ಚೀನಾ ಸಂಸ್ಥೆ ಜತೆ ಸಿಂಧು 50 ಕೋಟಿ ಒಪ್ಪಂದ

By Web DeskFirst Published Feb 9, 2019, 2:11 PM IST
Highlights

ಭಾರತೀಯ ಬ್ಯಾಡ್ಮಿಂಟನ್‌ನಲ್ಲಿ ಅತಿಹೆಚ್ಚು ಮೊತ್ತದ ಒಪ್ಪಂದದ ದಾಖಲೆ ಇದಾಗಿದೆ. ವಿಶ್ವ ಬ್ಯಾಡ್ಮಿಂಟನ್‌ನ ಗರಿಷ್ಠ ಮೊತ್ತದ ಒಪ್ಪಂದಗಳಲ್ಲಿ ಇದೂ ಒಂದು ಎಂದು ತಜ್ಞರು ತಿಳಿಸಿದ್ದಾರೆ.

ನವದೆಹಲಿ[ಫೆ.09]: ಚೀನಾದ ಲೀ-ನಿಂಗ್‌ ಸಂಸ್ಥೆ ಜತೆ ಭಾರತೀಯ ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು 50 ಕೋಟಿ ರುಪಾಯಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. 

ಭಾರತೀಯ ಬ್ಯಾಡ್ಮಿಂಟನ್‌ನಲ್ಲಿ ಅತಿಹೆಚ್ಚು ಮೊತ್ತದ ಒಪ್ಪಂದದ ದಾಖಲೆ ಇದಾಗಿದೆ. ವಿಶ್ವ ಬ್ಯಾಡ್ಮಿಂಟನ್‌ನ ಗರಿಷ್ಠ ಮೊತ್ತದ ಒಪ್ಪಂದಗಳಲ್ಲಿ ಇದೂ ಒಂದು ಎಂದು ತಜ್ಞರು ತಿಳಿಸಿದ್ದಾರೆ. ಲೀ-ನಿಂಗ್‌ ಸಂಸ್ಥೆ ಸಿಂಧುಗೆ ಪ್ರಾಯೋಜತ್ವದ ರೂಪದಲ್ಲಿ 40 ಕೋಟಿ, ಪರಿಕರಗಳ ಪೂರೈಕೆ ಮೂಲಕ 10 ಕೋಟಿ ರುಪಾಯಿ ನೀಡಲಿದೆ ಎನ್ನಲಾಗಿದೆ.

ಒಲಿಂಪಿಕ್ಸ್ ಹಾಗೂ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್’ಶಿಪ್’ನಲ್ಲಿ ಬೆಳ್ಳಿ ಪದಕ ಜಯಿಸಿದ ಏಕೈಕ ಭಾರತೀಯ ಬ್ಯಾಡ್ಮಿಂಟನ್ ಪಟು ಎನ್ನುವ ಕೀರ್ತಿಗೆ ಪಿ.ವಿ ಸಿಂಧು ಪಾತ್ರರಾಗಿದ್ದಾರೆ.

click me!