Asian Games: ಇಂದಿನಿಂದ ಭಾರತ ಪದಕ ಬೇಟೆ ಆರಂಭ

By Kannadaprabha News  |  First Published Sep 24, 2023, 9:42 AM IST

ಭಾನುವಾರ 9 ಕ್ರೀಡೆಗಳ ವಿವಿಧ ಸ್ಪರ್ಧೆಗಳಲ್ಲಿ ಅಥ್ಲೀಟ್‌ಗಳ ಪದಕ ಬೇಟೆ ಆರಂಭವಾಗಲಿದೆ. ಈ ಪೈಕಿ ಶೂಟಿಂಗ್‌, ವುಶು, ರೋಯಿಂಗ್‌, ಫೆನ್ಸಿಂಗ್‌ ಹಾಗೂ ಈಜು ಸೇರಿದಂತೆ ಒಟ್ಟು 13 ಸ್ಪರ್ಧೆಗಳಲ್ಲಿ ಭಾರತೀಯ ಅಥ್ಲೀಟ್‌ಗಳು ಪದಕ ನಿರೀಕ್ಷೆಯೊಂದಿಗೆ ಭಾನುವಾರ ಕಣಕ್ಕಿಳಿಯಲಿದ್ದಾರೆ.


ಹಾಂಗ್ಝೂ(ಚೀನಾ): ಏಷ್ಯನ್‌ ಗೇಮ್ಸ್‌ಗೆ ಶನಿವಾರ ಅಧಿಕೃತ ಚಾಲನೆ ಲಭಿಸಿತಾದರೂ, ಕೆಲ ದಿನಗಳ ಹಿಂದೆಯೇ ಹಲವು ಕ್ರೀಡೆಗಳ ಸ್ಪರ್ಧೆಗಳು ಆರಂಭಗೊಂಡಿದ್ದವು. ಆದರೆ ಯಾವುದೇ ಕ್ರೀಡೆಗೂ ಈ ವರೆಗೆ ಪದಕ ನೀಡಲಾಗಿಲ್ಲ. ಭಾನುವಾರ 9 ಕ್ರೀಡೆಗಳ ವಿವಿಧ ಸ್ಪರ್ಧೆಗಳಲ್ಲಿ ಅಥ್ಲೀಟ್‌ಗಳ ಪದಕ ಬೇಟೆ ಆರಂಭವಾಗಲಿದೆ. ಈ ಪೈಕಿ ಶೂಟಿಂಗ್‌, ವುಶು, ರೋಯಿಂಗ್‌, ಫೆನ್ಸಿಂಗ್‌ ಹಾಗೂ ಈಜು ಸೇರಿದಂತೆ ಒಟ್ಟು 13 ಸ್ಪರ್ಧೆಗಳಲ್ಲಿ ಭಾರತೀಯ ಅಥ್ಲೀಟ್‌ಗಳು ಪದಕ ನಿರೀಕ್ಷೆಯೊಂದಿಗೆ ಭಾನುವಾರ ಕಣಕ್ಕಿಳಿಯಲಿದ್ದಾರೆ.

ಭಾರತದ ತಂಡಗಳು ಟಿಟಿ ಪ್ರಿ ಕ್ವಾರ್ಟರ್‌ಗೆ

Latest Videos

undefined

ಏಷ್ಯನ್‌ ಗೇಮ್ಸ್‌ ಟೇಬಲ್‌ ಟೆನಿಸ್‌ ಸ್ಪರ್ಧೆಯಲ್ಲಿ ಭಾರತದ ಪುರುಷರ ಹಾಗೂ ಮಹಿಳಾ ತಂಡ ಪ್ರಿ ಕ್ವಾರ್ಟರ್‌ ಫೈನಲ್‌ಗೇರಿವೆ. ಪುರುಷರ ತಂಡ ‘ಎಫ್‌’ ಗುಂಪಿನ ತಜಿಕಿಸ್ತಾನ ವಿರುದ್ಧದ ಪಂದ್ಯದಲ್ಲಿ 3-0 ಅಂತರದಲ್ಲಿ ಗೆದ್ದರೆ, ಮಹಿಳಾ ತಂಡ ನೇಪಾಳ ವಿರುದ್ಧ 3-0 ಜಯಗಳಿಸಿತು. ಅಂತಿಮ 16ರ ಘಟ್ಟದ ಪಂದ್ಯದಲ್ಲಿ ಮಹಿಳಾ ತಂಡ ಥಾಯ್ಲೆಂಡ್‌ ವಿರುದ್ಧ, ಪುರುಷರ ತಂಡ ಕಜಕಸ್ತಾನ ವಿರುದ್ಧ ಸೆಣಸಾಡಲಿದೆ.

ಚೀನಾದ ಹಾಂಗ್‌ಝೋನಲ್ಲಿ ಏಷ್ಯನ್‌ ಗೇಮ್ಸ್‌ಗೆ ವರ್ಣರಂಜಿತ ಚಾಲನೆ

ಹಾಕಿ, ಬಾಕ್ಸಿಂಗ್‌, ಟೆನಿಸಲ್ಲಿ ಇಂದಿನಿಂದ ಭಾರತದ ಸ್ಪರ್ಧೆ

ಭಾರತ ಈ ಬಾರಿ ಹೆಚ್ಚಿನ ಪದಕ ನಿರೀಕ್ಷೆ ಇಟ್ಟಿರುವ ಶೂಟಿಂಗ್‌, ಬಾಕ್ಸಿಂಗ್‌ ಸೇರಿದಂತೆ ಕೆಲ ಕ್ರೀಡೆಗಳು ಭಾನುವಾರದಿಂದ ಆರಂಭಗೊಳ್ಳಲಿದೆ. ಬಾಕ್ಸಿಂಗ್‌ನಲ್ಲಿ ಭಾರತದಿಂದ 2 ಬಾರಿ ವಿಶ್ವ ಚಾಂಪಿಯನ್‌ ನಿಖಾತ್‌ ಜರೀನ್‌, ಲವ್ಲೀನ್‌ ಬೊರ್ಗೊಹೈನ್‌, ಶಿವ ಥಾಪ, ದೀಪಕ್‌ ಭೀರಿಯಾ, ನಿಶಾಂತ್‌ ದೇವ್‌ ಸೇರಿದಂತೆ ಪ್ರಮುಖರು ಕಣಕ್ಕಿಳಿಯಲಿದ್ದಾರೆ.

ಇದೇ ವೇಳೆ ಪುರುಷರ ಹಾಕಿ ತಂಡ ಉಜ್ಬೇಕಿಸ್ತಾನ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಟೆನಿಸ್‌ನ ಸಿಂಗಲ್ಸ್‌ನಲ್ಲಿ ಸುಮಿತ್‌ ನಗಾಲ್‌, ಅಂಕಿತಾ ರಾಣಾ ಹಾಗೂ ಮಿಶ್ರ ಡಬಲ್ಸ್‌ ತಂಡ ಆಡಲಿದೆ. ಭಾರತ ಪುರುಷರ ಫುಟ್ಬಾಲ್‌ ತಂಡ ಮ್ಯಾನ್ಮಾರ್‌ ವಿರುದ್ಧ, ಮಹಿಳಾ ತಂಡ ಥಾಯ್ಲೆಂಡ್‌ ವಿರುದ್ಧ ಸ್ಪರ್ಧಿಸಲಿದೆ. ವಾಲಿಬಾಲ್‌ನಲ್ಲಿ ಬಲಿಷ್ಠ ಜಪಾನ್‌ ವಿರುದ್ಧ ಭಾರತ ಕ್ವಾರ್ಟರ್‌ ಫೈನಲ್‌ನಲ್ಲಿ ಸೆಣಸಾಡಲಿದೆ. ಉಳಿದಂತೆ ಚೆಸ್‌, ಈಜು, ಟೇಬಲ್‌ ಟೆನಿಸ್, ರೋಯಿಂಗ್‌ ಸೇರಿ ಇನ್ನೂ ಕೆಲ ಸ್ಪರ್ಧೆಗಳಲ್ಲಿ ಭಾರತೀಯರು ಭಾನುವಾರ ಅದೃಷ್ಠ ಪರೀಕ್ಷೆಗಿಳಿಯಲಿದ್ದಾರೆ.

ಏಷ್ಯಾಡ್‌ನಲ್ಲಿ ಭಾರತದ ಸಾಧನೆ ಏನು? 40 ವರ್ಷಗಳಿಂದ ಭಾರತಕ್ಕೆ ಆತಿಥ್ಯದ ಹಕ್ಕು ಸಿಕ್ಕಿಲ್ಲವೇಕೆ?

ಇಂದು ಭಾರತ-ಬಾಂಗ್ಲಾ ಕ್ರಿಕೆಟ್‌ ಸೆಮೀಸ್‌ ಫೈಟ್‌

19ನೇ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿರುವ ಭಾರತ ಮಹಿಳಾ ತಂಡ ಸೆಮಿಫೈನಲ್‌ನಲ್ಲಿ ಭಾನುವಾರ ಬಾಂಗ್ಲಾದೇಶ ವಿರುದ್ಧ ಸೆಣಸಾಡಲಿದೆ. ನೇರವಾಗಿ ಕ್ವಾರ್ಟರ್‌ ಫೈನಲ್‌ಗೇರಿದ್ದ ಭಾರತ ತಂಡ, ಮಲೇಷ್ಯಾ ವಿರುದ್ಧದ ಕ್ವಾರ್ಟರ್‌ ಪಂದ್ಯ ಳೆಗೆ ಬಲಿಯಾದರೂ, ಟಿ20 ರ್‍ಯಾಂಕಿಂಗ್‌ನಲ್ಲಿ ಮುಂದಿರುವ ಕಾರಣ ಭಾರತ ಸೆಮೀಸ್‌ಗೇರಿತ್ತು. ಅತ್ತ ಬಾಂಗ್ಲಾ ಕೂಡಾ ಹಾಂಕಾಂಗ್‌ ವಿರುದ್ಧದ ಪಂದ್ಯ ಮಳೆಯಿಂದ ರದ್ದುಗೊಂಡ ಬಳಿಕ ರ್‍ಯಾಂಕಿಂಗ್ ಆಧಾರದಲ್ಲಿ ಸೆಮೀಸ್‌ ತಲುಪಿದೆ. ಭಾನುವಾರ ಮತ್ತೊಂದು ಸೆಮೀಸ್‌ನಲ್ಲಿ ಪಾಕಿಸ್ತಾನ-ಶ್ರೀಲಂಕಾ ಮುಖಾಮುಖಿಯಾಗಲಿವೆ.

click me!