ಅಮಾನತುಗೊಂಡಿದ್ದ ಪಾಂಡ್ಯ-ರಾಹುಲ್ ನಿರಾಳ!

Published : Jan 25, 2019, 09:00 AM IST
ಅಮಾನತುಗೊಂಡಿದ್ದ ಪಾಂಡ್ಯ-ರಾಹುಲ್ ನಿರಾಳ!

ಸಾರಾಂಶ

ಖಾಸಗಿ ಟೀವಿ ಕಾರ್ಯಕ್ರಮದಲ್ಲಿ ಮಹಿಳೆಯರು ಕುರಿತು ಅಸಭ್ಯವಾಗಿ ಹೇಳಿಕೆ ನೀಡಿ ಟೀಂ ಇಂಡಿಯಾದಿಂದ ಅಮಾನತುಗೊಂಡಿದ್ದ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್ ರಾಹುಲ್ ಸದ್ಯ ನಿರಾಳರಾಗಿದ್ದಾರೆ. ಬಿಸಿಸಿಐ ಆಡಳಿತ ಸಮಿತಿಗೆ ತೆಗೆದುಕೊಂಡಿರುವ ನಿರ್ಧಾರ ಈ ಇಬ್ಬರು ಕ್ರಿಕೆಟಿಗರಲ್ಲಿ ಸಮಾಧಾನ ತಂದಿದೆ.  

ನವದೆಹಲಿ(ಜ.25): ಕಾಫಿ ವಿತ್ ಕರಣ್ ಟೀವಿ ಶೋನಲ್ಲಿ ಮಹಿಳೆಯರ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ್ದಕ್ಕೆ ಕೆ.ಎಲ್.ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯಗೆ ವಿಧಿಸಲಾಗಿದ್ದ ಅಮಾನತು ಶಿಙೆಯನ್ನು ತಕ್ಷಣದಿಂದ  ಜಾರಿಗೆ ಬರುವಂತೆ ಬಿಸಿಸಿಐನ ಆಡಳಿತ ಸಮಿತಿ(COA)ವಾಪಸ್ ಪಡೆದಿದೆ.

ಇದನ್ನೂ ಓದಿ: ’ಕಾಫಿ ವಿತ್ ಕರುಣ್’: ಇದೇ ಮೊದಲ ಬಾರಿಗೆ ತುಟಿ ಬಿಚ್ಚಿದ ಕರುಣ್ ಹೇಳಿದ್ದೇನು?

ನೂತನ ಅಮಿಕಸ್ ಕ್ಯೂರಿ ಪಿ.ಎಸ್.ನರಸಿಂಗ ಅವರೊಂದಿಗೆ ಗುರುವಾಗ ಚರ್ಚಿಸಿದ ಬಿಸಿಸಿಐ ಆಡಳಿತ ಸಮಿತಿ ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೂ, ಅಮಾನತು ಶಿಕ್ಷೆಯನ್ನ ಹಿಂಪೆಡೆಯುವ ನಿರ್ಧಾರ ಕೈಗೊಂಡಿತು. ಈ ನಿರ್ಧಾರದಂತೆ ಇಬ್ಬರ ವಿರುದ್ಧ ಜ.11 ರಂದು ಹೇರಿದ್ದ ಅಮಾನತು, ವಿಚಾರಣೆ ಪೂರ್ಣಗೊಳ್ಳುವ ವರೆಗೂ ಹಿಂಪಡೆಯಲಾಗುವುದು ಎಂದು ಸಮಿತಿ ಹೇಳಿದೆ. 

ಇದನ್ನೂ ಓದಿ: ಬಿಸಿಸಿಐ ಕೈಪಿಡಿ ಓದದ ಹಾರ್ದಿಕ್‌, ರಾಹುಲ್‌?

ರಾಹುಲ್ ಮತ್ತು ಪಾಂಜ್ಯ, ತಮ್ಮ ಮೇಲಿನ ಅಮಾನತು ಹಿಂಪಡೆದಿರುವುದರಿಂದ  ನಿರಾಳರಾಗಿದ್ದಾರೆ. ಅಲ್ಲದೆ ಆಲ್ರೌಂಡರ್ ಹಾರ್ದಿಕ್, ಕಿವೀಸ್ ಪ್ರವಾಸದಲ್ಲಿರುವ ಭಾರತ ತಂಡವನ್ನೂ ಸೇರಿಕೊಳ್ಳೋ ವಿಶ್ವಾಸದಲ್ಲಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!
ಭಾರತ ಎದುರಿನ 3ನೇ ಏಕದಿನ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾಗೆ ಬಿಗ್ ಶಾಕ್! 2 ಸ್ಟಾರ್ ಆಟಗಾರರು ಔಟ್!