ಆಸ್ಟ್ರೇಲಿಯಾ ಪ್ರವಾಸದಲ್ಲಿ ಯಶಸ್ವಿ ಪ್ರದರ್ಶನ ನೀಡಲು ಪ್ರಮುಖ ಕಾರಣರಾದ ಟೀಂ ಇಂಡಿಯಾ ಆಯ್ಕೆ ಸಮಿತಿಗೆ ಬಿಸಿಸಿಐ ಭರ್ಜರಿ ಗಿಫ್ಟ್ ಘೋಷಿಸಿದೆ. ಅತ್ಯುತ್ತಮ ತಂಡ ಆಯ್ಕೆ ಮಾಡಿದ ಆಯ್ಕೆ ಸಮಿತಿಗೆ ಬಿಸಿಸಿಐ ನೀಡಿದ ಉಡುಗೊರೆ ಏನು? ಇಲ್ಲಿದೆ ವಿವರ.
ಮುಂಬೈ(ಜ.22): ಆಸ್ಟ್ರೇಲಿಯಾ ವಿರುದ್ಧ ಟಿ20, ಏಕದಿನ ಹಾಗೂ ಟೆಸ್ಟ್ ಸರಣಿಯಲ್ಲಿ ಅದ್ಬುತ ಪ್ರದರ್ಶನ ನೀಡಿ ಐತಿಹಾಸಿಕ ದಾಖಲೆ ಬರೆದ ಟೀಂ ಇಂಡಿಯಾ ಇದೀಗ ನ್ಯೂಜಿಲೆಂಡ್ ಸರಣಿಗೆ ಸಜ್ಜಾಗಿದೆ.ಇತ್ತ ಬಿಸಿಸಿಐ ಆಸಿಸ್ ಪ್ರವಾಸಕ್ಕೆ ಅತ್ಯುತ್ತಮ ತಂಡ ಆಯ್ಕೆ ಮಾಡಿದ ಸೆಲೆಕ್ಷನ್ ಕಮಿಟಿ ಸದಸ್ಯರಿಗೆ ತಲಾ 20 ಲಕ್ಷ ರೂಪಾಯಿ ಬುಹಮಾನ ಘೋಷಿಸಿದೆ.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಅಲಭ್ಯತೆಯಿಂದ 3ನೇ ವೇಗಿ ಅನಿವಾರ್ಯ: ಕೊಹ್ಲಿ!
ಎಂ.ಎಸ್.ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿಯ ಐವರಿಗೆ ಬಿಸಿಸಿಐ ತಲಾ 20 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ. ಇಷ್ಟೇ ಅಲ್ಲ ಅತ್ಯುತ್ತಮ ತಂಡ ಆಯ್ಕೆ ಮಾಡಿ ಐತಿಹಾಸಿಕ ಗೆಲುವಿಗೆ ಕಾರಣರಾದ ಆಯ್ಕೆ ಸಮಿತಿಯನ್ನ ಸಿಒಎ ವಿನೋದ್ ರೈ ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಸೆಹ್ವಾಗ್ ದಾಖಲೆ ಪುಡಿ ಮಾಡಲು ಸಜ್ಜಾದ ಕೊಹ್ಲಿ!
ಇಂಜುರಿ, ಹಲವು ಕ್ರಿಕೆಟಿಗ ಅಲಭ್ಯತೆ ಸೇರಿದಂತೆ ಹಲವು ಸಮಸ್ಯೆಯನ್ನ ಆಯ್ಕೆ ಸಮಿತಿ ಎದುರಿಸಿತ್ತು. ಇಷ್ಟಾದರೂ ಅತ್ಯುತ್ತಮ ತಂಡವನ್ನ ಆಯ್ಕೆ ಮಾಡಿದೆ. ಪೃಥ್ವಿ ಶಾ ಇಂಜುರಿ, ಕೆಎಲ್ ರಾಹುಲ್ ಮುರಳಿ ವಿಜಯ್ ಫಾರ್ಮ್ ಸಮಸ್ಯೆ ಎದುರಿಸಿದ್ದರು. ಇದರ ನಡುವೆ ಪ್ರತಿಭಾನ್ವಿತರಿಗೆ ಅವಕಾಶ ಮಾಡಿಕೊಟ್ಟ ಆಯ್ಕೆ ಸಮಿತಿ ಕಾರ್ಯ ನಿಜಕ್ಕೂ ಮೆಚ್ಚಲೇ ಬೇಕು ಎಂದು ವಿನೋದ್ ರೈ ಹೇಳಿದ್ದಾರೆ.