ಭಾರತ- ವೆಸ್ಟ್ ಇಂಡೀಸ್ ಸರಣಿ: ಕೊಹ್ಲಿ-ಬುಮ್ರಾಗೆ ರೆಸ್ಟ್?

By Web DeskFirst Published Jun 23, 2019, 5:10 PM IST
Highlights

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಕ್ರಿಕೆಟ್ ಸರಣಿಗೆ ಬಿಸಿಸಿಐ ಸಕಲ ಸಿದ್ದತೆ ಮಾಡಿಕೊಂಡಿದೆ. ಆದರೆ ನಾಯಕ ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬುಮ್ರಾಗೆ ರೆಸ್ಟ್ ನೀಡಲು ಬಿಸಿಸಿಐ ನಿರ್ಧರಿಸಿದೆ.

ಮುಂಬೈ(ಜೂ.23): ವಿಶ್ವಕಪ್ ಟೂರ್ನಿ ಆಡುತ್ತಿರುವ ಟೀಂ ಇಂಡಿಯಾ ಸತತ 4 ಗೆಲುವು ಸಾಧಿಸಿ ಮುನ್ನಗ್ಗುತ್ತಿದೆ. ವಿಶ್ವಕಪ್ ಟೂರ್ನಿ ಬಳಿಕ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ವಿಂಡೀಸ್ ವಿರುದ್ಧ ಟಿ20, ಏಕದಿನ ಹಾಗೂ ಟೆಸ್ಟ್ ಸರಣಿ ಆಡಲಿದೆ. ವಿಂಡೀಸ್ ಸರಣಿಯಿಂದ ಸತತ ಕ್ರಿಕೆಟ್ ಆಡುತ್ತಿರುವ ನಾಯಕ ವಿರಾಟ್ ಕೊಹ್ಲಿ ಹಾಗೂ ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲು ಬಿಸಿಸಿಐ ಮುಂದಾಗಿದೆ.

ಇದನ್ನೂ ಓದಿ : ತೆಂಡುಲ್ಕರ್ ಪೋಟೋ ಹಾಕಿ ಟ್ರೋಲ್ ಆದ ಇಮ್ರಾನ್ ಖಾನ್ ಅಸಿಸ್ಟೆಂಟ್!

ವೆಸ್ಟ್ ಇಂಡೀಸ್ ವಿರುದ್ಧದ 3 ಟಿ20 ಹಾಗೂ 3 ಏಕದಿನ ಪಂದ್ಯದ ಸರಣಿಯಿಂದ ಕೊಹ್ಲಿ ಹಾಗೂ ಬುಮ್ರಾಗೆ ರೆಸ್ಟ್ ನೀಡಲು ಬಿಸಿಸಿಐ ನಿರ್ಧರಿಸಿದೆ. ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿ ವೇಳೆ ಕೊಹ್ಲಿ ಹಾಗೂ ಬುಮ್ರಾ ತಂಡ  ಸೇರಿಕೊಳ್ಳಲಿದ್ದಾರೆ. ಜುಲೈ 14 ರಂದು ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಬಳಿಕ ಆಗಸ್ಟ್ 22ರ ವರೆಗೆ ಕೊಹ್ಲಿ ಹಾಗೂ ಬುಮ್ರಾಗೆ ವಿಶ್ರಾಂತಿ ಸಿಗಲಿದೆ ಎಂದು ಬಿಸಿಸಿಐ ಹೇಳಿದೆ.

ಇದನ್ನೂ ಓದಿ : IPL ಮಂಕಡಿಂಗ್ - ಮೊದಲ ಬಾರಿಗೆ ಮನ ಬಿಚ್ಚಿ ಮಾತನಾಡಿದ ಅಶ್ವಿನ್!

ರೋಹಿತ್ ಶರ್ಮಾಗೆ ನಾಯಕ ಪಟ್ಟ ನೀಡಲು ಬಿಸಿಸಿಐ ಮುಂದಾಗಿದೆ. ಕೊಹ್ಲಿ ಹಾಗೂ ಬುಮ್ರಾ ವಿಶ್ರಾಂತಿಯಿಂದ ಇದೀಗ ತಂಡ ಸೇರಿಕೊಳ್ಳಲು ಯುವ ಕ್ರಿಕೆಟಿಗರ ನಡುವೆ ಪೈಪೋಟಿ ಶುರುವಾಗಿದೆ. ಕ್ರುನಾಲ್ ಪಾಂಡ್ಯ, ಶ್ರೇಯಸ್ ಅಯ್ಯರ್, ರಾಹುಲ್ ಚಹಾರ್, ಸಂಜು ಸಾಮ್ಸನ್ ನಡುವೆ ಪೈಪೋಟಿ ಶುರುವಾಗಿದೆ. 
 

click me!