
ನವದೆಹಲಿ (ಅ.4): ಭಾರತದ ಅಗ್ರಮಾನ್ಯ ಅಥ್ಲೀಟ್ ನೀರಜ್ ಚೋಪ್ರಾ ಮತ್ತು ಕಿಶೋರ್ ಜೆನಾ ಅವರು ಏಷ್ಯನ್ ಗೇಮ್ಸ್‌ನ ಜಾವೆಲಿನ್ ತ್ರೋ ಸ್ಪರ್ಧೆಯಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ನೀರಜ್ ಚಿನ್ನದ ಪದಕ ಸಾಧನೆ ಮಾಡಿದರೆ, ಕಿಶೋರ್ ಬೆಳ್ಳಿ ಪದಕ ಗೆದ್ದಿದ್ದಾರೆ. ನೀರಜ್ 88.88 ಮೀಟರ್ ದೂರ ಎಸೆಯುವ ಮೂಲಕ ಸ್ವರ್ಣಕ್ಕೆ ಮುತ್ತಿಟ್ಟರೆ, ಕಿಶೋರ್ 87.54 ಮೀಟರ್ ದೂರ ಜಾವೆಲಿನ್ ಎಸೆದು ಬೆಳ್ಳಿ ಪದಕ ಗೆದ್ದರು. ಏಷ್ಯನ್ ಗೇಮ್ಸ್‌ನ ಜಾವೆಲಿನ್ ಥ್ರೋ ಸ್ಪರ್ಧೆಯ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಒಂದೇ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಜಯಿಸಿದೆ. ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 19ನೇ ಆವೃತ್ತಿಯ ಏಷ್ಯನ್ ಗೇಮ್ಸ್‌ನ ಜಾವೆಲಿನ್ ಥ್ರೋ ಸ್ಪರ್ಧೆಗೂ ಮುನ್ನ ಸಾಕಷ್ಟು ಉಂಟಾದವು. ಸ್ಪಷ್ಟವಾಗಿ ಚೀನಾ ನೀರಜ್ ಅವರ ಸ್ವರ್ಣ ಪದಕವನ್ನು ತಡೆಯುವ ನಿಟ್ಟಿನಲ್ಲಿ ಪ್ರಯತ್ನ ಮಾಡಿತಾದರೂ, ನೀರಜ್ ಚೋಪ್ರಾಗೆ ಇದು ಪರಿಣಾಮ ಬೀರಲಿಲ್ಲ. ಚೀನಾದ ಕುತಂತ್ರಕ್ಕೆ ಭಾರತ ಈ ಸ್ಪರ್ಧೆಯ ಚಿನ್ನ ಮಾತ್ರವಲ್ಲ, ಬೆಳ್ಳಿ ಪದಕವನ್ನೂ ನೀಡಿ ದಿಟ್ಟ ಉತ್ತರ ನೀಡಿದೆ.
ನೀರಜ್ ತಮ್ಮ ಸ್ಪರ್ಧೆಯ ನಾಲ್ಕನೇ ಎಸೆತದಲ್ಲಿ 88.88 ಮೀಟರ್ ದೂರ ಜಾವೆಲಿನ್ ಎಸೆದು ಚಿನ್ನ ಗೆದ್ದರು. ಉಳಿದಂತೆ ಉಳಿದ ಯಾವ ದೇಶದ ಅಥ್ಲೀಟ್ ಕೂಡ ಇಷ್ಟು ದೂರ ಜಾವಲಿನ್ ಎಸೆಯಲು ಸಾಧ್ಯವಾಗಲಿಲ್ಲ. ಇನ್ನೊಂದೆಡೆ ಭಾರತದ ಮತ್ತೊಬ್ಬ ಅಥ್ಲೀಟ್ ಕಿಶೋರ್ ಕೂಡ ತಮ್ಮ ನಾಲ್ಕನೇ ಎಸೆತದಲ್ಲಿ 87.54 ದೂರ ಎಸೆದು 2ನೇ ಸ್ಥಾನಕ್ಕೇರಿದರು. ಅದರೊಂದಿಗೆ ಚಿನ್ನ ಹಾಗೂ ಬೆಳ್ಳಿ ಪದಕಗಳೂ ಭಾರತದ ಪಾಲಾದವು.
ನೀರಜ್ ಚೋಪ್ರಾ ತಮ್ಮ ಮೊದಲ ಥ್ರೋ ಅನ್ನು 82.38 ದೂರ ಎಸೆದರೆ, 2ನೇ ತ್ರೋ 84.49 ಮೀಟರ್ ಎಸೆದರೆ, 3ನೇ ಥ್ರೋ ಫೌಲ್ ಮಾಡಿದ್ದರು. ನಾಲ್ಕನೇ ಥ್ರೋದಲ್ಲಿ 88.88 ಮೀಟರ್ ದೂರ ಎಸೆದಿದ್ದರು. ಐದನೇ ಥ್ರೋ ಅನ್ನು 80.80 ಮೀಟರ್ ಎಸೆದರೆ, 6ನೇ ಥ್ರೋಅನ್ನು ಫೌಲ್ ಮಾಡಿದ್ದರು. ಇದರೊಂದಿಗೆ ತಮ್ಮ ವಿರುದ್ಧ ಮಾಡಿದ್ದ ಕುತಂತ್ರಕ್ಕೆ ಉತ್ತರ ನೀಡಿದರು.
ಸಾಮಾನ್ಯವಾಗಿ ಜಾವೆಲಿನ್, ಶಾಟ್‌ಪುಟ್, ಹ್ಯಾಮರ್‌ಥ್ರೋನಂಥ ಸ್ಪರ್ಧೆಗಳಲ್ಲಿ ಅಥ್ಲೀಟ್‌ಗಳು ತಮ್ಮ ಮೊದಲ ಅವಕಾಶದಲ್ಲಿಯೇ ಇದ್ದಷ್ಟು ಶಕ್ತಿ ಬಳಸಿಕೊಂಡು ಎಸೆಯುತ್ತಾರೆ. ಅದರಂತೆ ನೀರಜ್ ಚೋಪ್ರಾ ತಮ್ಮ ಮೊದಲ ಎಸೆತದಲ್ಲಿ ಅಂದಾಜು 85 ಮೀಟರ್ ದೂರು ಜಾವೆಲಿನ್ ಎಸೆದಿದ್ದರು. ಇದು ಚಿನ್ನದ ಪದಕದ ಸಾಧನೆಯೇ ಆಗಿತ್ತು. ಆದರೆ, ಏಷ್ಯನ್ ಗೇಮ್ಸ್ ವೆಬ್‌ಸೈಟ್‌ನಲ್ಲಿ ಇದನ್ನು ಅಪ್‌ಡೇಟ್ ಮಾಡಿರಲಿಲ್ಲ. ಅಲ್ಲದೇ ತಾಂತ್ರಿಕ ದೋಷದಿಂದ ಕೆಲಕಾಲ ಸ್ಪರ್ಧೆಯನ್ನು ಸ್ಥಗಿತ ಮಾಡಲಾಗಿತ್ತು. ಕೊನೆಗೆ, ಮಾಪನದಲ್ಲಿ ಕೆಲವು ಸಮಸ್ಯೆಗಳಿವೆ ಎಂದು ವರದಿ ಮಾಡಲಾಗಿತ್ತು.
ಪ್ರಸಾರದ ಗ್ರಾಫಿಕ್ಸ್ ಕೂಡ ಜೋಡಿಸಲ್ಪಟ್ಟಂತೆ ಕಂಡುಬರಲಿಲ್ಲ. ಅಂದರೆ ತಾಂತ್ರಿಕ ದೋಷದಿಂದಾಗಿ ಆ ಎಸೆತವನ್ನು ಸ್ಪಷ್ಟವಾಗಿ ಗುರುತಿಸಲಿಲ್ಲ. ಅದಲ್ಲದೆ, ನೀರಜ್ ಎಸೆದ ಈ ಥ್ರೋಅನ್ನು ಫೌಲ್ ಎಂದೂ ಕೂಡ ಪರಿಗಣಿಸಿರಲಿಲ್ಲ. ಕೊನೆಗೆ, ನೀರಜ್‌ಗೆ ರೀಟೇಕ್ ಕೇಳಲಾಗಿತ್ತು. ಇದಾದ ಬಳಿಕ ಹಿಂತಿರುಗಿ ನೋಡದ ನೀರಜ್ ತಮ್ಮ ಸಭ್ಯತೆ ಮತ್ತು ಸಾಮರ್ಥ್ಯದಿಂದ ಚಿನ್ನ ಗೆದ್ದು ತಕ್ಕ ಉತ್ತರ ನೀಡಿದರು.
Asian Games 2023: ಜೈ ಹೋ ನೀರಜ್, ಮತ್ತೆ ಚಿನ್ನ ಗೆದ್ದ ಜಾವಲಿನ್ ಹೀರೋ..! ಕಿಶೋರ್‌ಗೆ ಬೆಳ್ಳಿ ಕಿರೀಟ
ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ನೀರಜ್: ನೀರಜ್ ಈಗಾಗಲೇ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಅವರೊಂದಿಗೆ ಕಿಶೋರ್ ಕೂಡ ಒಲಿಂಪಿಕ್ಸ್ ಟಿಕೆಟ್ ಪಡೆದುಕೊಂಡಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಮುಂದಿನ ವರ್ಷದ ಜುಲೈ 26 ರಿಂದ ಆಗಸ್ಟ್ 11 ರವರೆಗೆ ನಡೆಯಲಿದೆ. ಈ ಋತುವಿನಲ್ಲಿ ನೀರಜ್ ಅವರ ಅತ್ಯುತ್ತಮ ಎಸೆತ 88.77 ಮೀಟರ್ ಆಗಿತ್ತು, ಆದರೆ ಈಗ ಅದು 88.88 ಆಗಿದೆ. ಆದರೆ ಅವರದೇ ಸಾರ್ವಕಾಲಿಕ ಬೆಸ್ಟ್ ಥ್ರೋ 89.94 ಮೀಟರ್. ಮತ್ತೊಂದೆಡೆ, 11 ನೇ ಶ್ರೇಯಾಂಕದ ಕಿಶೋರ್ ಜೆನಾ ಅವರ ಹಿಂದಿನ ಅತ್ಯುತ್ತಮ ಎಸೆತವನ್ನು 84.77 ಮೀಟರ್‌ಗಳು, ಅವರು ಮುರಿದಿದ್ದಾರೆ.
Asian Games 2023 ಇಂದು ನೀರಜ್ ಸ್ಪರ್ಧೆ: ಬಂಗಾರವೇ ಟಾರ್ಗೆಟ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.