ಭಾರತ ಮಹಿಳಾ ತಂಡ ಪ್ರಕಟ: ಟಿ20 ತಂಡಕ್ಕೆ 15ರ ಶೆಫಾಲಿ!

Published : Sep 06, 2019, 12:21 PM IST
ಭಾರತ ಮಹಿಳಾ ತಂಡ ಪ್ರಕಟ: ಟಿ20 ತಂಡಕ್ಕೆ 15ರ ಶೆಫಾಲಿ!

ಸಾರಾಂಶ

ಸೌತ್ ಆಫ್ರಿಕಾ ವಿರುದ್ದದ ತವರಿನ ಸರಣಿಗೆ ಭಾರತ ಮಹಿಳಾ ತಂಡ ಪ್ರಕಟಿಸಲಾಗಿದೆ. ವಿಶೇಷ ಅಂದರೆ 15 ವರ್ಷ ಶೆಫಾಲಿ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಮಹಿಳಾ ತಂಡದ ವಿವರ ಇಲ್ಲಿದೆ.

ನವದೆಹಲಿ(ಸೆ.06): ದಕ್ಷಿಣ ಆಫ್ರಿಕಾ ವಿರುದ್ಧದ ತವರಿನ ಟಿ20 ಸರಣಿಗೆ ಭಾರತ ಮಹಿಳಾ ಕ್ರಿಕೆಟ್‌ ತಂಡ ಘೋಷಿಸಲಾಗಿದ್ದು, 15 ವರ್ಷದ ಶೆಫಾಲಿ ವರ್ಮಾ ಸ್ಥಾನ ಪಡೆದಿದ್ದಾರೆ. ಹರ್ಯಾಣದ ಶೆಫಾಲಿ ಐಪಿಎಲ್‌ನ ಮಹಿಳಾ ಟಿ20 ಚಾಲೆಂಜ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರಿಂದ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. 

 

ಇದನ್ನೂ ಓದಿ: IPL ಬೆಟ್ಟಿಂಗ್: ಟೀಂ ಇಂಡಿಯಾ ಮಹಿಳಾ ತಂಡದ ಮಾಜಿ ಕೋಚ್ ಅರೆಸ್ಟ್!

3 ಪಂದ್ಯ​ಗಳ ಏಕ​ದಿನ ಸರ​ಣಿಯಲ್ಲಿ ಮಿಥಾಲಿ ರಾಜ್‌ ಭಾರತ ತಂಡ​ವನ್ನು ಮುನ್ನ​ಡೆ​ಸ​ಲಿದ್ದು, ಕರ್ನಾ​ಟ​ಕದ ರಾಜೇ​ಶ್ವರಿ ಗಾಯ​ಕ್ವಾಡ್‌ ಸ್ಥಾನ ಪಡೆ​ದಿ​ದ್ದಾರೆ. 5 ಪಂದ್ಯ​ಗಳ ಟಿ20 ಸರ​ಣಿ​ಯಲ್ಲಿ ಹರ್ಮನ್‌ಪ್ರೀತ್‌ ಕೌರ್‌ ತಂಡ ಮುನ್ನ​ಡೆ​ಸ​ಲಿದ್ದು, ರಾಜ್ಯದ ವೇದಾ ಕೃಷ್ಣ​ಮೂ​ರ್ತಿಗೆ ತಂಡ​ದಲ್ಲಿ ಸ್ಥಾನ ಸಿಕ್ಕಿದೆ. ಸೆ.24ರಿಂದ ಏಕ​ದಿನ ಸರಣಿ ಆರಂಭ​ಗೊ​ಳ್ಳ​ಲಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026: ಪ್ಯಾಟ್‌ ಕಮಿನ್ಸ್ ಬರುವವರೆಗೂ ಈ ಬಿಗ್ ಹಿಟ್ಟರ್‌ಗೆ ನಾಯಕತ್ವ ಪಟ್ಟ ಕಟ್ಟಿದ ಸನ್‌ರೈಸರ್ಸ್ ಹೈದರಾಬಾದ್!
T20 Rankings: ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ಸಂಜು ಸ್ಯಾಮ್ಸನ್ ಮುಂಬಡ್ತಿ, ಅಭಿಷೇಕ್ ಶರ್ಮಾ ನಂ.1 ಸ್ಥಾನ ಭದ್ರ!