ಅಸಭ್ಯ ಹೇಳಿಕೆಯಿಂದ ತಂಡದಿಂದ ಅಮಾನತಾಗಿರುವ ಹಾರ್ದಿಕ್ ಪಾಂಡ್ಯ ಅಲಭ್ಯತೆ ಕುರಿತು ನಾಯಕ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ಪಾಂಡ್ಯ ಎಷ್ಟು ಮುಖ್ಯ ಅನ್ನೋದನ್ನ ಕೊಹ್ಲಿ ಹೇಳಿದ್ದಾರೆ.
ನೇಪಿಯರ್(ಜ.22): ತಂಡ ಆಲ್ರೌಂಡರ್ ಸಮಸ್ಯೆ ಎದುರಿಸಿದರೆ ಟೀಂ ಕಾಂಬಿನೇಷನ್ ಜಟಿಲವಾಗಲಿದೆ. ಇದನ್ನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಒಪ್ಪಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ಅಲಭ್ಯತೆಯಿಂದ 3ನೇ ವೇಗಿಯನ್ನ ಕಣಕ್ಕಿಳಿಸುವುದು ಅನಿವಾರ್ಯವಾಗಲಿದೆ ಎಂದು ಕೊಹ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಐಸಿಸಿ ಪ್ರಕಟಿಸಿದ ಬೆಸ್ಟ್ ಟೆಸ್ಟ್ ಮತ್ತು ಒನ್’ಡೇ ತಂಡವಿದು..!
ಖಾಸಗಿ ಟಿವಿ ಕಾರ್ಯಕ್ರಮದಲ್ಲಿ ಮಹಿಳೆಯರ ಕುರಿತು ಅಸಭ್ಯ ಹೇಳಿಕೆಯಿಂದ ಹಾರ್ದಿಕ್ ಪಾಂಡ್ಯ ಅಮಾನತಾಗಿದ್ದಾರೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ತಂಡ 3ನೇ ವೇಗಿಯನ್ನ ಅನಿವಾರ್ಯವಾಗಿ ಕಣಕ್ಕಿಳಿಸಬೇಕಿದೆ. ಹಾರ್ದಿಕ್ ಈ ಸ್ಥಾನ ತುಂಬುತ್ತಿದ್ದರು ಎಂದು ಕೊಹ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಕಷ್ಟದಲ್ಲಿರೋ ಮಾಜಿ ಕ್ರಿಕೆಟಿಗನಿಗೆ ಪಾಂಡ್ಯ ಬ್ಲ್ಯಾಂಕ್ ಚೆಕ್: ಆದ್ರೆ ಕಂಡೀಶನ್ ಅಪ್ಲೈ!
ಫಾಸ್ಟ್ ಆಲ್ರೌಂಡರ್ ತಂಡದಲ್ಲಿದ್ದರೆ, ಬ್ಯಾಟಿಂಗ್ ವಿಭಾಗದ ಜೊತಗೆ ಬೌಲಿಂಗ್ ಕೂಡ ಬಲಿಷ್ಠಗೊಳ್ಳಲಿದೆ. ಆದರೆ 3 ವೇಗಿಗಳನ್ನ ಕಣಕ್ಕಿಳಿಸಿದರೆ ಮಧ್ಯಮ ಕ್ರಮಾಂಕದ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ. ತಂಡದಲ್ಲಿ ಅತ್ಯುತ್ತಮ ಆಲ್ರೌಂಡರ್ ಇದ್ದರೆ, 3ನೇ ವೇಗಿ ಕಣಕ್ಕಿಳಿಸುವ ಅನಿವಾರ್ಯತೆ ಎದುರಾಗಲ್ಲ ಎಂದಿದ್ದಾರೆ.