ವಿಶ್ವ ಮಟ್ಟದಲ್ಲಿ ತಮ್ಮ ಪ್ರಮುಖ ಎದುರಾಳಿ, ಪಾಕಿಸ್ತಾನದ ನದೀಂ ಗಾಯಗೊಂಡು ಕೂಟದಿಂದ ಹೊರಬಿದ್ದಿರುವ ಕಾರಣ ನೀರಜ್‌ರ ಬಂಗಾರ ಗೆಲ್ಲುವ ಹಾದಿ ಸುಗಮಗೊಂಡಿದೆ. ನೀರಜ್ ಜೊತೆ ಕಿಶೋರ್ ಜೆನಾ, ಕರ್ನಾಟಕದ ಡಿ.ಪಿ.ಮನು ಕೂಡಾ ಪದಕ ನಿರೀಕ್ಷೆಯಲ್ಲಿದ್ದಾರೆ.
ಹಾಂಗ್ಝೂ(ಅ.04): ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್, ಭಾರತದ ನೀರಜ್ ಚೋಪ್ರಾ ಬುಧವಾರ ಪುರುಷರ ಜಾವೆಲಿನ್ ಎಸೆತದಲ್ಲಿ ಕಣಕ್ಕಿಳಿಯಲಿದ್ದಾರೆ. 2018ರಲ್ಲಿ ಚಿನ್ನ ಗೆದ್ದಿದ್ದ ನೀರಜ್, ಈ ಬಾರಿ ಚಾಂಪಿಯನ್ ಪಟ್ಟ ತಮ್ಮಲ್ಲೇ ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ವಿಶ್ವ ಮಟ್ಟದಲ್ಲಿ ತಮ್ಮ ಪ್ರಮುಖ ಎದುರಾಳಿ, ಪಾಕಿಸ್ತಾನದ ನದೀಂ ಗಾಯಗೊಂಡು ಕೂಟದಿಂದ ಹೊರಬಿದ್ದಿರುವ ಕಾರಣ ನೀರಜ್‌ರ ಬಂಗಾರ ಗೆಲ್ಲುವ ಹಾದಿ ಸುಗಮಗೊಂಡಿದೆ. ನೀರಜ್ ಜೊತೆ ಕಿಶೋರ್ ಜೆನಾ, ಕರ್ನಾಟಕದ ಡಿ.ಪಿ.ಮನು ಕೂಡಾ ಪದಕ ನಿರೀಕ್ಷೆಯಲ್ಲಿದ್ದಾರೆ.
ನೀರಜ್‌ರ ಸ್ಪರ್ಧೆ: ಸಂಜೆ 4.45ಕ್ಕೆ, ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್
undefined
ಆರ್ಚರಿಯಲ್ಲಿ 3 ಪದಕ ಖಚಿತ
ಆರ್ಚರಿಯಲ್ಲಿ ಭಾರತ ನಿರೀಕ್ಷೆಯಂತೆಯೇ ಪ್ರಾಬಲ್ಯ ಸಾಧಿಸಿದ್ದು, ಕನಿಷ್ಠ 3 ಪದಕ ಖಚಿತಪಡಿಸಿಕೊಂಡಿದೆ. ಇದರೊಂದಿಗೆ 2014ರ ಶ್ರೇಷ್ಠ ಪ್ರದರ್ಶನವನ್ನು ಸರಿಗಟ್ಟಿದ್ದಾರೆ. ಪುರುಷರ ಕಾಂಪೌಂಡ್ ವಿಭಾಗದಲ್ಲಿ ಅಭಿಷೇಕ್ ವರ್ಮಾ ಹಾಗೂ ಓಜಸ್ ಫೈನಲ್ ಪ್ರವೇಶಿಸಿದ್ದು, ಚಿನ್ನ ಹಾಗೂ ಬೆಳ್ಳಿ ಪದಕ ಖಚಿತವಾಗಿದೆ. ಮಹಿಳೆಯರ ಕಾಂಪೌಂಡ್ ವಿಭಾಗದಲ್ಲಿ ಜ್ಯೋತಿ ಸುರೇಖಾ ವೆನ್ನಂ ಫೈನಲ್ ತಲುಪಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಧೂಳೇಬ್ಬಿಸಿದ ಧೋನಿ ನ್ಯೂ ಲುಕ್..! ಯಾರಿದು ಹೀರೋ ಎಂದ ಫ್ಯಾನ್ಸ್
ಸೆಮಿಫೈನಲ್‌ನಲ್ಲಿ ಅವರು ಭಾರತದವರೇ ಆದ ಹಾಲಿ ವಿಶ್ವ ಚಾಂಪಿಯನ್, 17ರ ಅದಿತಿ ಸ್ವಾಮಿ ವಿರುದ್ಧ ಜಯಗಳಿಸಿದರು. ಅದಿತಿ ಕಂಚಿನ ಪದಕಕ್ಕಾಗಿ ಸ್ಪರ್ಧಿಸಲಿದ್ದಾರೆ. ಭಾರತದ ಆರ್ಚರಿ ಪಟುಗಳು ಇನ್ನೂ 6 ವಿಭಾಗಗಳಲ್ಲಿ ಕ್ವಾರ್ಟರ್‌ನಲ್ಲಿ ಸೆಣಸಲಿದ್ದು, ಮತ್ತಷ್ಟು ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.
ಭಾರತದ ಇತರ ಫಲಿತಾಂಶ
ಬಾಸ್ಕೆಟ್‌ಬಾಲ್: ಭಾರತದ ಮಹಿಳಾ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಹೊರಬಿದ್ದಿದೆ. ಸೋಮವಾರ ಉತ್ತರ ಕೊರಿಯಾ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ 57-96 ಅಂತರದಲ್ಲಿ ಸೋಲು ಎದುರಾಯಿತು.
ಕಬಡ್ಡಿ: ಭಾರತ ಮಹಿಳೆಯರ ತಂಡ ಅನಿರೀಕ್ಷಿತ ಡ್ರಾದೊಂದಿಗೆ ಅಭಿಯಾನ ಆರಂಭಿಸಿದೆ. ಸೋಮವಾರ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ಚೈನೀಸ್ ತೈಪೆ ವಿರುದ್ಧ 34-34 ಅಂಕಗಳಿಂದ ಡ್ರಾಗೆ ತೃಪ್ತಿಪಟ್ಟಿತು.
ಚೆಸ್: ಭಾರತದ ಪುರುಷರ ತಂಡ 4ನೇ ಸುತ್ತಿನಲ್ಲಿ ಕಿರ್ಗಿಸ್ತಾನ ವಿರುದ್ಧ 3.5-0.5 ಅಂತರದಲ್ಲಿ ಜಯಗಳಿಸಿತು. ಸದ್ಯ ತಂಡ 2ನೇ ಸ್ಥಾನದಲ್ಲಿದೆ. ಇದೇ ವೇಳೆ ಮಹಿಳಾ ತಂಡ ಚೀನಾ ವಿರುದ್ಧ 1.5-2.5 ಅಂತರದಲ್ಲಿ ಸೋಲನುಭವಿಸಿತು. ಇದರ ಹೊರತಾಗಿಯೂ 3ನೇ ಸ್ಥಾನದಲ್ಲಿದೆ.
Asian Games 2023: ಸಾತ್ವಿಕ್-ಚಿರಾಗ್ ಶೆಟ್ಟಿ, ಶ್ರೀಕಾಂತ್ ಶುಭಾರಂಭ
ಸ್ಕ್ವ್ಯಾಶ್: ಪುರುಷರ ಸ್ಕ್ವ್ಯಾಶ್ ಸಿಂಗಲ್ಸ್‌ನಲ್ಲಿ ಸೌರವ್ ಘೋಷಲ್ ಕ್ವಾರ್ಟರ್ ಫೈನಲ್‌ಗೇರಿದರು. ಮಹೇಶ್, ಜೋಶ್ನಾ ಸೋತು ಹೊರಬಿದ್ದರು.
ಆರ್ಚರಿ: ಆರ್ಚರಿಯ ತಂಡ ಸ್ಪರ್ಧೆಯಲ್ಲಿ ಭಾರತ ಆರೂ ವಿಭಾಗಗಳಲ್ಲಿ ಕ್ವಾರ್ಟರ್ ಫೈನಲ್‌ಗೇರಿದೆ.
ಬ್ಯಾಡ್ಮಿಂಟನ್: ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್-ಚಿರಾಗ್ ಶೆಟ್ಟಿ ಕ್ವಾರ್ಟರ್‌ಗೆ, ಮಿಶ್ರ ಡಬಲ್ಸ್‌ನಲ್ಲಿ ಕೃಷ್ಣ ಪ್ರಸಾದ್-ತನಿಶಾ ಕ್ರಾಸ್ಟೊ ಪ್ರಿ ಕ್ವಾರ್ಟರ್‌ಗೇರಿದರು. ಪುರುಷರ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್ ಜಯಗಳಿಸಿದರು.
ಭಾರತದ ಇಂದಿನ ಸ್ಪರ್ಧೆ
ಅಥ್ಲೆಟಿಕ್ಸ್: 35 ಮೀ. ವೇಗ ನಡಿಗೆ ಮಿಶ್ರ ತಂಡ(ರಾಮ್, ಮಂಜು), ಪುರುಷರ ಹೈಜಂಪ್(ಜೆಸ್ಸಿ ಸಂದೇಶ್, ಸರ್ವೇಶ್), ಪುರುಷರ ಜಾವೆಲಿನ್(ನೀರಜ್, ಕಿಶೋರ್), ಮಹಿಳೆಯರ ಟ್ರಿಪಲ್‌ಜಂಪ್(ಶೀನಾ), ಮಹಿಳೆಯರ 800 ಮೀ.(ಚಂದಾ, ಹರ್ಮಿಲನ್), ಪುರುಷರ 5000 ಮೀ.(ಗುಲ್ವೀರ್, ಸಾಬ್ಳೆ), ಮಹಿಳಾ ಮತ್ತು ಪುರುಷರ 4*400 ಮೀ. ರಿಲೇ.
ಆರ್ಚರಿ: ಕಾಂಪೌಂಡ್ ಹಾಗೂ ರೀಕರ್ವ್ ಮಿಶ್ರ ತಂಡ ಕ್ವಾರ್ಟರ್.
ಕಬಡ್ಡಿ: ಪುರುಷ, ಮಹಿಳಾ ಗುಂಪು ಹಂತ(ಭಾರತ vs ಥಾಯ್ಲೆಂಡ್)
ಹಾಕಿ: ಪುರುಷರ ಸೆಮಿಫೈನಲ್(ಭಾರತ vs ದ.ಕೊರಿಯಾ)
ಕುಸ್ತಿ: ಪುರುಷರ ವಿವಿಧ ವಿಭಾಗ(ಜ್ಞಾನೇಂದರ್, ನೀರಜ್, ವಿಕಾಸ್, ಸುನಿಲ್)
ಬಾಕ್ಸಿಂಗ್: ಮಹಿಳೆಯರ 75 ಕೆ.ಜಿ.ಫೈನಲ್(ಲವ್ಲೀನಾ).
ಸ್ಕ್ವ್ಯಾಶ್: ಮಿಶ್ರ ಡಬಲ್ಸ್ ಸೆಮೀಸ್(ಅಭಯ್-ಅನಾಹತ್, ದೀಪಿಕಾ-ಹರೀಂದರ್)
ಬ್ಯಾಡ್ಮಿಂಟನ್: ಸಿಂಗಲ್ಸ್ ಪ್ರಿ ಕ್ವಾರ್ಟರ್(ಸಿಂಧು, ಪ್ರಣಯ್, ಶ್ರೀಕಾಂತ್)