ಬ್ಯಾಡ್ಮಿಂಟನ್ ಏಷ್ಯಾ ಕೂಟ ಇಂದು ಆರಂಭ: ಲಕ್ವ ಸೇನ್, ಶ್ರೀಕಾಂತ್ ಮೇಲೆ ನಿರೀಕ್ಷೆ

By Kannadaprabha News  |  First Published Apr 9, 2024, 10:09 AM IST

ಪುರುಷರ ಸಿಂಗಲ್ಸ್‌ನಲ್ಲಿ ಲಕ್ವ ಸೇನ್, ಎಚ್.ಎಸ್.ಪ್ರಣಯ್ ಕಿದಂಬಿ ಶ್ರೀಕಾಂತ್ ಪದಕ ನಿರೀಕ್ಷೆಯಲ್ಲಿದ್ದು, ಪ್ರಿಯಾನು ರಾಜಾವತ್ ಕೂಡಾ ಪ್ರಮುಖ ಆಕರ್ಷಣೆ ಎನಿಸಿಕೊಂಡಿ ದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು ಜೊತೆ ಆಕರ್ಷಿ ಕಶ್ಯಪ್ ಭಾರತಕ್ಕೆ ಮೊದಲ ಚಿನ್ನ ತಂದುಕೊಡುವ ಕಾತರದಲ್ಲಿದ್ದಾರೆ.


ನಿಂಗ್‌(ಚೀನಾ): ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುನ್ನ ಕೊನೆಯ ಪ್ರಮುಖ ಬಿಡಬ್ಲ್ಯುಎಫ್ ಟೂರ್ನಿಯಾಗಿರುವ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್ ಮಂಗಳವಾರದಿಂದ ಆರಂಭ ಗೊಳ್ಳಲಿದೆ. ಭಾರತದ ತಾರಾ ಶಟ್ಲರ್‌ಗಳು ಸುಧಾರಿತ ಪ್ರದ ರ್ಶನ ನೀಡಿ ಪದಕ ಬರ ನೀಗಿಸುವ ಕಾತರದಲ್ಲಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಲಕ್ವ ಸೇನ್, ಎಚ್.ಎಸ್.ಪ್ರಣಯ್ ಕಿದಂಬಿ ಶ್ರೀಕಾಂತ್ ಪದಕ ನಿರೀಕ್ಷೆಯಲ್ಲಿದ್ದು, ಪ್ರಿಯಾನು ರಾಜಾವತ್ ಕೂಡಾ ಪ್ರಮುಖ ಆಕರ್ಷಣೆ ಎನಿಸಿಕೊಂಡಿ ದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು ಜೊತೆ ಆಕರ್ಷಿ ಕಶ್ಯಪ್ ಭಾರತಕ್ಕೆ ಮೊದಲ ಚಿನ್ನ ತಂದುಕೊಡುವ ಕಾತರದಲ್ಲಿದ್ದಾರೆ. ವಿಶ್ವ ನಂ.1, ಹಾಲಿ ಚಾಂಪಿಯನ್ ಸಾತ್ವಿಕ್-ಚಿರಾಗ್ ಶೆಟ್ಟಿ ಜೋಡಿ ಟೂರ್ನಿಯಲ್ಲಿ ಆಡುತ್ತಿಲ್ಲ.

Latest Videos

undefined

ಕ್ಯಾಂಡಿಡೇಟ್ ಚೆಸ್‌: ವಿದಿತ್‌ಗೆ ಸತತ 2ನೇ ಸುತ್ತಲೂ ಸೋಲು

ಟೊರೊಂಟೊ(ಕೆನಡಾ): ಇಲ್ಲಿ ನಡೆಯುತ್ತಿ ರುವ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯಲ್ಲಿ ಭಾರತದ ತಾರಾ ಚೆಸ್ ಪಟು ವಿದಿತ್ ಗುಜರಾತಿ ಸತತ 2 ಸುತ್ತುಗಳಲ್ಲಿ ಸೋಲನುಭವಿಸಿದ್ದಾರೆ. 3ನೇ ಸುತ್ತಿನಲ್ಲಿ ಆರ್.ಪ್ರಜ್ಞಾನಂದ ವಿರುದ್ಧ ಪರಾಭವಗೊಂಡಿದ್ದ ವಿದಿ‌ಗೆ ಭಾನುವಾರ ಮಧ್ಯರಾತ್ರಿ ನಡೆದ ಮುಕ್ತ ವಿಭಾಗದ 4ನೇ ಸುತ್ತಿನ ಪಂದ್ಯದಲ್ಲಿ ರಷ್ಯಾದ ಇಯಾನ್ ನೆಪೋಮ್ಮಿಯಾಚ್ಚಿ ವಿರುದ್ಧ ಸೋಲುಂಡರು.

ಇದೇವೇಳೆ ಡಿ.ಗುಕೇಶ್ ಅವರು ಅಮೆರಿಕದ ಫ್ಯಾಬಿಯಾನೊ ಕರುವಾನಾ ವಿರುದ್ಧ, ಆರ್ ಪ್ರಜ್ಞಾನಂದ ಅವರು ಅಮೆರಿಕದ ಹಿಕರು ನಕಮುರಾ ವಿರುದ್ಧ ಡ್ರಾಗೆ ತೃಪ್ತಿಪಟ್ಟು ಕೊಂಡರು. ಸದ್ಯ ಇಯಾನ್ 3 ಅಂಕದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಗುಕೇಶ್, ಕರುವಾನಾ ತಲಾ 2.5 ಅಂಕಗಳೊಂದಿಗೆ ಜಂಟಿ 2ನೇ, 2ನೇ, ಪ್ರಜ್ಞಾನಂದ(2 ಅಂಕ) 3ನೇ ಸ್ಥಾನದಲ್ಲಿದ್ದಾರೆ.

ಕಾಮನ್‌ವೆಲ್ತ್‌ ಗೇಮ್ಸ್ ಆತಿಥ್ಯ ರಾಷ್ಟ್ರ ಶೀಘ್ರದಲ್ಲೇ ಘೋಷಣೆ..?

ಇನ್ನು, ಮಹಿಳಾ ವಿಭಾಗದಲ್ಲಿ ಆರ್. ವೈಶಾಲಿ ಅವರು ರಷ್ಯಾದ ಅಲೆಕ್ಸಾಂಡ್ರಾ ಗೊರಿಯಾಚಿನಾ ವಿರುದ್ಧ ತೃಪ್ತಿಪಟ್ಟುಕೊಂಡರು. ಕೊನೆರು ಹಂಪಿ ಬಲ್ಲೇರಿಯಾದ ಸಲಿಮೋವಾ ವಿರುದ್ಧ ಸೋಲನುಭವಿಸಿದರು.

ಮಾಂಟೆ ಕಾರ್ಲೋ: ಮೊದಲ ಸುತ್ತಲ್ಲಿ ಗೆದ್ದು ನಗಾಲ್ ದಾಖಲೆ

ಪ್ಯಾರಿಸ್: ಭಾರತದ ಅಗ್ರ ಟೆನಿಸಿಗ ಸುಮಿತ್ ನಗಾಲ್ ಮಾಂಟೆ ಕಾರ್ಲೋ ಟೆನಿಸ್ ಟೂರ್ನಿಯ ಪ್ರಧಾನ ಸುತ್ತಿನಲ್ಲಿ ಗೆಲುವು ಸಾಧಿಸಿದ ಮೊದಲ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. 

IPL 2024 ತವರಿನಲ್ಲಿ ಗೆಲುವಿನ ಹಳಿಗೆ ಮರಳಿದ ಸಿಎಸ್‌ಕೆ..! ಕೆಕೆಆರ್‌ಗೆ ಹೀನಾಯ ಸೋಲು

ಭಾನುವಾರ ಪ್ರಧಾನ ಸುತ್ತಿಗೇರುವ ಮೂಲಕ 42 ವರ್ಷ ಬಳಿಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂದೆನಿಸಿದ್ದ ನಗಾಲ್, ಸೋಮವಾರ ಮೊದಲ ಸುತ್ತಿನಲ್ಲಿ ವಿಶ್ವನಂ.38, ಇಟಲಿಯ ಅರ್ನಾಲಿ ವಿರುದ್ದ 5-7, 6-2, 6-4 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಇದು ಈ ಆವೃತ್ತಿಯಲ್ಲಿ ವಿಶ್ವ ನಂ.50 ಆಟಗಾರರ ವಿರುದ್ಧ ನಗಾಲ್‌ಗೆ 2ನೇ ಗೆಲುವು. 1982ರಲ್ಲಿ ರಮೇಶ್ ಕೃಷ್ಣನ್ ಟೂರ್ನಿಯ ಪ್ರಧಾನ ಸುತ್ತಿಗೇರಿದ್ದರು.

click me!