಕರಿಸಿದ್ದಾರೆ.

ಇದನ್ನೂ ಓದಿ: ರಾಂಚಿ ಪಂದ್ಯವನ್ನು ಸೈನಿಕರಿಗೆ ಅರ್ಪಿಸಿದ ಟೀಂ ಇಂಡಿಯಾ

ಪಿಸಿಬಿ ಆಹ್ವಾನ ಸ್ವೀಕರಿಸಿರುವ ಐಸಿಸಿ ಮುಖ್ಯ ಕಾರ್ಯದರ್ಶಿ ಡೇವಿಡ್ ರಿಚರ್ಡ್ಸನ್ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿ ಫೈನಲ್ ಪಂದ್ಯ ವಿಕ್ಷೀಸಲು ಪಾಕಿಸ್ತಾನಕ್ಕೆ ತೆರಳಿದ್ದಾರೆ. ಮಾರ್ಚ್ 17 ರಂದು ಪಾಕಿಸ್ತಾನ ಸೂಪರ್ ಲೀಗ್ ಫೈನಲ್ ಪಂದ್ಯ ನಡೆಯಲಿದೆ.
 

click me!