
ಮ್ಯಾಂಚೆಸ್ಟರ್(ಸೆ.06): ಆಸ್ಪ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್, ಇಂಗ್ಲೆಂಡ್ ವಿರುದ್ಧದ ಆ್ಯಷಸ್ ಸರಣಿಯ 4ನೇ ಟೆಸ್ಟ್‌ನಲ್ಲಿ ಭರ್ಜರಿ ದ್ವಿಶತಕ ಬಾರಿಸಿದ್ದಾರೆ. ಆಸೀಸ್ ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಕಲೆಹಾಕಿದ್ದು, ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.
ಇದನ್ನೂ ಓದಿ: ಕೇವಲ 12 ಮ್ಯಾಚ್: 85ರಿಂದ 3ನೇ ರ‍್ಯಾಂಕ್, ಇದು ಬುಮ್ರಾ ಝಲಕ್..!
ಸ್ಮಿತ್ ವೃತ್ತಿಬದುಕಿನಲ್ಲಿ ಇದು 3ನೇ ದ್ವಿಶತಕವಾಗಿದ್ದು, ಮೂರೂ ದ್ವಿಶತಕಗಳು ಇಂಗ್ಲೆಂಡ್ ವಿರುದ್ಧವೇ ದಾಖಲಾಗಿರುವುದು ವಿಶೇಷ. 3 ವಿಕೆಟ್ ನಷ್ಟಕ್ಕೆ 170 ರನ್‌ಗಳಿಂದ 2ನೇ ದಿನದಾಟಕ್ಕಿಳಿದ ಆಸೀಸ್‌ಗೆ ಸ್ಮಿತ್ ಆಸರೆಯಾದರು. 310 ಎಸೆತಗಳಲ್ಲಿ 22 ಬೌಂಡರಿ ಹಾಗೂ 2 ಸಿಕ್ಸರ್‌ಗಳೊಂದಿಗೆ ಸ್ಮಿತ್ ದ್ವಿಶತಕ ಪೂರೈಸಿದರು. 116 ಓವರ್‌ಗಳಲ್ಲಿ ಆಸ್ಪ್ರೇಲಿಯಾ 7 ವಿಕೆಟ್‌ಗೆ 415 ರನ್ ಗಳಿಸಿತು. ನಾಯಕ ಟಿಮ್ ಪೈನ್ 6ನೇ ವಿಕೆಟ್‌ಗೆ ಸ್ಮಿತ್ ಜತೆಗೂಡಿ 135 ರನ್ ಜೊತೆಯಾಟವಾಡಿದರು.
ಸ್ಕೋರ್: ಆಸ್ಪ್ರೇಲಿಯಾ 116 ಓವರ್‌ಗಳಲ್ಲಿ 415/7 (ಸ್ಮಿತ್ 205*, ಪೈನ್ 58)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.